ಸಹೋದರರ ಜೊತೆ ಸೇರಿ ತನ್ನ ಮನೆಯಲ್ಲೇ ಕದ್ದಳು – ಖತರ್ನಾಕ್‌ ಕಳ್ಳಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?  

ಸಹೋದರರ ಜೊತೆ ಸೇರಿ ತನ್ನ ಮನೆಯಲ್ಲೇ ಕದ್ದಳು – ಖತರ್ನಾಕ್‌ ಕಳ್ಳಿ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?  

ಇಲ್ಲೊಬ್ಬಳು ಮಹಿಳೆ ತನ್ನ ಸಹೋದರರ ಜೊತೆ ಸೇರಿ ತನ್ನ ಮನೆಯಲ್ಲೇ ಕಳ್ಳತನ ಮಾಡಿದ್ದಾಳೆ. ಇದೀಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.

ಹೈದರಾಬಾದ್​ನ ಮಿರ್ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಒಸ್ಮಾನ್‌ಪುರದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಫರೀದಾ ಬೇಗಂ (45) ಎಂಬಾಕೆ ಸಾಲ ತೀರಿಸುವ ಉದ್ದೇಶದಿಂದ ತನ್ನ ಸಹೋದರ ಮಹಮ್ಮದ್ ಸಮೀರ್ ಮತ್ತು ಸಹೋದರಿ ಫರ್ಹೀನ್ ಬೇಗಂ ಜತೆಗೆ ಚಿನ್ನಾಭರಣಗಳನ್ನು ಕಳವು ಮಾಡಿ ತಪ್ಪಿಸಿಕೊಂಡಿದ್ದಳು. ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೃತಪಟ್ಟಿದ್ದಾಳೆ ಎಂದುಕೊಂಡು ಶವಕ್ಕಾಗಿ 3 ದಿನದಿಂದ ಹುಡುಕಾಟ – ನನ್ನನ್ನು ಹುಡುಕಬೇಡಿ ಅಂತಾ ಬಂತು ಫೋನ್‌ ಕಾಲ್!‌  

ಘಟನೆ ಬಯಲಾಗಿದ್ದು ಹೇಗೆ?

ಫರೀದಾ ಬೇಗಂ ಕಳ್ಳತನ ಮಾಡುವ ಮೊದಲು, ಈಕೆ ತನ್ನ ಪತಿ ಜಹೂರ್‌ಗೆ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಳು. ಆಕೆಯ ಪತಿ ಜಹೂರ್ ಕೂಡ ಕೆಲಸದ ನಿಮಿತ್ತ ಬಾಗಿಲು ಹಾಕಿಕೊಂಡು ಹೊರಗೆ ಹೋಗಿದ್ದಾನೆ. ಈ ವೇಳೆ ತನ್ನ ಸಹೋದರರ ಜತೆಗೆ ಸ್ವಂತ ಮನೆಗೆ ನುಗ್ಗಿದ ಫರೀದಾ ಬೇಗಂ ಬೀಗವನ್ನು ಒಡೆದು ನುಗ್ಗಿ ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ಆಕೆಯ ಪತಿ ಜಹೂರ್‌ ಕೆಲಸ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಸಾಲ ಮಾಡಿದ್ದೇಕೆ?

ಮಹಿಳೆ ತನ್ನದೇ ಕೆಲವು ಚಿನ್ನಾಭರಣಗಳನ್ನು ಅಡವಿಟ್ಟು ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಆನ್‌ಲೈನ್ ಮೂಲಕ ಸಾಲವನ್ನು ಪಡೆದಿದ್ದಳು. ಸಾಲ ಮಾಡಿದ್ದು, ಮತ್ತು ಚಿನ್ನ ಅಡವಿಟ್ಟ ವಿಚಾರ ಪತಿಗೆ ತಿಳಿದಿರಲಿಲ್ಲ. ಅವನು ಅದನ್ನು ಕೇಳುತ್ತಾನೆ ಎಂಬ ಭಯದಿಂದ ಅವಳು ಮನೆಯಲ್ಲಿ ಇರುವ ಚಿನ್ನವನ್ನು ಕದ್ದು ಮಾರಾಟ ಮಾಡಿದ್ದಾಳೆ ಎಂದು ಪೊಲೀಸರು ವಿಚಾರಣೆ ನಡೆಸಿದ ವೇಳೆ ಬಾಯಿಬಿಟ್ಟಿದ್ದಾಳೆ.

Shwetha M