ಅಲ್ಲು ಅರ್ಜುನ್ ಮನೆಗೆ ಅತಿಥಿಯಾಗಿ ಬಂದ ಮಿಸ್ಟರ್ ಪರ್ಫೆಕ್ಟ್ – ಆಮೀರ್ ಖಾನ್ ಭೇಟಿಗೆ ಕಾರಣ ಏನು

ಅಲ್ಲು ಅರ್ಜುನ್ ಮನೆಗೆ ಅತಿಥಿಯಾಗಿ ಬಂದ ಮಿಸ್ಟರ್ ಪರ್ಫೆಕ್ಟ್ – ಆಮೀರ್ ಖಾನ್ ಭೇಟಿಗೆ ಕಾರಣ ಏನು

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮನೆಗೆ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಭೇಟಿ ನೀಡಿದ್ದಾರೆ. ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್ ಮನೆಗೆ ಆಮೀರ್ ಖಾನ್ ಆಗಮಿಸಿದ್ದರು. ಹೈದರಾಬಾದ್ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಆಮೀರ್ ಖಾನ್ ಅವರನ್ನು ಏರ್ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಅಲ್ಲು ಅರ್ಜುನ್ ಅವರ ಕಾರಿನಲ್ಲಿ ತೆರಳಿದರು. ಭಾರೀ ಭದ್ರತೆಯೊಂದಿಗೆ ಪಾರ್ಕಿಂಗ್ ಕಡೆ ಆಮೀರ್ ಖಾನ್ ತೆರಳಿರುವ ಫೋಟೋ ಹರಿದಾಡುತ್ತಿದೆ.

ಇದನ್ನೂ ಓದಿ:  ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಜಾನ್ವಿ ಕಪೂರ್ – ಬಾಲಿವುಡ್ ಬೆಡಗಿಯ ಫಸ್ಟ್ ಲುಕ್ ರಿಲೀಸ್

ಲಾಲ್ ಸಿಂಗ್ ಚಡ್ಡಾ ಬಳಿಕ  ನಟನೆಯಿಂದ ಬ್ರೇಕ್ ಪಡೆದಿರುವ ಆಮೀರ್ ಖಾನ್ ಇದೀಗ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಆಮೀರ್ ಖಾನ್ ಹೈದರಾಬಾದ್‌ಗೆ ಬಂದಿದ್ದು ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದಾರೆ. ಆಮೀರ್ ಕಪ್ಪು ಟೀ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್ ಜೀನ್ಸ್ ಧರಿಸಿದ್ದರು. ವರದಿಗಳ ಪ್ರಕಾರ, ಜುಬಿಲಿ ಹಿಲ್ಸ್  ನಲ್ಲಿರುವ ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಅಮೀರ್ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆಮೀರ್ ಖಾನ್ ಮುಂಬೈನಿಂದ ನೇರವಾಗಿ ಅಲ್ಲು ಅರ್ಜುನ್ ಮನೆಗೆ ಬಂದ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಆಮೀರ್ ಖಾನ್ ಇದುವರೆಗೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಆಮೀರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ದಿಢೀರ್ ಅಂತ ಟಾಲಿವುಡ್ ಕಡೆ ಬಂದಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಸೌತ್ ಸ್ಟಾರ್ ಗಳ ಜೊತೆ ಸಿನಿಮಾ ಮಾಡುತ್ತಾರಾ ಅಥವಾ ಸೌತ್ ಸ್ಟಾರ್ರ್ಸ್ ಸಿನಿಮಾಗೆ ಬಂಡವಾಳ ಹೂಡುತ್ತಾರಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ 2024ಕ್ಕೆ ರಿಲೀಸ್ ಆಗಲಿದೆ.

suddiyaana