‘ಪುಷ್ಪಾ 2’ 1,000 ಕೋಟಿ ರೂ. ಗಳಿಸಿದ್ರೆ ಅಲ್ಲು ಅರ್ಜುನ್ ಗೆ ಸಿಗೋ ಸಂಭಾವನೆ ಇಷ್ಟೊಂದಾ!  – ಟಾಲಿವುಡ್‌ ಲೆಕ್ಕಾಚಾರ ಏನು?

‘ಪುಷ್ಪಾ 2’ 1,000 ಕೋಟಿ ರೂ. ಗಳಿಸಿದ್ರೆ ಅಲ್ಲು ಅರ್ಜುನ್ ಗೆ ಸಿಗೋ ಸಂಭಾವನೆ ಇಷ್ಟೊಂದಾ!  – ಟಾಲಿವುಡ್‌ ಲೆಕ್ಕಾಚಾರ ಏನು?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ ‘ಪುಷ್ಪಾ’ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಮಟ್ಟಿಗೆ ಸದ್ದು ಮಾಡಬಹುದು ಎಂಬ ನಿರೀಕ್ಷೆನೇ ಇರಲಿಲ್ಲ. ಕೇವಲ ಹಿಂದಿ ಬೆಲ್ಟ್‌ನಲ್ಲೇ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಯಶಸ್ಸಿನ ಬೆನ್ನತ್ತಿರೋ ಅಲ್ಲು ಅರ್ಜುನ್ ‘ ಪುಷ್ಪಾ 2’ನಲ್ಲಿ ತೊಡಗಿಸಿಕೊಂಡಿದ್ದಾರೆ. ‘ ಪುಷ್ಪಾ ‘ ಸಕ್ಸಸ್ ಬಳಿಕ ನಿರ್ದೇಶಕ ಸುಕುಮಾರ್ ಕೂಡ ಸ್ಕ್ರಿಪ್ಟ್ ಅನ್ನೇ ಬದಲಾಯಿಸಿದ್ದಾರೆ. ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2’ ಸಿನಿಮಾ ದಾಖಲೆಯನ್ನು ಮೀರಿಸಬೇಕು ಅಂತಾ ಪಣ ತೊಟ್ಟು ನಿಂತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ‘ ಪುಷ್ಪಾ’ ಹಣೆಬರಹ ಅದೇನಾಗುತ್ತೋ  ಗೊತ್ತಿಲ್ಲ.. ಆದರೆ, ಟಾಲಿವುಡ್‌ನಲ್ಲಿ ಲೆಕ್ಕ ಹಾಕುತ್ತಿರೋದು ನೋಡಿ ಇಡೀ ಭಾರತೀಯ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಅದಕ್ಕೆ ಕಾರಣ ಅಲ್ಲು ಅರ್ಜುನ್‌ ಪಡೆಯುವ ಸಂಭಾವನೆ.

ಇದನ್ನೂ ಓದಿ: ಡ್ರೋನ್‌ ಪ್ರತಾಪ್‌ ಅಸಲಿ ಆಟ ಶುರು! ಬಿಕ್ಕಿಬಿಕ್ಕಿ ಅತ್ತ ನಮ್ರತಾ! – ಡೊಡ್ಮನೆಯಲ್ಲಿ ಆಗಿದ್ದೇನು?

ಹೌದು, ‘ ಪುಷ್ಪಾ’ ಕ್ರೇಜ್ ಏನು ಕಮ್ಮಿ ಇರಲಿಲ್ಲ. ಅಲ್ಲು ಅರ್ಜುನ್ ಮ್ಯಾನರೀಸಂಗೆ ಭಾರತ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಅಲ್ಲೂ ಅರ್ಜುನ್‌ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನ್ನುವ ಬಿರುದಿಗೆ ಪಾತ್ರರಾಗಲಿದ್ದಾರೆ. ರಜನಿಕಾಂತ್ ಪಡೆದ ಸಂಭಾವನೆ ಮೀರಿಸಿ ಅಲ್ಲು ಖಜಾನೆ ತುಂಬಿಸಿಕೊಳ್ಳಲು ನಿಂತಿದ್ದಾರೆ.  ಈ ಚಿತ್ರಕ್ಕೆ ಬರೋಬ್ಬರಿ ಖಜಾನೆ ತುಂಬಿಸಿಕೊಳ್ಳುತ್ತಿರುವ ಮೊತ್ತ ಬರೋಬ್ಬರಿ 330 ಕೋಟಿ ರೂಪಾಯಿ.

‘ ಪುಷ್ಪಾ 2’ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂಪಾಯಿಯನ್ನು ನಿರಾಸವಾಗಿ ಬಾಚಿಕೊಳ್ಳುತ್ತೆ ಅನ್ನೋದು ಟಾಲಿವುಡ್ ಮಂದಿ ಲೆಕ್ಕಚಾರ ಹಾಕಿದ್ದಾರೆ.  ಟಾಲಿವುಡ್ ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಈ ಸಿನಿಮಾಗೆ ಸಂಭಾವನೆ ಪಡೆದಿಲ್ಲ. ಬದಲಾಗಿ, ಸಿನಿಮಾದಿಂದ ಆದ ಕಲೆಕ್ಷನ್‌ನಲ್ಲಿ ಶೇ.33 ಪರ್ಸೆಂಟ್ ಹಣವನ್ನು ಸಂಭಾವನೆ ರೂಪದಲ್ಲಿ ನೀಡುವಂತೆ ಒಡಂಬಡಿಕೆ ಆಗಿದೆ ಅಂತಾ ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ, ಅರ್ಜುನ್ ಅರ್ಜುನ್‌ಗೆ 333 ಕೋಟಿ ರೂಪಾಯಿ ಸಂಭಾವನೆ ರೂಪದಲ್ಲಿ ಬರುತ್ತೆ.

ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಡಾಲಿ ಧನಂಜಯ್, ಅನಸೂಯ, ಫಹದ್ ಫಾಸಿಲ್ ಸೇರಿದಂತೆ ಅನೇಕರು ಪುಷ್ಪಾ ಪಾರ್ಟ್ 2ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ‘ಪುಷ್ಪಾ 2’ ಚಿತ್ರ ಬಹುಭಾಷೆಗಳಲ್ಲಿ ಅಬ್ಬರಿಸಲಿದೆ.

Shwetha M