‘ಆಲ್ ಇಂಡಿಯಾ ರೇಡಿಯೋ’ ಹೆಸರು ಬದಲು! – ಆದೇಶದಲ್ಲಿ ಏನಿದೆ?

‘ಆಲ್ ಇಂಡಿಯಾ ರೇಡಿಯೋ’ ಹೆಸರು ಬದಲು! – ಆದೇಶದಲ್ಲಿ ಏನಿದೆ?

ನವದೆಹಲಿ: ಪ್ರಸಾರ ಭಾರತಿಯು ತನ್ನ ರೇಡಿಯೋ ವಾಹಿನಿ ಆಲ್ ಇಂಡಿಯಾ (ಎಐಆರ್) ರೇಡಿಯೋ ಹೆಸರನ್ನು ಬದಲಿಸಿ ಹಿಂದಿನಂತೆ ‘ಆಕಾಶವಾಣಿ’ ಎಂದು ಉಲ್ಲೇಖಿಸಲು ನಿರ್ಧರಿಸಿದೆ.

ಈ ಬಗ್ಗೆ ಆಕಾಶವಾಣಿ ಮಹಾನಿರ್ದೇಶಕಿ ವಸುಧಾ ಗುಪ್ತಾ ಆಂತರಿಕ ಆದೇಶ ಹೊರಡಿಸಿದ್ದಾರೆ. ಎಐಆರ್ ಅನ್ನು ಆಕಾಶವಾಣಿ ಎಂದು ಶಾಸನಬದ್ಧ ನಿಬಂಧನೆಯು ತಕ್ಷಣದಿಂದ ಜಾರಿಯಾಗಬೇಕು ಎಂದು ಆಂತರಿಕ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ರಜೆ!

ಈ ಸಂಬಂಧ ಪ್ರಸಾರ ಭಾರತಿ ಸಿಇಒ  ಗೌರವ್‌ ದ್ವಿವೇದಿ ಮಾತನಾಡಿದ್ದು, ಇದು ತುಂಬಾ ಹಳೆಯ ನಿರ್ಧಾರವಾಗಿತ್ತು. ಆದರೆ ಜಾರಿಗೆ ಬಂದಿರಲಿಲ್ಲ. ಈಗ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.

ಅನೇಕ ‘ಆಲ್‌ ಇಂಡಿಯಾ ರೇಡಿಯೋ’ ಕೇಂದ್ರಗಳಲ್ಲಿ ಈಗಲೂ ಆಕಾಶವಾಣಿ ಎಂಬ ಫಲಕವೇ ಇದೆ. ಆದರೆ ಕೆಲವು ಕಡೆ ಬರೀ ‘ಆಲ್‌ ಇಂಡಿಯಾ ರೇಡಿಯೋ’ ಎಂದು ಮಾತ್ರ ನಮೂದಾಗಿದೆ. ಹೊಸ ಆದೇಶದಿಂದ ಆಲ್‌ ಇಂಡಿಯಾ ರೇಡಿಯೋದ ಎಲ್ಲ ದಾಖಲಾತಿಗಳಲ್ಲಿ ಇನ್ನು ಎಐಆರ್‌ ಬದಲು ‘ಆಕಾಶವಾಣಿ’ ಎಂದು ನಮೂದಾಗಲಿದೆ.

ಎಐಆರ್‌ಗೆ ‘ಆಕಾಶವಾಣಿ’ ಎಂದು ಖ್ಯಾತ ಕವಿ ರವೀಂದ್ರನಾಥ ಠಾಗೋರರು 1939ರಲ್ಲಿ ಕಲ್ಕತ್ತಾ ಶಾರ್ಟ್‌ವೇವ್‌ ರೇಡಿಯೋ ಕೇಂದ್ರದ ಉದ್ಘಾಟನೆ ವೇಳೆ ಸಂಬೋಧಿಸಿದ್ದರು. ಇದಕ್ಕೂ ಮುನ್ನ 1935 ರ ಸೆ.10ರಂದು ‘ಆಕಾಶವಾಣಿ ಮೈಸೂರು’ ಎಂಬ ಖಾಸಗಿ ರೇಡಿಯೋ ಕೇಂದ್ರ ಆರಂಭವಾಗಿತ್ತು. ಆಗ ಅದಕ್ಕೆ ಹೆಸರು ಕೊಟ್ಟವರು ಕನ್ನಡಿಗ ಗೋಪಾಲಸ್ವಾಮಿ.

suddiyaana