ಮೊಸಳೆಯೊಂದಿಗೆ ವ್ಯಕ್ತಿಯ ಸ್ನೇಹ! – ಬೆಚ್ಚಗಿನ ಅಪ್ಪುಗೆ ನೀಡಿದ ಮೊಸಳೆ!

ಮೊಸಳೆಯೊಂದಿಗೆ ವ್ಯಕ್ತಿಯ ಸ್ನೇಹ! – ಬೆಚ್ಚಗಿನ ಅಪ್ಪುಗೆ ನೀಡಿದ ಮೊಸಳೆ!

ಮೊಸಳೆ ಅಪಾಯಕಾರಿ ಪ್ರಾಣಿ. ಅವುಗಳು ಯಾವಾಗ ಬೇಕಾದರೂ ದಾಳಿ ಮಾಡಬಹುದು. ನಾವು ಎಷ್ಟೇ ಶಕ್ತಿಶಾಲಿಗಳಾಗಿದ್ದರು ಕೂಡ ಅವುಗಳು ಒಂದೇ ಏಟಿಗೆ ನಮ್ಮನ್ನು ಮುಗಿಸಿಬಿಡಬಹುದು. ಅಷ್ಟು ಶಕ್ತಿಶಾಲಿಯಾಗಿವೆ. ಹೀಗಾಗಿ ಮೊಸಳೆಯನ್ನು ಕಂಡರೆ ಅನೇಕರು ಭಯಪಡುತ್ತಾರೆ. ಮೊಸಳೆ ಇದೆ ಅಂತಾ ಗೊತ್ತಾದ ಕೂಡಲೇ ಮೊಸಳೆ ಇದ್ದ ಪ್ರದೇಶಕ್ಕೆ ಹೋಗುವುದನ್ನು ನಿಲ್ಲಿಸಿಬಿಡುತ್ತಾರೆ. ಇನ್ನೂ ಶಕ್ತಿಶಾಲಿ ಮೊಸಳೆ ನಮ್ಮ ಮೇಲೆ ಬಿದ್ದರೆ ಹೇಗೆ? ನಮ್ಮ ಕತೆ ಮುಗಿಯಿತು ಅಂತಾನೆ ಲೆಕ್ಕ. ಆದ್ರೆ ಇಲ್ಲೊಬ್ಬ ವ್ಯಕ್ತಿಯೊಂದಿಗೆ ಮೊಸಳೆ ಫ್ರೆಂಡ್‌ಶಿಪ್‌ ಬೆಳೆಸಿದೆ. ಬೃಹತ್‌ ಗಾತ್ರದ ಮೊಸಳೆ ಆತನ ಮೇಲೆ ಬಿದ್ದು ಮುದ್ದಾಡುತ್ತಿದೆ.

ಸಾಮಾನ್ಯವಾಗಿ ನಾಯಿ, ಬೆಕ್ಕು ಮುಂತಾದ ಸಾಧು ಪ್ರಾಣಿಗಳೊಂದಿಗೆ ಮನುಷ್ಯರು ಸ್ನೇಹ ಬೆಳೆಸಿಕೊಳ್ಳುತ್ತಾರೆ. ಆದ್ರೆ ಕ್ರೂರ ಪ್ರಾಣಿಗಳ ಜೊತೆ ಫ್ರೆಂಡ್‌ಶಿಪ್‌ ಬಿಡಿ, ಅದರ ಹತ್ತಿರ ಹೋಗಲು ಕೂಡ ಹೆದರುತ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಜೊತೆ ಮೊಸಳೆಯೊಂದು ಸ್ನೇಹ ಬೆಳೆಸಿಕೊಂಡಿದೆ. ಆತನ ಮೇಲೇರಿದ ಮೊಸಳೆ ಅವನನ್ನು ಮುದ್ದು ಮಾಡುತ್ತಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಚಹಾ ಕೊಟ್ಟಿಲ್ಲ ಅಂತಾ ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ಬಿಟ್ಟು ಹೊರಟ ವೈದ್ಯರು!

ಸರೀಸೃಪ ಮೃಗಾಲಯದ ಸಂಸ್ಥಾಪಕ ಜೇ ಬ್ರೂವರ್ ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಅಬ್ಬಾ ಸತ್ತೆವು! ಎಂದಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿಯ ಬದಲಾಗಿ ನಾನು ಅದರೊಂದಿಗೆ ಇರಬಾರದಿತ್ತೆ? ಎಂದು ಕೇಳಿದ್ದಾರೆ. ಇನ್ನೂ ಕೆಲವರು ನಿಮ್ಮ ತಲೆಯಲ್ಲಿ ಮೆಟಲ್​ ಪ್ಲೇಟ್ ಇದೆಯೇ? ಎಂದು ತಮಾಷೆ ಮಾಡಿದ್ದಾರೆ. ಮಗ ಅಪ್ಪನನ್ನು ಪ್ರೀತಿಸುವ ಪರಿ ಎಂದಿದ್ದಾರೆ ಒಬ್ಬರು. ಬಾಯಿಗೆ ಅಂಟಿಸಿದ ಟೇಪ್​ ತೆಗೆದು ಮುದ್ದಾಡಿಸಿಕೊಂಡು ನೋಡಿ ಒಮ್ಮೆ ಎಂದಿದ್ದಾರೆ ಇನ್ನೊಬ್ಬರು. ಟೇಪ್​ ತೆಗೆದು ಮುದ್ದಾಡಿಸಿಕೊಂಡ ಮೇಲೆ ಹೀಗೆಯೇ ನಗುತ್ತಲೇ ಇರುವಿರೋ ಎಂದಿದ್ದಾರೆ ಮತ್ತೊಬ್ಬರು. ಸದ್ಯ ವೈರಲ್‌ ಆದ ಈ ವಿಡಿಯೋ ಎಲ್ಲರ ಮೆಚ್ಚುಗೆ ಗಳಿಸಿದೆ.

Shwetha M