ALL ROUNDER ರಾಹುಲ್ – IPLನಲ್ಲೂ ಕೆಎಲ್ ಸ್ಲಾಟ್ ಚೇಂಜ್

ಕೂಲ್ & ಕ್ಲಾಸಿಕ್ ಪ್ಲೇಯರ್ ಕೆಎಲ್ ರಾಹುಲ್. ಮೈದಾನವೇ ಇರಲಿ ಅಥವಾ ಹೊರಗೇ ಆಗಲಿ ಎಲ್ಲೂ ಕೂಡ ರೂಡ್ ಆಗಿ ಬಿಹೇವ್ ಮಾಡೋ ಕ್ಯಾರೆಕ್ಟರೇ ಅಲ್ಲ. ಈವನ್ ಆಫ್ ಸೆಂಚುರಿ, ಸೆಂಚುರಿ ಸಿಡಿಸಿದಾಗ್ಲೂ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿಲ್ಲ. ಅದೇನೋ ಫಾರ್ ದಿ ಫಸ್ಟ್ ಟೈಂ ಅನ್ನೋ ಹಾಗೇ ಆರ್ಸಿಬಿ ವಿರುದ್ಧ ಡಿಸಿ ಗೆದ್ದಾಗ ಕಾಂತಾರ ಸ್ಟೈಲಲ್ಲಿ ಸರ್ಕಲ್ ಹಾಕಿ ಬ್ಯಾಟ್ನಿಂದ ನೆಲಕ್ಕೆ ಗುದ್ದಿ ಸಂಭ್ರಮಿಸಿದ್ರು.
ಇದನ್ನೂ ಓದಿ : ರಾಜಸ್ಥಾನ ವಿರುದ್ಧ ಗೆದ್ದು 3ನೇ ಸ್ಥಾನಕ್ಕೇರಿದ ಆರ್ ಸಿಬಿ – ರೆಡ್ ಆರ್ಮಿಗೆ ಮತ್ತೆ ಚಿನ್ನಸ್ವಾಮಿ ಭಯ
ಕೆಎಲ್ ರಾಹುಲ್ 2020ರಲ್ಲೇ ಪಂಜಾಬ್ ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡವ್ರು. ಆ ನಂತ್ರ 2022ರಲ್ಲಿ ಲಕ್ನೋ ಕ್ಯಾಪ್ಟನ್ ಆಗಿ ಅಲ್ಲಿಂದ ಸತತ ಮೂರು ವರ್ಷಗಳ ಕಾಲ ತಂಡವನ್ನ ಮುನ್ನಡೆಸಿದ್ರು. ಆ ಬಳಿಕ 2025ರಲ್ಲಿ ಡೆಲ್ಲಿ ತಂಡ ಸೇರಿದ್ರು. ಸೋ ಇಲ್ಲಿ ರಾಹುಲ್ಗೆ ನಾಯಕತ್ವದ ಆಫರ್ ಕೊಟ್ರೂ ಅದನ್ನ ತಿರಸ್ಕರಿಸಿದ್ರು. ಹೀಗಾಗಿ ಡಿಸಿ ಕ್ಯಾಪ್ಟನ್ಸಿ ಅಕ್ಷರ್ ಪಟೇಲ್ ಪಾಲಾಯ್ತು. ಒಬ್ಬ ನಾಯಕನಾಗಿ ತಂಡವನ್ನ ವರ್ಷಗಳ ಕಾಲ ಮುನ್ನಡೆಸಿ ಮತ್ತೆ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯೋದು ಸುಲಭದ ಮಾತಲ್ಲ. ನಾಯಕತ್ವ ಮತ್ತು ಅಧಿಕಾರ ಸಿಕ್ಕವ್ರು ಅಷ್ಟು ಬೇಗ ಅದನ್ನೆಲ್ಲಾ ಬಿಟ್ಟು ಕೊಡೋದು ತುಂಬಾ ಕಷ್ಟ. ಬಟ್ ಸಿಂಪಲ್ಲಾಗಿರೋ ರಾಹುಲ್ ಅಂಥವ್ರಿಗೆ ಇದೆಲ್ಲಾ ಮ್ಯಾಟ್ರೇ ಆಗಲ್ಲ. ಸದ್ಯ ಕ್ಯಾಪ್ಟನ್ಸಿ ಬಿಟ್ಟು ಸಾಮಾನ್ಯ ಆಟಗಾರನಾದ್ರೂ ಡೆಡಿಕೇಷನ್ ಬಿಟ್ಟಿಲ್ಲ. ಹಾಗೇ ಸ್ಲಾಟ್ ಚೇಂಜ್ ಆದ್ರೂ ತಲೆಕೆಡಿಸಿಕೊಳ್ಳದೆ ಬ್ಯಾಟಿಂಗ್ ನಡೆಸ್ತಾರೆ. ಓಪನಿಂಗ್, ಮಿಡಲ್ ಆರ್ಡರ್ ಅನ್ನೋದೇ ಇಲ್ಲ. ಇನ್ನು ವಿಕೆಟ್ಗಳ ಹಿಂದೆ ನಿಂತು ವಿಕೆಟ್ ಕೀಪರ್ ಆಗಿ ಶರವೇಗದಲ್ಲಿ ಫೀಲ್ಡಿಂಗ್ ಮಾಡ್ತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ನೋ ಸೀನಿಯಾರಿಟಿ ಬಿಲ್ಡಪ್. ತಂಡದ ಎಲ್ಲರ ಜೊತೆಯೂ ಬೆರೆಯುವಂಥ ಗುಣ ಅವ್ರಲ್ಲಿದೆ. ಕ್ಯಾಪ್ಟನ್, ಓಪನರ್, ವಿಕೆಟ್ ಕೀಪರ್ ಹೀಗೆ ಸಾಲು ಸಾಲು ಅನುಭವಗಳಿವೆ.
ಹೊಸ ಶೈಲಿಯ ರಾಹುಲ್!
ಎದುರಾಳಿ ಕ್ರಮಾಂಕ ರನ್ಸ್
SRH 4 15
CSK ನಾನ್ ಸ್ಟ್ರೈಕ್ ಓಪನರ್ 77
RCB 4 93
MI 4 15