ಟೊಮ್ಯಾಟೊ, ಬೀನ್ಸ್, ಕ್ಯಾರೆಟ್ ಮತ್ತಷ್ಟು ದುಬಾರಿ – ತರಕಾರಿ ಜೊತೆ ಮೊಟ್ಟೆ, ಮಾಂಸದ ಬೆಲೆಯೂ ಏರಿಕೆ

ಟೊಮ್ಯಾಟೊ, ಬೀನ್ಸ್, ಕ್ಯಾರೆಟ್ ಮತ್ತಷ್ಟು ದುಬಾರಿ – ತರಕಾರಿ ಜೊತೆ ಮೊಟ್ಟೆ, ಮಾಂಸದ ಬೆಲೆಯೂ ಏರಿಕೆ

ತಿಂಡಿ ಮಾಡಲು ಆಗುತ್ತಿಲ್ಲ. ಅಡುಗೆ ಮಾಡೋಕೂ ಲೆಕ್ಕಾಚಾರ. ಯಾಕಂದರೆ ಕಳೆದ ಕೆಲವು ದಿನಗಳಿಂದ ತರಕಾರಿಗಳ ದರದಲ್ಲಿ ಗಣನೀಯ ಏರಿಕೆ ಕಂಡಿದೆ. ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ದರ ಹೆಚ್ಚಳವಾಗಿದೆ. ಇದರ ನಡುವೆ ಮಾಂಸದ ದರವೂ ಏರಿಕೆ ಕಂಡಿದೆ. ಇದರಿಂದಾಗಿ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.

ಇದನ್ನೂ ಓದಿ : ಬರಿದಾಗಿದೆ ಜೀವನದಿ ಕಾವೇರಿಯ ಒಡಲು – ಮಳೆ ಬಾರದೇ ಇದ್ದರೆ ರಾಜಧಾನಿ ಬೆಂಗಳೂರಲ್ಲೂ ಜಲಕ್ಷಾಮ..!

ಕಳೆದ ವಾರದಿಂದ ತರಕಾರಿಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ ವಾರಕ್ಕಿಂತ ಕೆಜಿ ಗೆ 20ರಿಂದ 30 ದರ ಹೆಚ್ಚಳವಾಗಿದೆ. ಟೊಮ್ಯಾಟೊ ರೇಟ್ ಕೇಳಿದ್ರೆ ಸದ್ಯಕ್ಕೆ ಟೊಮ್ಯಾಟೊ ‌ಬಾತ್ ಮಾಡೋದೇ ಬೇಡಪ್ಪ ಅನ್ನೋ ಸ್ಥಿತಿಗೆ ಬಂದಿದೆ. ಟೊಮೆಟೋ ದರ 100 ರ ಗಡಿ ದಾಟಿದೆ. ಇದೆಲ್ಲದರ ನಡುವೆ ಟೊಮ್ಯಾಟೊ ರೇಟ್ ಗೆ ಟಕರ್ ಕೊಟ್ತಿದೆ ಬೀನ್ಸ್ ಬೆಲೆ. ರೇಸ್ ಗೆ ಬಿದ್ದವರಂತೆ ಬೆಲೆ ಏರಿಕೆಯಲ್ಲಿ ತಾ ಮುಂದು ನೀ ಮುಂದು ಎಂದು ಏರಿಕೆ ಕಾಣ್ತಿದೆ ಬೀನ್ಸ್ ಹಾಗೂ ಕ್ಯಾರೇಟ್ ರೇಟ್ ದರ. ಬೀನ್ಸ್ ಕೆಜಿ ಗೆ 120 ರೂಪಾಯಿ ಬೆಲೆ ಏರಿಸಿಕೊಂಡಿದೆ. 10 ದಿನದಿಂದ ಏರಿಕೆಯ ಕ್ರಮದಲ್ಲೇ ಸಾಗುತ್ತಿದೆ ಟೊಮ್ಯಾಟೊ ಹಾಗೂ ತರಕಾರಿ ಬೆಲೆ. ಇದರ ನಡುವೆ ಮಾಂಸ ದರವೂ ಏರಿಕೆ ಕಂಡಿದೆ. ಮೀನುಗಾರಿಕೆಗೆ ನಿಷೇಧ ಇರುವ ಹಿನ್ನೆಲೆ ಇತರ ಮಾಂಸಗಳ ಬೆಲೆ ಗಣನೀಯ ಏರಿಕೆಯಾಗಿದೆ.

ತರಕಾರಿ ಬಲು ದುಬಾರಿ ( 1 ಕೆಜಿಗೆ)

ಟೊಮ್ಯಾಟೊ  – 110 ರೂಪಾಯಿ

ಬೀನ್ಸ್ – 120 ರೂಪಾಯಿ

ಬೀನ್ಸ್ ಕಾಳು‌-110 ರೂಪಾಯಿ

ಕ್ಯಾರೇಟ್ – 110 ರೂಪಾಯಿ

ಹಸಿ ಮೆಣಸಿನ ಕಾಯಿ- 170 ರೂಪಾಯಿ

ಹಸಿರು ಬಟಾಣಿ – 190 ರೂಪಾಯಿ

ಹಾಗಲ ಕಾಯಿ- 98 ರೂಪಾಯಿ

ಬದನೆಕಾಯಿ- 85 ರೂಪಾಯಿ

ಚಪ್ಪರದ ಅವರೆ – 86 ರೂಪಾಯಿ

ಗೋರೆಕಾಯಿ – 80  ರೂಪಾಯಿ

ದಪ್ಪ ಮೆಣಸಿನಕಾಯಿ – 84 ರೂಪಾಯಿ

ಗೆಡ್ಡೆ ಕೋಸು – 90  ರೂಪಾಯಿ

ಸೋರೆ ಕಾಯಿ‌- 75 ರೂಪಾಯಿ

ಹೀಗೆ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದ್ದು ಜನ ಕಂಗಾಲಾಗಿದ್ದಾರೆ. ಮಳೆ ಕಡಿಮೆಯಾಗಿ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲದ ಕಾರಣ ಉತ್ತರ ಪ್ರದೇಶ, ಮಹಾರಾಷ್ಟ್ರ ಒಳಗೊಂಡು ಹೊರರಾಜ್ಯದಿಂದ ಟೊಮ್ಯಾಟೋ, ಕ್ಯಾರೆಟ್‌ ಮೊದಲಾದ ಕಾಯಿಪಲ್ಯೆ ಖರೀದಿಸಲಾಗುತ್ತಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ. ಮತ್ತೊಂದೆಡೆ ಮಳೆಗಾಲವಾದ್ದರಿಂದ ಸಮುದ್ರದ ಅಲೆಗಳ ಅಬ್ಬರ ಜೋರಾಗಿರುತ್ತದೆ. ಜತೆಗೆ ಮೀನುಗಳ ಸಂತಾನೋತ್ಪತ್ತಿ ಸಂದರ್ಭವಾದ್ದರಿಂದ ಜೂನ್‌ನಿಂದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೀನುಗಳ ಲಭ್ಯತೆ ಕಡಿಮೆಯಾಗಿದ್ದು, ಚಿಕನ್‌, ಮಟನ್‌ ದರ ಕೂಡ ಏರಿಕೆಯಾಗಿದೆ. ಚಿಕನ್‌ ಕೆಜಿಗೆ 300, ಮಟನ್‌ 800 ರೂಪಾಯಿಗೆ ತಲುಪಿದೆ.

suddiyaana