ನೀರಿನಲ್ಲಿ ಹೂವುಗಳ ರಂಗೋಲಿ.. ಸುಮಗಳಿಂದಲೇ ಮೂಡಿದ ಮುರಾರಿ..

ನೀರಿನಲ್ಲಿ ಹೂವುಗಳ ರಂಗೋಲಿ.. ಸುಮಗಳಿಂದಲೇ ಮೂಡಿದ ಮುರಾರಿ..

ಸಾಮಾನ್ಯವಾಗಿ ಮನೆ ಮುಂದೆ, ದೇವಾಲಯದ ಮುಂದೆ ರಂಗೋಲಿ ಬಿಡಿಸುವುದನ್ನು ನೋಡಿರುತ್ತೇವೆ. ಅಲ್ಲದೇ ಸಾಕಷ್ಟು ಬಗೆಯ ರಂಗೋಲಿಗಳ ಬಗ್ಗೆ ಕೇಳಿರುತ್ತೇವೆ. ದೇವಾಲಯಗಳಲ್ಲಿ ಒಂದೊಂದು ಪೂಜೆಗೂ ಒಂದೊಂದು ರೀತಿಯ ರಂಗೋಲಿ ಬಿಡಿಸಲಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ  ಎಂದಾದರೂ ನದಿ ನೀರಿನಲ್ಲಿ ಬಿಡಿಸಿದ ರಂಗೋಲಿಯನ್ನು ನೋಡಿದ್ದೀರಾ…? ಇಲ್ಲಾ ಎಂದಾದರೆ ವೈರಲ್ ಆದ ಈ ವಿಡಿಯೋ ನೋಡಿ..

ಇದನ್ನೂ ಓದಿ: ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್ –  ಶಬರಿಮಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಗ್ರೀನ್ ಸಿಗ್ನಲ್

@mpparimal ಎಂಬ ಟ್ವಿಟ್ಟರ್ ಖಾತೆಯಲ್ಲಿ ರಂಗೋಲಿಯ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ರಂಗೋಲಿ ಸಾಮಾನ್ಯ ರಂಗೋಲಿಯಲ್ಲ. ಇದು ಕಲಾವಿದರು ವಿವಿಧ ಹೂವುಗಳಿಂದ ಶ್ರೀಕೃಷ್ಣನ ರೂಪವನ್ನು ನದಿ ನೀರಿನಲ್ಲಿ ಬಿಡಿಸಿದ ರಂಗೋಲಿ. ಗುಲಾಬಿ, ಮಲ್ಲಿಗೆ, ಚೆಂಡು ಹೂ, ಸೇವಂತಿಗೆ ಮುಂತಾದ ಹೂವುಗಳನ್ನು ಬಳಸಿ ರಂಗೋಲಿ ಬಿಡಿಸಲಾಗಿದೆ. ನದಿ ನೀರಿನಲ್ಲಿ ಹೂವುಗಳು  ತೇಲಿ ಹೋಗದಂತೆ ಚೌಕದ ಗಡಿಯನ್ನು ಮಾಡಿ ಅದರ ನಡುವೆ ರಂಗೋಲಿ ಬಿಡಿಸಲಾಗಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಈ ರಂಗೋಲಿಯನ್ನು ಯುಮುನಾ ನದಿಯಲ್ಲಿ ಮಥುರಾ ನಗರದ ಸಂಜಯ್ ಸೋನಿ ಮತ್ತು ಧನೇಶ್ ಚತುರ್ವೇದಿ ಎಂಬವರು ಬಿಡಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಸದ್ಯ ಕಲಾವಿದರಿಬ್ಬರ ಈ ಕೈಚಳಕಕ್ಕೆ ನೆಟ್ಟಿಗರು  ಮನಸೋತಿದ್ದಾರೆ.

suddiyaana