ಭಾರತ ವಿರುದ್ಧ ಸೋತಿದ್ದಕ್ಕೆ ಸಿಟ್ಟಿಗೆದ್ದ ಲಂಕಾ ಸರ್ಕಾರ – ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರು ವಜಾ

ಭಾರತ ವಿರುದ್ಧ ಸೋತಿದ್ದಕ್ಕೆ ಸಿಟ್ಟಿಗೆದ್ದ ಲಂಕಾ ಸರ್ಕಾರ – ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರು ವಜಾ

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಕೇವಲ 2 ಗೆಲುವಿನ ಮೂಲಕ ಬಹುತೇಕ ಹೊರಬಿದ್ದಿದೆ. ಈಗಾಗಲೇ 5 ಪಂದ್ಯದಲ್ಲಿ ಸೋತಿದೆ. ಆದರೆ ಭಾರತ ವಿರುದ್ಧದ ಸೋಲು ಲಂಕಾ ಅಭಿಮಾನಿಗಳಿಗೆ ಮಾತ್ರವಲ್ಲ, ಕ್ರೀಡಾ ಸಚಿವಾಲಯದ ಸಿಟ್ಟಿಗೂ ಕಾರಣವಾಗಿದೆ. ಇದರ ಪರಿಣಾಮ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ, ಆಯ್ಕೆ ಸಮಿತಿ ಸೇರಿ ಎಲ್ಲಾ ಸದಸ್ಯರನ್ನು ಸರ್ಕಾರ ವಜಾ ಮಾಡಿದೆ.

ಇದನ್ನೂ ಓದಿ: ಭಾರತದ ಹುಲಿಗಳ ಅಬ್ಬರಕ್ಕೆ ಸೋತು ಸುಣ್ಣವಾದ ಹರಿಣಗಳು – ಟೀಮ್ ಇಂಡಿಯಾ ಪವರ್‌ಗೆ ಸೌತ್ಆಫ್ರಿಕಾ ಸುಸ್ತು

ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿದ 7 ಪಂದ್ಯಗಳಲ್ಲಿ 5 ಸೋಲು ಅನುಭವಿಸಿದೆ. ಕೇವಲ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆಫ್ಘಾನಿಸ್ತಾನ, ಪಾಕಿಸ್ತಾನ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಸೋಲನ್ನು ಶ್ರೀಲಂಕಾ ತಂಡ, ಅಭಿಮಾನಿಗಳು ಹಾಗೂ ಕ್ರಿಕೆಟ್ ಮಂಡಳಿ ಕ್ರೀಡಾ ಸ್ಪೂರ್ತಿಯಿಂದಲೇ ತೆಗೆದುಕೊಂಡಿತ್ತು. ಆದರೆ ಭಾರತದ ವಿರುದ್ಧದ ಸೋಲು ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ಕನಿಷ್ಠ ಹೋರಾಟ ನೀಡಿಲ್ಲ. ಹೀಗಾಗಿ ಆಯ್ಕೆ ಸಮಿತಿ, ಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೇರಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರನ್ನು ವಜಾ ಮಾಡಲಾಗಿದೆ. ಕ್ರೀಡಾ ಸಚಿವ ರೋಶನ್ ರಣಸಿಂಘೆ ಈ ನಿರ್ಧಾರ ಘೋಷಿಸಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಭ್ರಷ್ಟಾಚಾರ ನಡೆಸಿ ತಂಡ ಆಯ್ಕೆ ಮಾಡಿದೆ. ಸಂಪೂರ್ಣ ಮಂಡಳಿ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಹೀಗಾಗಿ ಎಲ್ಲಾ ಸದಸ್ಯರ ವಜಾಗೆ ಆದೇಶಿಸಲಾಗಿದೆ.ಲಂಕಾ ಮಂಡಳಿಯ ಪ್ರಧಾನ ಕಚೇರಿಯ ಹೊರಗೆ ಅಭಿಮಾನಿಗಳ ನಿರಂತರ ಪ್ರತಿಭಟನೆ ನಡೆಸಿದರು. ಈ ಬೆಳವಣಿಗೆ ಮಧ್ಯೆ ಶ್ರೀಲಂಕಾ ಕ್ರಿಕೆಟ್‌ನ ಕಾರ್ಯದರ್ಶಿ, ಸಂಸ್ಥೆಯಲ್ಲಿ ಎರಡನೇ ಅತ್ಯುನ್ನತ ಸ್ಥಾನವನ್ನು ಹೊಂದಿದ್ದ ಮೋಹನ್ ಡಿ ಸಿಲ್ವಾ ಅವರು ರಾಜೀನಾಮೆ ನೀಡಿದ್ದಾರೆ. ಶ್ರೀಲಂಕಾದ ಕ್ರೀಡಾ ಸಚಿವ, ರೋಷನ್ ರಣಸಿಂಗ್ ಅವರು ವಿಶ್ವಕಪ್ನಲ್ಲಿ ತಮ್ಮ ತಂಡದ ಕಳಪೆ ಪ್ರದರ್ಶನ ಮತ್ತು ಭಾರತ ವಿರುದ್ಧದ ಕೆಟ್ಟ ದಾಖಲೆಯ ಹೀನಾಯ ಸೋಲಿನ ಬಳಿಕ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ವಜಾಗೊಳಿಸಿದ್ದಾರೆ. ರಣಸಿಂಗ್ ಅವರು ಶ್ರೀಲಂಕಾ ಕ್ರಿಕೆಟ್ ಅನ್ನು ಬಲವಾಗಿ ಟೀಕಿಸಿದ್ದಾರೆ. ಕ್ರಿಕೆಟ್ ಮಂಡಳಿ ಭ್ರಷ್ಟಾಚಾರದಿಂದ ಕಳಂಕಿತವಾಗಿದೆ ಎಂದು ಆರೋಪಿಸಿದ್ದಾರೆ. 1996 ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ತಮ್ಮ ಏಕೈಕ ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಅರ್ಜುನ ರಣತುಂಗ ಅವರನ್ನು ಮಂಡಳಿಯ ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಸದ್ಯ ಹೊಸದಾಗಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಮಾಜಿ ಮಂಡಳಿಯ ಅಧ್ಯಕ್ಷರನ್ನು ಒಳಗೊಂಡ ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

 

Sulekha