ಜು. 1 ರಿಂದ ಅಮರನಾಥ ಯಾತ್ರೆ ಆರಂಭ – ಯಾತ್ರಿಗಳ ಭದ್ರತೆಗೆ ಡ್ರೋನ್ ಕಣ್ಗಾವಲು
ಶ್ರೀನಗರ: ಹಿಂದುಗಳ ಪವಿತ್ರ ಅಮರನಾಥ ಯಾತ್ರೆ ಶನಿವಾರ (ಜು.1) ದಿಂದ ಆರಂಭವಾಗಲಿದೆ. ಅಮರನಾಥ ಯಾತ್ರೆಗೆ ಈಗಾಗಲೇ ಬರೋಬ್ಬರಿ 3 ಲಕ್ಷ ಯಾತ್ರಿಗಳು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮೆಕ್ಸಿಕೋದಲ್ಲಿ ಹೀಟ್‌ವೇವ್‌ಗೆ 100ಕ್ಕೂ ಹೆಚ್ಚು ಮಂದಿ ಸಾವು
ಸುಮಾರು 62 ದಿನಗಳ ಕಾಲ ಈ ಯಾತ್ರೆ ಇರಲಿದೆ. ಯಾತ್ರಿಕರ ಮೊದಲ ತಂಡವು ಜೂ.30ರಂದು ಜಮ್ಮುವಿನಿಂದ ತೆರಳಲಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.10ರಷ್ಟು ಹೆಚ್ಚು ಮಂದಿ ಯಾತ್ರಿಗಳು ಯಾತ್ರೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಸ್ಥಳದಲ್ಲೂ ನೋಂದಾವಣಿಗೆ ಅವಕಾಶ ಕಲ್ಪಿಸಲಾಗಿದೆ.
ಯಾತ್ರೆಯುದ್ದಕ್ಕೂ ಜನರಿಗೆ ಅನುಕೂಲವಾಗಲು ಹಾದಿ ಸುಗಮಗೊಳಿಸಲಾಗಿದ್ದು, ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹಿಡಿಕೆ ಕಂಬಿಗಳನ್ನು ಅಳವಡಿಸಲಾಗಿದೆ. ಇಂಟರ್‌ನೆಟ್ ಎಲ್ಲ ಕಡೆಗಳಲ್ಲೂ ಸಿಗುವಂತೆ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಜನರ ಭದ್ರತೆಯ ಆದ್ಯ ಕರ್ತವ್ಯವಾಗಿರುವ ಕಾರಣ ಚಾರಣದುದ್ದಕ್ಕೂ ಭದ್ರತಾ ಸಿಬ್ಬಂದಿ, ಡ್ರೋನ್‌ಗಳನ್ನು ನಿಯೋಜನ ಮಾಡಲಾಗಿದೆ. ಇದನ್ನು ಜಮ್ಮು ಕಾಶ್ಮೀರ ಪೊಲೀಸ್ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ ಎಂದು ಅಮರನಾಥ ಯಾತ್ರೆ ಮಂಡಳಿ ಮುಖ್ಯಸ್ಥ ಮಂದೀಪ್ ಕುಮಾರ್ ಬಂಢಾರಿ ಮಾಹಿತಿ ನೀಡಿದ್ದಾರೆ.