ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆ – 2,500 ಸಂತರಿಗೆ ಆಹ್ವಾನ!

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆ – 2,500 ಸಂತರಿಗೆ ಆಹ್ವಾನ!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.  ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಿದ್ಧತೆ ಬರದಿಂದ ಸಾಗಿದೆ. ಅಯೋಧ್ಯೆಯಲ್ಲಿ  ನಡೆಯಲಿರುವ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಅತಿಥಿಗಳನ್ನು ಆಹ್ವಾನಿಸುವ ಕಾರ್ಯ ಪ್ರಗತಿಯಲ್ಲಿದ್ದು,  ಸುಮಾರು 7 ಸಾವಿರ ಗಣ್ಯರಿಗೆ ಆತಿಥ್ಯ ವಹಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಸಮಯ ಫಿಕ್ಸ್!

ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳ ಪಟ್ಟಿ ಅಂತಿಮಗೊಳಿಸಲು ರಾಮ್‌ಕೋಟ್‌ನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಕಾಲ ಸಭೆ ನಡೆಸಲಾಗಿದೆ. 7 ಸಾವಿರ ಅತಿಥಿಗಳ ಪೈಕಿ ವಿಶೇಷವಾಗಿ ದೇಶಾದ್ಯಂತ ವಿವಿಧ ಸಂಪ್ರದಾಯಗಳ ಸುಮಾರು 2,500 ಋಷಿಮುನಿಗಳು ಮತ್ತು ಸಂತರನ್ನು ಅಹ್ವಾನಿಸಲಾಗುತ್ತಿದೆ. ಅವರಿಗೆ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗುತ್ತಿದೆ. ಭದ್ರತಾ ದೃಷ್ಠಿಯಿಂದಲೂ ಭದ್ರತಾ ಏಜೇನ್ಸಿಗಳ ಜೊತೆಗೆ ಚರ್ಚೆ ಮಾಡಿದೆ.

ಈ ಸಭೆಯಲ್ಲಿ ಅತಿಥಿಗಳ ವಸತಿ, ಸಾರಿಗೆ, ಆಹಾರ ಇತ್ಯಾದಿ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಅತಿಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅಯೋಧ್ಯೆಯಿಂದಲೇ ಅತಿಥಿ ದೇವೋ ಭವ ಎಂಬ ಸಂದೇಶ ನೀಡಲು ನಿರ್ಧರಿಸಲಾಗಿದೆ. ಭದ್ರತಾ ಏಜೆನ್ಸಿಗಳ ಮನವಿಯ ಮೇರೆಗೆ, ದಂಡ, ಚನ್ವಾರ್, ಛತ್ರ ಮತ್ತು ಪಾದುಕೆಗಳನ್ನು ಸಮಾರಂಭಕ್ಕೆ ತರದಂತೆ ಸಂತರು ಮತ್ತು ಋಷಿಗಳಲ್ಲಿ ಟ್ರಸ್ಟ್ ಮನವಿ ಮಾಡಿದೆ.

ಅತಿಥಿಗಳ ಜವಾಬ್ದಾರಿಯನ್ನು ಸಂಘವು ಕ್ಷೇತ್ರದ ಸಹ-ಸಂಪರ್ಕ ಮುಖ್ಯಸ್ಥ ಮನೋಜ್ ಜಿ ಅವರಿಗೆ ವಹಿಸಿದೆ. ಸಂಘದ ಅಖಿಲ ಭಾರತ ಸಂಪರ್ಕ ಮುಖ್ಯಸ್ಥ ರಾಮಲಾಲ್, ವಿಎಚ್‌ಪಿ ಸಂಘಟನೆ ಸಚಿವ ಕೋಟೇಶ್ವರ್, ವಿಎಚ್‌ಪಿ ಪೋಷಕ ಮಂಡಳಿ ಸದಸ್ಯ ದಿನೇಶ್ ಚಂದ್ರ, ವಿಎಚ್‌ಪಿ ಕೇಂದ್ರ ಸಚಿವ ಗಜೇಂದ್ರ ಸಿಂಗ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಡಾ.ಅನಿಲ್ ಮಿಶ್ರಾ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Shwetha M