ಹಲ್ಲುಗಳಿದ್ರೂ ಜಗಿಯಲ್ಲ.. 2 ಗಂಟೆಗಳ ಕಾಲ ಉಸಿರಾಡಲ್ಲ.. – ಈ ಜೀವಿ ಬಗ್ಗೆ ನಿಮಗೆ ಗೊತ್ತಾ?

ಹಲ್ಲುಗಳಿದ್ರೂ ಜಗಿಯಲ್ಲ.. 2 ಗಂಟೆಗಳ ಕಾಲ ಉಸಿರಾಡಲ್ಲ.. – ಈ ಜೀವಿ ಬಗ್ಗೆ ನಿಮಗೆ ಗೊತ್ತಾ?

ಭೂಮಿ ಮೇಲಿರೋ ಎಲ್ಲಾ ಜೀವಿಗೂ ಉಸಿರಾಟ ಬಹಳನೇ ಮುಖ್ಯ. ಕೆಲವೇ ಸೆಕೆಂಡ್​ಗಳ ಕಾಲ ಉಸಿರನ್ನ ಬಿಗಿ ಹಿಡ್ಕೊಂಡ್ರೂ ಜೀವ ಹೋದಂಗೆ ಆಗುತ್ತೆ. ಅಂಥಾದ್ರಲ್ಲಿ ಈ ಜೀವಿ ತನ್ನ ಉಸಿರನ್ನು 2 ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳಬಹುದು. ಈ ಜೀವಿ ಬೇರೆ ಯಾವ್ದೂ ಅಲ್ಲ.. ಮೊಸಳೆ..

ಮೊಸಳೆ ಬಗ್ಗೆ ನೀವೆಲ್ಲಾ ಕೇಳೇ ಇರ್ತೀರಾ.. ಉಭಯವಾಸಿಗಳಾಗಿರುವ ಇವು ಭೂಮಿ ಮೇಲಿನ ಭಯಾನಕ ಜೀವಿಗಳಲ್ಲೊಂದು. ಶಕ್ತಿಯುತ ದೇಹ ಮತ್ತು ಬಲವಾದ ದವಡೆಗಳೊಂದಿಗೆ ಭಯಂಕರವಾಗಿ ಕಾಣುತ್ತದೆ. ತಣ್ಣನೆಯ ರಕ್ತವನ್ನು ಹೊಂದಿರೋದ್ರಿಂದ ಅವುಗಳಿಗೆ ತಮ್ಮದೇ ಆದ ಶಾಖವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಭೂಮಿಯ ಮೇಲೆ 14 ಜಾತಿಯ ಮೊಸಳೆಗಳಿದ್ದು, ಈ ಪೈಕಿ ಚಿಕ್ಕ ಜಾತಿಯದ್ದು ಅಂದ್ರೆ ಅದು ಕುಬ್ಜ ಅಲಿಗೇಟರ್. ಸುಮಾರು 4.9 ಅಡಿಗಳಷ್ಟು ಬೆಳೆಯುತ್ತದೆ. ಇದರ ತೂಕ 18 ರಿಂದ 32 ಕೆಜಿ ವರೆಗೆ ಮಾತ್ರ ಇರುತ್ತದೆ.

ಇದನ್ನೂ ಓದಿ: 100 ಮಂದಿ ಬಿಜೆಪಿ ಅಭ್ಯರ್ಥಿಗಳು ಫೈನಲ್ – ಮಿಡ್‌ನೈಟ್ ಮೀಟಿಂಗ್ ವೇಳೆ ಮೋದಿ ನೀಡಿದ ಸೂಚನೆ ಏನು?

ಇನ್ನು ಅತಿದೊಡ್ಡ ಮೊಸಳೆಗಳು ಉಪ್ಪು ನೀರಿನಲ್ಲಿ ವಾಸಿಸುತ್ತವೆ. 23 ಅಡಿಗಳವರೆಗೆ ಬೆಳೆಯುತ್ತದೆ. ಇವುಗಳು ಒಂದು ಸಾವಿರದಿಂದ 1,200 ಕೆಜಿಗಳವರೆಗೆ ತೂಕ ಹೊಂದಿರುತ್ತವೆ. ಈ ಮೊಸಳೆಗಳನ್ನ ತುಂಬಾನೇ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಸಣ್ಣ ಹಡಗುಗಳು ಮೊಸಳೆಗಳು ವಾಸಿಸುವ ಉಪ್ಪು ನೀರಿನ ಮೂಲಕ ಹಾದುಹೋಗುವುದಿಲ್ಲ. ಇನ್ನು ಬೇಟೆ ವಿಚಾರಕ್ಕೆ ಬಂದ್ರೆ ಮೊಸಳೆಗಳ ದಾಳಿ ಸಿಂಹದ ದಾಳಿಗಿಂತಲೂ ಭಯಾನಕವಾಗಿರುತ್ತದೆ. ಅತ್ಯುತ್ತಮ ಶ್ರವಣ ಮತ್ತು ದೃಷ್ಟಿಯನ್ನು ಹೊಂದಿದ್ದು, ಕತ್ತಲೆಯಲ್ಲೂ ದೊಡ್ಡ ದೊಡ್ಡ ಪ್ರಾಣಿಗಳನ್ನ ಬೇಟೆಯಾಡಬಲ್ಲವು.

ಮೊಸಳೆಗಳು ಬಹಳ ವೇಗವಾಗಿಯೂ ಈಜಬಲ್ಲವು. ಈ ಜೀವಿಗಳಿಗಳಿಗೆ ಇರುವ ಅತಿದೊಡ್ಡ ಶಕ್ತಿ ಅಂದ್ರೆ ತಮ್ಮ ಉಸಿರನ್ನು ಎರಡು ಗಂಟೆಗಳವರೆಗೆ ಹಿಡಿದಿಟ್ಟುಕೊಳ್ಳಬಲ್ಲವು. ಬೇಟೆಗಾಗಿ ಕಾಯುತ್ತಿರುವಾಗ ದೀರ್ಘಾವಧಿಯವರೆಗೆ ನೀರಿನಲ್ಲಿ ಮುಳುಗಿ ಉಳಿಯಲು ಇದು ತುಂಬಾ ಉಪಯುಕ್ತವಾಗಿದೆ. ಇವುಗಳ ಸಂತಾನೋತ್ಪತ್ತಿ ವಿಚಾರದ ಬಗ್ಗೆ ನೋಡೋದಾದ್ರೆ ತಾಯಿ ಮೊಸಳೆ 100 ಮೊಟ್ಟೆಗಳನ್ನ ಇಟ್ರೆ ಅದ್ರಲ್ಲಿ ಕೇವಲ 2% ಮಾತ್ರ ದೊಡ್ಡವಾಗಿ ಬೆಳೆಯುತ್ತವೆ. ಪರಾವಲಂಬನೆ ಹೊಂದಿರೋದ್ರಿಂದ ಅವುಗಳ ಬೆಳವಣಿಗೆ ತೀರಾ ಕಡಿಮೆ. ಇದು ಪ್ರಕೃತಿಯ ನಿಯಮವಾಗಿದ್ದು ಬಹುಶಃ ಅವುಗಳ ಸಂಖ್ಯೆಯನ್ನು ಹತೋಟಿಯಲ್ಲಿಡಲು ಹೀಗೆ ಮಾಡಿರಬಹುದು. ಅಲ್ದೇ ಇವು ಇವು ಯಾವತ್ತೂ ಕೂಡ ಮಾಂಸವನ್ನು ಅಗೆದು ತಿನ್ನೋದಿಲ್ಲ. 68 ಹಲ್ಲುಗಳಿದ್ದರೂ ಕೂಡ ಅದರ ಹಲ್ಲುಗಳಿಂದ ಮಾಂಸವನ್ನು ಜಗಿಯಲಾಗುವುದಿಲ್ಲ. ಕೀಳಬಹುದು ಅಷ್ಟೇ. ಬಹುತೇಕ ಮಾಂಸಹಾರಿ ಪ್ರಾಣಿಗಳಿಗೆ ಕೋರೆ ಹಲ್ಲುಗಳು ಮಾತ್ರ ಇರುತ್ತವೆ. ದವಡೆ ಹಲ್ಲುಗಳಿರುವುದಿಲ್ಲ. ಆದ್ದರಿಂದ ಮಾಂಸವನ್ನು ಹಾಗೆಯೇ ನುಂಗುತ್ತವೆ, ಮೂಳೆಗಳನ್ನೂ ಹಾಗೆಯೇ ನುಂಗಬೇಕು. ಅಂತಹ ಮೂಳೆಯನ್ನು ದೇಹದಲ್ಲಿರುವ ಲ್ಯಾಕ್ಟಿಕ್ ಆಮ್ಲ ಕರಗಿಸುತ್ತದೆ. ತನ್ನ ಊಟವನ್ನು ಕರಗಿಸುವುದಕ್ಕೆ ಕೆಲವು ಪಕ್ಷಿಗಳು ಚಿಕ್ಕ ಚಿಕ್ಕ ಕಲ್ಲುಗಳನ್ನು ನುಂಗುವ ಹಾಗೆ ಮೊಸಳೆಗಳೂ ಕೂಡ ಚಿಕ್ಕ ಚಿಕ್ಕ ಕಲ್ಲುಗಳನ್ನು ನುಂಗುತ್ತವೆ.

ಇನ್ನು ಮೊಸಳೆಯ ಹಲ್ಲುಗಳು ಆಗ್ಗಾಗ್ಗೆ ಬಿದ್ದುಹೋಗುತ್ತವೆ. ಪುನಃ ಅದೇ ಜಾಗದಲ್ಲಿ ಬೆಳೆಯುತ್ತವೆ. ವಯಸ್ಸಾದಾಗ ಈ ಹಲ್ಲುಗಳು ಪುನಃ ಹುಟ್ಟದೇ ಇದ್ದರೆ ಇವುಗಳ ಜೀವನ ಬಹಳ ಕಷ್ಟ. ವಯಸ್ಸಾದಂತೆಲ್ಲ ದೇಹದ ಭಾರ ಹೆಚ್ಚುತ್ತಾ ಹೋಗುತ್ತದೆ. ಆಗ ಬೇಟೆಯಾಡಲು ಸಾಧ್ಯವಾಗದೇ ಸಾವನ್ನಪ್ಪುತ್ತವೆ.

Shwetha M