ಸತ್ತವರ ದೇಹಗಳೇ ಸಂಬಂಧಿಕರಿಗೆ ಭರ್ಜರಿ ಭಕ್ಷ್ಯ! – ಸಂಪ್ರದಾಯದ ಹೆಸರಲ್ಲಿ ಹೀಗೆಲ್ಲಾ ನಡೆಯುತ್ತಾ? 

ಸತ್ತವರ ದೇಹಗಳೇ ಸಂಬಂಧಿಕರಿಗೆ ಭರ್ಜರಿ ಭಕ್ಷ್ಯ! – ಸಂಪ್ರದಾಯದ ಹೆಸರಲ್ಲಿ ಹೀಗೆಲ್ಲಾ ನಡೆಯುತ್ತಾ? 

ಹುಟ್ಟು ಅಂದ ಮೇಲೆ ಸಾವು ಖಚಿತ. ಬಡವನೇ ಇರಲಿ ಬಲ್ಲಿದನೇ ಆಗಲಿ ಸಾವಿನ ಮುಂದೆ ಎಲ್ಲರೂ ಒಂದೇ. ಒಮ್ಮೆ ಜೀವ ಹೋಯ್ತು ಅಂದ್ರೆ ಕೋಟಿ ಕೊಟ್ಟರೂ ಬದುಕಿಸೋಕೇ ಆಗಲ್ಲ. ಇದು ಎಲ್ಲರಿಗೂ ಗೊತ್ತಿರೋ ಸತ್ಯ. ಇನ್ನು ಸತ್ತ ಮೇಲೆ ದೇಹವನ್ನು ಒಂದಾ ಮಣ್ಣು ಮಾಡ್ತಾರೆ, ಇಲ್ಲಾ ಅಂದ್ರೆ ಸುಡ್ತಾರೆ. ಇದು ಎಲ್ಲಾ ದೇಶಗಳಲ್ಲೂ ನಡೆಯೋ ಪದ್ದತಿ ಅಂತಾ ಹೇಳಬಹುದು. ಯುರೋಪಿಯನ್ನರು ಒಂದು ಕಾಲದಲ್ಲಿ ಸತ್ತ ಮನುಷ್ಯರನ್ನೇ ತಿನ್ನುತ್ತಿದ್ದರು ಎಂಬ ಆತಂಕಕಾರಿ ವಿಚಾರವೊಂದು ಅಧ್ಯಯನದಿಂದ ಬಯಲಾಗಿದೆ. ಇದು ಇಡೀ ಮಾನವ ಸಮೂಹವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

ಯಾವುದೇ ಜೀವಿ ಸತ್ತ ಮೇಲೆ ಅವುಗಳನ್ನು ಮಣ್ಣು ಮಾಡಲಾಗುತ್ತದೆ ಅಥವಾ ಹೂಳಲಾಗುತ್ತದೆ. ಆದ್ರೆ ಸುಮಾರು 15 ಸಾವಿರ ವರ್ಷಗಳ ಹಿಂದೆ ಯುರೋಪಿಯನ್ನರು ಸಾವಿಗೀಡಾದ ವ್ಯಕ್ತಿಯನ್ನು ಸುಡುವ ಅಥವಾ ಹೂಳುವ ಬದಲು ಅವರ ದೇಹವನ್ನು ಸೇವನೆ ಮಾಡುತ್ತಿದ್ದರು ಅನ್ನೋ ಶಾಕಿಂಗ್‌ ವಿಚಾರವೊಂದು ಅಧ್ಯಯನದಿಂದ ಬಯಲಾಗಿದೆ.

ಇದನ್ನೂ ಓದಿ: ಭೂತದ ಜೊತೆಯಲ್ಲೇ ಬೆಳೆದು ದೊಡ್ಡವಳಾದ ಯುವತಿ – ಮನೆಯಲ್ಲಿ ಪಿಶಾಚಿ ಜೊತೆ ಸೇರಿ ಲಕ್ಷ ಲಕ್ಷ ಸಂಪಾದನೆ..!

ಕ್ವಾಟರ್ನರಿ ಸೈನ್ಸ್ ರಿವ್ಯೂಸ್ ನಿಯತಕಾಲಿಕ ಪ್ರಕಟವಾದ  ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ, 15 ಸಾವಿರ ವರ್ಷಗಳ ಹಿಂದೆ ಸತ್ತ ಮನುಷ್ಯನ ಅಂತ್ಯಕ್ರಿಯೆ ವೇಳೆ ನರಭಕ್ಷಣೆ ಮಾಡಲಾಗುತ್ತಿತ್ತು. ಇದೊಂದು ಅಂತ್ಯಕ್ರಿಯೆಯ ವಿಲಕ್ಷಣ ಅಭ್ಯಾಸವಾಗಿತ್ತು.  ತಮ್ಮ ಆತ್ಮೀಯರು ಸತ್ತರೆ ಶವಗಳನ್ನು ಅವಶ್ಯಕತೆಯಿಂದ ಅಲ್ಲ ಅಂತ್ಯಕ್ರಿಯೆ ಸಂಪ್ರದಾಯದ ಭಾಗವಾಗಿ ತಿನ್ನುತ್ತಿದ್ದರು ಎಂಬುದನ್ನು  ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡಿನ ಗಾಫ್‌ನ ಗುಹೆಯಲ್ಲಿ ಕಚ್ಚಿದ ಮೂಳೆಗಳು ಮತ್ತು ಮಾನವನ ತಲೆಬುರುಡೆಗಳನ್ನು ಕಪ್‌ಗಳಂತೆ ಬಳಸಿರುವುದನ್ನು ಕಾಣಬಹುದು. ಹಾಗೂ ಇದೇನು ಪ್ರತ್ಯೇಕವಾದ ಘಟನೆಯಲ್ಲ ಇದು ಕೂಡ ಆ ಸಂಪ್ರದಾಯದ ಭಾಗವೇ ಎಂದು ಅಧ್ಯಯನ ಅಭಿಪ್ರಾಯ ವ್ಯಕ್ತಪಡಿಸಿದೆ.

ಮೂಲ ಶಿಲಾಯುಗದ ಕಾಲಘಟ್ಟದ ಅರ್ವಾಚೀನ ಶಿಲಾಯುಗದ ಅಂತ್ಯದ ಅವಧಿಯ ಮೇಲೆ ಈ ಅಧ್ಯಯನವು ಕೇಂದ್ರೀಕೃತವಾಗಿತ್ತು. ಮ್ಯಾಗ್ಡಲೇನಿಯನ್ನರು ಸುಮಾರು 11,000 ರಿಂದ 17,000 ವರ್ಷಗಳ ಹಿಂದೆ ವಾಸಿಸುತ್ತಿದ್ದರು.  ಲಂಡನ್‌ನ ರಾಷ್ಟ್ರೀಯ ಇತಿಹಾಸ ಮ್ಯೂಸಿಯಂನ ತಜ್ಞರು ಮಾನವ ಅವಶೇಷಗಳನ್ನು ಹೊಂದಿರುವ 59 ಮ್ಯಾಗ್ಡಲೇನಿಯನ್ ಸ್ಥಳಗಳನ್ನು ಗುರುತಿಸಲು ವ್ಯಾಪಕವಾದ ಸಾಹಿತ್ಯವನ್ನು ಪರಿಶೀಲಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಫ್ರಾನ್ಸ್‌ನಲ್ಲಿವೆ, ಜರ್ಮನಿ, ಸ್ಪೇನ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಬೆಲ್ಜಿಯಂ, ಪೋಲೆಂಡ್, ಜೆಕ್ ರಿಪಬ್ಲಿಕ್ ಮತ್ತು ಪೋರ್ಚುಗಲ್‌ನಲ್ಲಿಯೂ ಆ ಯುಗಕ್ಕೆ ಸೇರಿದ ಅವಶೇಷಗಳಿರುವ ಪ್ರದೇಶಗಳಿವೆ ಎಂದು  ಅಧ್ಯಯನ ವರದಿಯಲ್ಲಿದೆ.

ಈ ವಿಲಕ್ಷಣವಾದ ಅಂತ್ಯಕ್ರಿಯೆಯ ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳಲು ಅವರು 25 ಪ್ರದೇಶಗಳಲ್ಲಿ ಅಧ್ಯಯನ ಮಾಡಿದ್ದಾರೆ. ಇವುಗಳಲ್ಲಿ 15 ಸ್ಥಳಗಳಲ್ಲಿ ಮಾನವನ ಅವಶೇಷಗಳನ್ನು ಅಗೆದ, ಕತ್ತರಿಸಿದ ಗುರುತುಗಳಿದ್ದ ತಲೆಬುರುಡೆ ಮೂಳೆ, ಹಾಗೂ ಮೂಳೆಯೊಳಗಿನ ಅಸ್ಥಿಮಜ್ಜೆಯನ್ನು ಪೋಷಕಾಂಶಗಳಿಗಾಗಿ ಹೊರತೆಗೆದಂತಿರುವ ಲಕ್ಷಗಳನ್ನು ಹೊಂದಿರುವ ಪುರಾವೆಗಳು ಸಿಕ್ಕಿದವು.  ಹೀಗಾಗಿ ಆಗ ಸತ್ತವರನ್ನು ಸಂಸ್ಕಾರದ ಹೆಸರಿನಲ್ಲಿ ಸೇವನೆ ಮಾಡಲಾಗುತ್ತಿದ್ದ ವಿಲಕ್ಷಣವಾದ ಸಂಪ್ರದಾಯವಿತ್ತು ಎಂಬುದನ್ನು ಅಧ್ಯಯನಕಾರರು ಅಂದಾಜಿಸಿದ್ದಾರೆ.

ಮಾನವನ ಅವಶೇಷಗಳ ಧಾರ್ಮಿಕ  ಸಂಸ್ಕಾರದ ಭಾಗವಾಗಿ ಉತ್ತರ ಮತ್ತು ಪಶ್ಚಿಮ ಯುರೋಪಿನಾದ್ಯಂತದ ಹಲವು ಸ್ಥಳಗಳಲ್ಲಿ ಈ ರೀತಿಯ ಪಳೆಯುಳಿಕೆ ಪತ್ತೆಯಾಗಿದ್ದು, ಹೀಗಾಗಿ  ಸಾವಿನ ನಂತರ ನರಭಕ್ಷಕತೆ ಜಾರಿಯಲ್ಲಿತ್ತು ಎಂಬುದಕ್ಕೆ ಇದು ಪೂರಕವಾಗಿದೆ.  ಮ್ಯಾಗ್ಡಲೇನಿಯನ್ ಕಾಲಘಟ್ಟದ ಸಂಸ್ಕೃತಿಯಲ್ಲಿ ಇದು ವ್ಯಾಪಕವಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಇದು ಜನರು ಸಾವಿಗೀಡಾದ ತಮ್ಮ ಪ್ರೀತಿಪಾತ್ರರ ದೇಹವನ್ನು ವಿಲೇವಾರಿ ಮಾಡುವ ಒಂದು ವಿಲಕ್ಷಣ ವಿಧಾನವಾಗಿತ್ತು.  ಇಲ್ಲಿ ಜನರು ತಮ್ಮ ಸತ್ತವರ ಶವಗಳನ್ನು ಸುಡುವ ಅಥವಾ ಹೂಳುವ ಬದಲು ಅವುಗಳನ್ನು ತಿನ್ನುತ್ತಿದ್ದರು ಎಂದು ರಾಷ್ಟ್ರೀಯ ಇತಿಹಾಸ ವಸ್ತುಸಂಗ್ರಹಾಲಯದ ಪ್ರಾಚೀನ ಮಾನವಶಾಸ್ತ್ರಜ್ಞೆ ಮತ್ತು ಪ್ರಧಾನ ಸಂಶೋಧಕಿಸಹ ಲೇಖಕಿ ಸಿಲ್ವಿಯಾ ಬೆಲ್ಲೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shwetha M