ಆನೆ ಗಾತ್ರದ ನಾಲಗೆ.. 180 ಕೆಜಿ ಹೃದಯ – ನೀಲಿ ತಿಮಿಂಗಿಲಗಳ ಬಗ್ಗೆ ನಿಮಗೆಷ್ಟು ಗೊತ್ತು?
ವನ್ಯಜೀವಿಗಳ ಲೋಕದಲ್ಲಿ ಇಂದಿಗೂ ಕೂಡ ನಮಗೆ ಗೊತ್ತಿರದ ಅದೆಷ್ಟೋ ಸಂಗತಿಗಳಿವೆ. ಅದರಲ್ಲೂ ಸಾಗರದಲ್ಲಿ ನಮ್ಮ ಊಹೆಗೂ ನಿಲುಕದಂತಹ ಅನೇಕ ರಹಸ್ಯಗಳಿವೆ. ಅವುಗಳಲ್ಲಿ ನೀಲಿ ತಿಮಿಂಗಿಲ ಕೂಡ ಒಂದು.
ಇದನ್ನೂ ಓದಿ : ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಬ್ಯಾನ್ ಮಾಡಿದ ಯೋಗಿ ಸರ್ಕಾರ!
ವಿಶ್ವದ ಅತಿದೊಡ್ಡ ಮತ್ತು ವಿಶಿಷ್ಟವಾದ ಸಸ್ತನಿ ಅಂದ್ರೆ ಅದು ಅಂಟಾರ್ಕ್ಟಿಕ್ ನೀಲಿ ತಿಮಿಂಗಿಲ. ಸಾಗರವನ್ನು ಆಳುವ ಜೀವಿ ಎಂದೇ ಇದನ್ನ ಕರೆಯಲಾಗುತ್ತೆ. ನೀಲಿ ತಿಮಿಂಗಿಲಗಳು ಅಟ್ಲಾಂಟಿಕ್ ಸಾಗರ, ಉತ್ತರ ಪೆಸಿಫಿಕ್, ದಕ್ಷಿಣ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಕಂಡುಬರುತ್ತವೆ. ತಮ್ಮ ದೈತ್ಯ ದೇಹದಿಂದಲೇ ಜಗತ್ತಿನ ಗಮನ ಸೆಳೆಯುವ ಈ ಸಸ್ತನಿಗಳು ಸಾಮಾನ್ಯವಾಗಿ 150ರಿಂದ 190 ಟನ್ ತೂಕ ಹೊಂದಿವೆ. 33 ಆನೆಗಳನ್ನ ಸೇರಿಸಿದ್ರೆ ಒಂದು ದೈತ್ಯ ತಿಮಿಂಗಿಲಕ್ಕೆ ಸಮ. ಇನ್ನೂ ಹೇಳ್ಬೇಕಂದ್ರೆ ನೀಲಿ ತಿಮಿಂಗಿಲದ ಗಾತ್ರ ಡೈನೋಸಾರ್‌ಗಿಂತ ದೊಡ್ಡದಾಗಿರುತ್ತೆ. ಅತಿದೊಡ್ಡ ಡೈನೋಸಾರ್ ಅಸ್ಥಿಪಂಜರದ ಉದ್ದ 27 ಮೀಟರ್ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಆದ್ರೆ ನೀಲಿ ತಿಮಿಂಗಿಲದ ಗಾತ್ರ 30 ಮೀಟರ್ ಅಥವಾ ಅದಕ್ಕಿಂತಲೂ ಹೆಚ್ಚಾಗಿರುತ್ತೆ. ಹಾಗೇ ತಿಮಿಂಗಿಲಗಳ ನಾಲಗೆ ತೂಕ ಒಂದು ಆನೆಗೆ ಸಮ ಅಂದ್ರೆ ಅದರ ಗಾತ್ರವನ್ನ ನೀವೇ ಊಹೆ ಮಾಡಿಕೊಳ್ಳಿ. ಇನ್ನು ಹೃದಯದ ತೂಕವೇ ಕ್ವಿಂಟಾಲ್ ಮೇಲೆ ಇದೆ. ಬ್ಲೂ ವೇಲ್ ಗಳು 180 ಕೆಜಿಗಿಂತಲೂ ಹೆಚ್ಚು ತೂಕದ ಹೃದಯವನ್ನ ಹೊಂದಿರುತ್ತವೆ. ಇನ್ನು ನೀಲಿ ತಿಮಿಂಗಿಲಗಳು ಸಸ್ತನಿ ಜೀವಿಯಾಗಿದ್ದು, ಜಗತ್ತಿನ ಅತಿ ದೊಡ್ಡ ಪ್ರಾಣಿಯಾಗಿದೆ. ಪ್ರಪಂಚದಲ್ಲೇ ಅತಿ ದೊಡ್ಡ ಧ್ವನಿಯನ್ನು ಕೂಡ ಹೊಂದಿದೆ. ನೀಲಿ ತಿಮಿಂಗಿಲದ ಸದ್ದು ಜೆಟ್ ಇಂಜಿನ್ ಗಿಂತ ಜೋರಾಗಿದ್ದು, ನೂರಾರು ಮೈಲು ದೂರದವರೆಗೂ ಕೇಳಿಸುತ್ತದೆ. ಜೆಟ್ ಇಂಜಿನ್ 140 ಡೆಸಿಬಲ್‌ಗಳಷ್ಟು ಶಬ್ದವನ್ನು ಉತ್ಪಾದಿಸಿದ್ರೆ ತಿಮಿಂಗಿಲವು 188 ಡೆಸಿಬಲ್‌ಗಳವರೆಗೆ ಧ್ವನಿಯನ್ನು ಉತ್ಪಾದಿಸುತ್ತದೆ. ಹಾಗೇ ಬಹಳ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದ್ದು, ಸುಮಾರು 80ರಿಂದ 90 ವರ್ಷಗಳವರೆಗೆ ಜೀವಿಸುತ್ತದೆ. ಈ ಸಸ್ತನಿಗೆ ಕಿವಿರುಗಳು ಇರೋದಿಲ್ಲ. ಆದರೆ ಮನುಷ್ಯರಂತೆ ಶ್ವಾಸಕೋಶವನ್ನ ಹೊಂದಿರುತ್ತೆ. ಹಿಗಾಗೇ ತಿಮಿಂಗಿಲಗಳು 20 ನಿಮಿಷಗಳಿಗೆ ಒಮ್ಮೆಯಾದ್ರೂ ಉಸಿರಾಡಲು ನೀರಿನ ಮೇಲ್ಮೈಗೆ ಬರುತ್ತದೆ.