ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ – ನನ್ನ ಬಳಿ ದಾಖಲೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶಿಸಿದ ಹೆಚ್‌ಡಿಕೆ

ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ – ನನ್ನ ಬಳಿ ದಾಖಲೆ ಇದೆ ಎಂದು ಪೆನ್ ಡ್ರೈವ್ ಪ್ರದರ್ಶಿಸಿದ ಹೆಚ್‌ಡಿಕೆ

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಇದೇ ವಿಚಾರಕ್ಕೆ ಸಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್​ ನಡುವೆ ಟ್ವೀಟ್ ವಾರ್​ ಕೂಡ ನಡೆಯುತ್ತಿದೆ. ದಳಪತಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರವೂ ತಾರಕಕ್ಕೇರಿದೆ. ವೈಎಸ್​ಟಿ ಆರೋಪಕ್ಕೆ ದಾಖಲೆ ಇಟ್ಟು ಮಾತನಾಡಲಿ, ಸುಮ್ನೆ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಕಾಂಗ್ರೆಸ್​ ನಾಯಕರು ತಿರುಗೇಟು ನೀಡಿದ್ದಾರೆ. ಈ ಬೆನ್ನಲ್ಲೇ ಹೆಚ್‌ಡಿಕೆ ದಾಖಲೆ ಸಮೇತ ಬಂದಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ‘ಪೊಳ್ಳು ಘೋಷಣೆಗಳಿಗೆ’ ಜನರು ಬೆಲೆ ಕೊಡುವುದಿಲ್ಲ – ಕೇಂದ್ರದ ವಿರುದ್ದ  ಮಲ್ಲಿಕಾರ್ಜುನ ಖರ್ಗೆ ಕಿಡಿ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ನನ್ನ ಬಳಿ ದಾಖಲೆ ಇದೆ ಅಂತಾ ಪೆನ್ ಡ್ರೈವ್ ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಪೆನ್‌ ಡ್ರೈವ್‌ ನಲ್ಲಿ ವರ್ಗಾವಣೆ ದಂಧೆಯ ಆಡಿಯೋ ಇದೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಹಾಕಿದ್ದಾರೆ. KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್‍ದ್ದು ಬಾಕಿ ಬಿಲ್ ಕಾಂಗ್ರೆಸ್‍ಗೆ ಕಳಿಸಿದ್ರಾ?. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲಂ  ಅನ್ನು ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ  ನಡೆಸಿದ್ದಾರೆ.

ಮಂಗಳವಾರ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದ್ದೇನೆ. ಈಗಲೂ ನಾನು ತಾಜ್ ವೆಸ್ಟೆಂಡ್‍ಗೆ ಹೋಗುತ್ತೇನೆ. ನಾನೇನ್ ಕಾಂಗ್ರೆಸ್ ನವರನ್ನು ಕೇಳ್ಕೊಂಡು ಹೋಗಬೇಕಾ?. ಪರಿಹಾರದ ದುಡ್ಡಲ್ಲಿ ಮಜಾ ಮಾಡಿದವರು ನೀವು.. ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ ಎಂದು ಹೇಳಿದ್ದಾರೆ.

ಮೈ ಕೈ ಪರಚಿಕೊಳ್ಳುವುದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ?. ಸೋತಾಗಲೂ ಜನರ ಕಷ್ಟ-ಸುಃಖ ಕೇಳಿದ್ದೇವೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು?. ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

suddiyaana