ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ – ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆ ಸ್ಥಗಿತ

ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ – ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆ ಸ್ಥಗಿತ

ಜಮ್ಮು-ಕಾಶ್ಮೀರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಪ್ರತಿಕೂಲ ಹವಾಮಾನದಿಂದಾಗಿ ಅಮರನಾಥ ಯಾತ್ರೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಬಾಲ್ಟಾಲ್ ಮತ್ತು ಪಹಲ್ಗಾಮ್ ಅವಳಿ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪವಿತ್ರ ಗುಹಾ ದೇಗುಲದ ಕಡೆಗೆ ಯಾವುದೇ ಯಾತ್ರಿಕರಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜುಲೈ 1 ರಿಂದ ಅಮರನಾಥ ಯಾತ್ರೆ ಆರಂಭ – ಹಲ್ವಾ, ದೋಸೆ, ಪೂರಿಗಿಲ್ಲ ಅವಕಾಶ!

ರಾಂಬನ್ ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ, ಜಿಲ್ಲೆಯ ಚಂದರಕೋಟೆ ಪ್ರದೇಶದಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಜಮ್ಮುವಿನ ಅಧಿಕಾರಿಗಳ ಪ್ರಕಾರ, ಪಹಲ್ಗಾಮ್ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದ 4,600 ಯಾತ್ರಾರ್ಥಿಗಳ ತಂಡವನ್ನು ಚಂದರ್ಕೋರ್ಟ್‌ನಲ್ಲಿ ನಿಲ್ಲಿಸಲಾಗಿದ್ದು, ಬಲ್ಟಾಲ್ ಶಿಬಿರಕ್ಕೆ ಪ್ರಯಾಣಿಸುವ 2,410 ಭಕ್ತರ ಮತ್ತೊಂದು ಗುಂಪನ್ನು ಮುಂದುವರಿಸಲು ಅನುಮತಿಸಲಾಗಿದೆ. 17,000 ಕ್ಕೂ ಹೆಚ್ಚು ಯಾತ್ರಿಗಳು ಗುರುವಾರ ಅಮರನಾಥ ಪವಿತ್ರ ಗುಹೆಯಲ್ಲಿ ತಮ್ಮ ನಮನ ಸಲ್ಲಿಸಿದ್ದಾರೆ. 3,200 ಯಾತ್ರಾರ್ಥಿಗಳನ್ನು ನುನ್ವಾನ್ ಪಹಲ್ಗಾಮ್ ಶಿಬಿರದಲ್ಲಿ ಮತ್ತು 4,000 ಯಾತ್ರಾರ್ಥಿಗಳನ್ನು ಬಾಲ್ಟಾಲ್ ಬೇಸ್ ಕ್ಯಾಂಪ್ನಲ್ಲಿ ಆಶ್ರಯ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ .ಹವಾಮಾನ ಸುಧಾರಿಸಿದ ನಂತರ ಯಾತ್ರೆ ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 80,000ಕ್ಕೂ ಹೆಚ್ಚು ಭಕ್ತರು ಯಾತ್ರೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana