ಲವ್‌ ಪ್ರಪೋಸ್, ಲಿಪ್‌ಲಾಕ್… ವಾರದೊಳಗೆ ಹೆಬ್ಬುಲಿ ಚಿತ್ರದ ನಾಯಕಿ ಮದುವೆ – ಜಗತ್ ದೇಸಾಯಿ ಕೈಹಿಡಿದ ಅಮಲಾ ಪೌಲ್

ಲವ್‌ ಪ್ರಪೋಸ್, ಲಿಪ್‌ಲಾಕ್… ವಾರದೊಳಗೆ ಹೆಬ್ಬುಲಿ ಚಿತ್ರದ ನಾಯಕಿ ಮದುವೆ – ಜಗತ್ ದೇಸಾಯಿ ಕೈಹಿಡಿದ ಅಮಲಾ ಪೌಲ್

ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಸದ್ದಿಲ್ಲದೇ 2ನೇ ಮದುವೆಯಾಗಿದ್ದಾರೆ. ಹತ್ತು ದಿನಗಳ ಹಿಂದೆಯಷ್ಟೇ ಪ್ರೀತಿಸುತ್ತಿದ್ದ ಹುಡುಗ ಲವ್ ಪ್ರಪೋಸ್ ಮಾಡಿದ್ದ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದಾದ ಕೇಲವ ಒಂದೂವರೆ ವಾರಗಳ ಅಂತರದಲ್ಲಿ ಮೆಚ್ಚಿದ ಹುಡುಗನ ಜೊತೆ ಮದುವೆ ಆಗಿದ್ದಾರೆ.

ಇದನ್ನೂ ಓದಿ: ಲಿಪ್‌ಲಾಕ್ ಮಾಡ್ತಾ ಉಂಗುರ ತೊಡಿಸಿಕೊಂಡ ನಟಿ – ಅಮಲಾ ಪೌಲ್ ಎರಡನೇ ಮದುವೆಗೆ ಭರ್ಜರಿ ಸಿದ್ಧತೆ

ನವೆಂಬರ್ 5, ಭಾನುವಾರ ಅಮಲಾಪೌಲ್ ಎರಡನೇ ಮದುವೆಯಾಗಿದ್ದಾರೆ. ಕೊಚ್ಚಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಅಮಲಾ ಪೌಲ್ ಅವರು ಜಗತ್ ದೇಸಾಯಿ ಅವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಮಲಾ ಪೌಲ್ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿದ್ದರು. ನೃತ್ಯಮಾಡುತ್ತಾ, ಅಮಲಾ ಕೈಗೆ ಉಂಗುರ ತೊಡಿಸಿದ್ದರು. ಆಗ ಅಮಲಾಪೌಲ್ ಕೂಡಾ ಜಗತ್ ದೇಸಾಯಿ ಅವರಿಗೆ ಮುತ್ತಿಡುತ್ತಾ, ಲಿಪ್‌ಲಾಕ್ ಮಾಡುತ್ತಾ ಉಂಗುರು ತೊಡಿಸಿಕೊಂಡಿದ್ದರು. ಲಿಪ್‌ಲಾಕ್ ಮೂಲಕ ಬಾಯ್ ಫ್ರೆಂಡ್ ಮಾಡಿರೋ ಪ್ರಪೋಸ್‌ ಗೆ ಒಪ್ಪಿಕೊಂಡಿದ್ದರು. ಜಗತ್ ದೇಸಾಯಿ ಎನ್ನುವವರ ಜೊತೆ ಅಮಲಾ ಡೇಟಿಂಗ್ ನಲ್ಲಿದ್ದರು. ನಂತರ ಇಬ್ಬರೂ ಕೂಡಾ ಮದುವೆಯಾಗುವುದಾಗಿ ಘೋಷಿಸಿಕೊಂಡಿದ್ದರು. ಇದೆಲ್ಲಾ ನಡೆದು ಕೇವಲ ಒಂದೂವರೆ ವಾರವಾಗಿತ್ತು. ದಿಢೀರ್ ಅಂತಾ ಅಮಲಾ ಪೌಲ್ ಜಗತ್ ದೇಸಾಯಿ ಜೊತೆ ಮದುವೆಯಾಗಿದ್ದಾರೆ.

ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು. ಆದರೂ, ಅವರ ಡಿಮಾಂಡ್ ಕಡಿಮೆ ಆಗಿರಲಿಲ್ಲ. ಒಂದಲ್ಲ ಒಂದು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು. ಆನಂತರ ಈ ನಟಿಯ ಹೆಸರು ಹಲವಾರು ನಟರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಯಾವತ್ತೂ ಅಮಲಾ ಉತ್ತರಿಸಲಿಲ್ಲ. ಈಗ ಮದುವೆಯಾಗಿರುವ ಜಗತ್ ದೇಸಾಯಿ ಬ್ಯುಸಿನೆಸ್ ಮ್ಯಾನ್ ಎನ್ನಲಾಗಿದೆ.

Sulekha