ನಮೀಬಿಯಾ ಚೀತಾಗಳ ಸಾವಿನಿಂದ ಅಲರ್ಟ್ – ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲು ಸಕಲ ಸಿದ್ಧತೆ

ನಮೀಬಿಯಾ ಚೀತಾಗಳ ಸಾವಿನಿಂದ ಅಲರ್ಟ್ – ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲು  ಸಕಲ ಸಿದ್ಧತೆ

ಈ ವರ್ಷದ ಅಂತ್ಯದ ವೇಳೆ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಅವುಗಳನ್ನು ಮಧ್ಯಪ್ರದೇಶ ರಾಜ್ಯದ ಗಾಂಧಿ ಸಾಗರ್ ಅಭಯಾರಣ್ಯಕ್ಕೆ ಕಳುಹಿಸಲಾಗುವುದು. ಗಾಂಧಿ ಸಾಗರ ಅಭಯಾರಣ್ಯವಲ್ಲದೆ ನೌರದೇಹಿ ಎಂಬ ಇನ್ನೊಂದು ತಾಣವನ್ನು ಚೀತಾಗಳಿಗಾಗಿ ಸಿದ್ಧಪಡಿಸಲಾಗುತ್ತಿದೆ.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸರಣಿ ಸಾವಿನ ಕಾರಣ ಬಹಿರಂಗ!  

ನಮೀಬಿಯಾದ ಚೀತಾಗಳ ಬ್ಯಾಚ್ ಸೆಪ್ಟೆಂಬರ್ 17 ರಂದು ಕರೆತರಲಾಗಿತ್ತು. ಈಗ ಬರೋಬ್ಬರಿ ಒಂದು ವರ್ಷ ಕಳೆದಿದೆ. ಈ ಬಾರಿ ತರುವ ಚೀತಾಗಳನ್ನು ಅಧಿಕಾರಿಗಳು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿದ್ದಾರೆ. ಅದು ಅನಿವಾರ್ಯ ಕೂಡಾ. ಏಕೆಂದರೆ, ಕಳೆದ ವರ್ಷದಿಂದ ಇಲ್ಲಿಯವರೆಗೆ ಕೆಲವು ಚೀತಾಗಳು ಭಾರತದ ತಾಪಮಾನಕ್ಕೆ ಒಗ್ಗಿಕೊಳ್ಳದೇ ಸಾವಿಗೀಡಾಗಿವೆ. ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾದಲ್ಲಿ ಜೂನ್ ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಚಳಿಗಾಲದ ಅವಧಿಯಾಗಿರುತ್ತದೆ. ಆದರೆ ಭಾರತದಲ್ಲಿ ಈ ತಿಂಗಳುಗಳು ಬೇಸಿಗೆಯಿಂದ ಕೂಡಿರುತ್ತದೆ. ಅಲ್ಲಿಂದ ಇಲ್ಲಿಗೆ ಕರೆತರುವ ಚೀತಾಗಳು ಈ ಋತುಮಾನದ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು ಎಂದು ತಜ್ಞರ ಅಭಿಫ್ರಾಯ ಪಟ್ಟಿದ್ದರು. ಹಾಗಾಗಿ ದಪ್ಪ ಕೋಟ್‌ಗಳನ್ನು ಹೊಂದಿರುವ ಚಿರತೆಗಳನ್ನು ಈ ಬಾರಿ ಸ್ಥಳಾಂತರಗೊಳಿಸಲು ಯೋಜಿಸಲಾಗುತ್ತಿದೆ. ಈ ಹೊಸ ಬ್ಯಾಚ್‌ನ ಚಿರತೆಗಳನ್ನು ಆಹ್ವಾನಿಸಲು ಮಧ್ಯಪ್ರದೇಶದ ಗಾಂಧಿ ಸಾಗರ್ ಅಭಯಾರಣ್ಯ ಮತ್ತು ನೌರದೇಹಿಯ ಎರಡು ಸ್ಥಳಗಳು ಸಿದ್ಧವಾಗಿದೆ. ಕೆಲಸಗಳು ಕೂಡಾ ಭರದಿಂದ ಸಾಗುತ್ತಿದೆ. ಈ ವರ್ಷದ ನವೆಂಬರ್ ಮತ್ತು ಡಿಸೆಂಬರ್ ನಡುವೆ ಚಿರತೆಗಳು ಭಾರತಕ್ಕೆ ಬರಲಿವೆ.

Sulekha