ಗಿರ್ ತಳಿಯ ಹಸುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ಹಾಲು ಮಾರಾಟದ ಜೊತೆಗೆ ಹಲವು ಲಾಭ
ಭಾರತದಲ್ಲಿ ಗೋಪರಂಪರೆಗೆ ವಿಶೇಷ ಸ್ಥಾನಮಾನವಿದೆ. ಮುಕ್ಕೋಟಿ ದೇವತೆಗಳು ಒಂದೆಡೆ ನೆಲೆಸಿರುವ ಕಾಮದೇನು ಎಂದು ಪೂಜಿಸಲಾಗುತ್ತದೆ. ಅದರಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗಿರ್ ಹಸುಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಗಿರ್ ತಳಿಯ ಹಸುಗಳ ವಿಶೇಷತೆ ತುಂಬಾನೇ ಇದೆ.
ಗಿರ್ ತಳಿ ಶುದ್ಧ ದೇಸೀ ತಳಿಯ ಹಸು. ಭಾರತದಲ್ಲಿ ಶ್ರೇಷ್ಠ ತಳಿಯ ಗೋವು ಎಂದೇ ಕರೆಯಲಾಗುತ್ತದೆ. ಗಿರ್ ಜಾನುವಾರು ವಿವಿಧ ಪರಿಸರ ಪರಿಸ್ಥಿತಿಗಳಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಹೊಂದಿವೆ. ಇವು ಕಂದು ಮಿಶ್ರಿತ ಕಡು ಕೆಂಪು ಬಣ್ಣ, ಉದ್ದನೆಯ ಜೋತು ಬಿದ್ದ ಕಿವಿ, ದಪ್ಪನೆಯ ಬಾಗಿದ ಕೋಡುಗಳು, ಎತ್ತರದ ಭುಜ ಮತ್ತು ವಿಶಿಷ್ಟ ರೀತಿಯ ಕೊರಳನ್ನ ಹೊಂದಿರುತ್ತವೆ. ಅಲ್ಲದೆ ಗಿರ್ ನಲ್ಲಿ ಒಂಭತ್ತು ಜಾತಿಗಳಿವೆ. ದಿನನಿತ್ಯ 10 ರಿಂದ 15 ಲೀಟರ್ ಹಾಲು ಕರೆಯುವ ಈ ಹಸುಗಳ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದೆ. ಉತ್ತಮ ಗುಣಮಟ್ಟದ ಹಾಲು ಆಗಿರೋದ್ರಿಂದ ಲೀಟರ್ ಗೆ 80 ರಿಂದ100 ರೂಪಾಯಿಗೆ ಮಾರಾಟವಾಗುತ್ತದೆ. ಹೀಗಾಗಿ ಗಿರ್ ಹಸುವಿನ ಬೆಲೆ 50,00 ರಿಂದ 1.5 ಲಕ್ಷ ರೂಪಾಯಿವರೆಗೂ ಇರುತ್ತದೆ.
ಇದನ್ನೂ ಓದಿ : ವಿಶ್ವದಲ್ಲೇ ದಾಖಲೆ ಮೊತ್ತಕ್ಕೆ ಬೃಹತ್ ಗಾತ್ರದ ಹಸು ಸೇಲ್ – ಹರಾಜಿನಲ್ಲಿ ಬರೋಬ್ಬರಿ ₹35 ಕೋಟಿಗೆ ಮಾರಾಟ
ಇತ್ತೀಚಿಗೆ ಗಿರ್ ತಳಿಯ ಹಸುಗಳು ಹೆಚ್ಚು ಪ್ರಚಲಿತದಲ್ಲಿದ್ದು, ನಗರದಲ್ಲಿ ವಾಸಿಸುವವರೂ ಕೂಡ ಗಿರ್ ತಳಿಯ ಹಸುಗಳನ್ನು ಸಾಕಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅಲ್ಲದೆ ಹೈನುಗಾರಿಕೆ ಅಂದರೆ ಹಾಲಿನ ಮಾರಾಟವೊಂದೇ ಲಾಭದ ಮೂಲವೆಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಕಸದಿಂದ ರಸವೆಂಬಂತೆ ದೇಶಿಯ ಹಸುಗಳ ಸಗಣಿ ಹಾಗೂ ಗೋ ಮೂತ್ರದಿಂದ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಗುಜರಾತಿನ ಗಿರ್ ಎಂಬಲ್ಲಿ ಈ ತಳಿ ಕಂಡು ಬಂದಿದ್ದರಿಂದ ಇವಕ್ಕೆ ಗಿರ್ ತಳಿ ಎಂದೇ ಹೆಸರಿಡಲಾಗಿದೆ. ಆದರೆ ಗಿರ್ ಹೋರಿಗಳು ತೀರಾ ಕಡಿಮೆ. ಅವುಗಳ ನಿರ್ವಹಣೆಗೆ ತಿಂಗಳಿಗೆ 20 ರಿಂದ 25 ಸಾವಿರ ರೂಪಾಯಿ ಬೇಕಾಗುತ್ತದೆ. ಹಸಿ ಮತ್ತು ಒಣ ಮೇವು ತಿನ್ನುವ ಗಿರ್ ಹಸುಗಳು ಒಳ್ಳೆಯ ಆದಾಯದ ಮೂಲಗಳಾಗಿವೆ. ಅಲ್ಲದೆ ಹೋರಿಯ ಒಂದು ಡೋಸ್ ವೀರ್ಯಕ್ಕೆ 1,200 ರೂಪಾಯಿ ಬೆಲೆ ಇದೆ. ಅಪ್ಪದ ದೇಸೀ ತಳಿಯ ಹಸುಗಳಾಗಿದ್ದರೂ 15ರಿಂದ 20 ಲೀಟರ್ ಹಾಲು ಕೊಡುತ್ತವೆ.