All Good ಎಂದ ಐಶ್ವರ್ಯ – ಡಿವೋರ್ಸ್ ವದಂತಿಗೆ ಬ್ರೇಕ್?

ಬಿಟೌನ್ನಲ್ಲಿ ಈಗ ಬರೀ ಬಚ್ಚನ್ ಫ್ಯಾಮಿಲಿಯದ್ದೇ ಸುದ್ದಿ.. ಬಚ್ಚನ್ ಕುಟುಂಬದಲ್ಲಿ ಯಾವುದೂ ಸರಿ ಇಲ್ಲ.. ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಚೇದನ ಪಡೆಯುತ್ತಿದ್ದಾರೆ ಅಂತಾ ಹಲವು ದಿನಗಳಿಂದ ಸುದ್ದಿಯಾಗ್ತಾ ಇದೆ.. ಅಭಿಷೇಕ್ ಹಾಗೂ ಅಮಿತಾಭ್ ಬಚ್ಚನ್ ಕೂಡ ಈ ವದಂತಿಗೆ ಪುಷ್ಠಿ ನೀಡುವಂತೆ ನಡೆದುಕೊಳ್ಳುತ್ತಿದ್ದರು.. ಆದ್ರೆ ಹರಿದಾಡುತ್ತಿರುವ ಗಾಳಿ ಸುದ್ದಿ ಬಗ್ಗೆ ಐಶ್ವರ್ಯ ರೈ ಆಗ್ಲೀ.. ಅಭಿಷೇಕ್ ಬಚ್ಚನ್ ಆಗ್ಲೀ.. ಅಮಿತಾಭ್ ಬಚ್ಚನ್ ಆಗ್ಲೀ ಯಾವುದೇ ಸ್ಪಷ್ಟನೆ ಕೊಟ್ಟಿರ್ಲಿಲ್ಲ.. ಇವೆಲ್ಲದರ ಮಧ್ಯೆ ಐಶ್ ಮಗಳೊಂದಿಗೆ ನ್ಯೂಯಾರ್ಕ್ಗೆ ಹೋಗಿ ಬಂದಿದ್ದಾರೆ.. ಇದೀಗ ಐಶ್ ಶಾಕಿಂಗ್ ರಿಯಾಕ್ಷನ್ ಕೂಡ ಕೊಟ್ಟಿದ್ದಾರೆ.. ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇದ್ಯಾ? ಅಷ್ಟಕ್ಕೂ ಐಶ್ ಹೇಳಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 2 ಸಲ ತರುಣ್ ಸೋನಲ್ ವಿವಾಹ – ಗೆಳೆಯನ ಮದುವೆಗೆ ದರ್ಶನ್ ಬರ್ತಾರಾ?
ಬಾಲಿವುಡ್ನಲ್ಲಿ ಅದ್ಯಾವಾಗ ಯಾರು ಒಂದಾಗುತ್ತಾರೋ? ಅದ್ಯಾವಾಗ ಬೇರೆಯಾಗುತ್ತಾರೋ? ಗೊತ್ತೇ ಆಗುವುದಿಲ್ಲ. ಕೆಲ ಜೋಡಿಗಳು ಸಡನ್ ಆಗಿ ವಿಚ್ಛೇದನದ ಸುದ್ದಿಯನ್ನು ಅನೌನ್ಸ್ ಮಾಡಿ ಶಾಕ್ ಕೊಟ್ಟಿದ್ದೂ ಇದೆ. ಸದ್ಯ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧ ಚೆನ್ನಾಗಿಲ್ಲ ಅನ್ನೋ ಸುದ್ದಿ ಗುಲ್ಲೆದ್ದಿದೆ. ಈ ಸುದ್ದಿಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ಅಧಿಕೃತವಾಗಿ ಎಲ್ಲೂ ಹೇಳಿಕೆಗಳನ್ನು ಕೊಟ್ಟಿರ್ಲಿಲ್ಲ. ಆದರೆ, ಇವರು ಯಾವ್ಯಾವ ಕಾರ್ಯಕ್ರಮಗಳಿಗೆ ಹೋಗುತ್ತಾರೋ ಆ ವೇಳೆಯೆಲ್ಲ ವಿಚ್ಛೇದನದ ಗಾಸಿಪ್ ಹಬ್ಬುವುದಕ್ಕೆ ಶುರುವಾಗಿಬಿಡುತ್ತೆ. ಸದ್ಯ ಅನಂತ್ ಅಂಬಾನಿ ಮದುವೆಗೆ ಹೋಗಿದ್ದಾಗಲೂ ಈ ಜೋಡಿ ಬಗ್ಗೆ ಮತ್ತೆ ಅನುಮಾನ ಮೂಡುವುದಕ್ಕೆ ಶುರುವಾಗಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ಐಶ್ ಹಾಗೂ ಅಭಿ ಈಗಾಗಲೇ ದೂರ ಆಗಿದ್ದಾರೆ.. ಬೇರೆ ಬೇರೆ ಮನೆಯಲ್ಲಿ ವಾಸ ಮಾಡ್ತಿದ್ದಾರೆ ಅಂತಾ ಹೇಲಾಗಿತ್ತು.. ಇಷ್ಟೆಲ್ಲಾ ಗಾಸಿಪ್ ಹರಿದಾಡ್ತಾ ಇದ್ರೂ ಬಚ್ಚನ್ ಫ್ಯಾಮಿಲಿ ಒಂಚೂರು ತಲೆ ಕೆಡಿಸಿಕೊಂಡಿಲ್ಲ.. ಇದ್ರ ಮಧ್ಯೆ ಐಶ್ ಮಗಳೊಂದಿಗೆ ನ್ಯೂಯಾರ್ಕ್ಗೆ ತೆರಳಿದ್ರು.. ಐಶ್ವರ್ಯ ವಿದೇಶಕ್ಕೆ ಹೋಗ್ತಿದ್ದಂತೆ ಬಚ್ಚನ್ ಫ್ಯಾಮಿಲಿ ತೊರೆದೇ ಬಿಟ್ರು.. ಮಗಳೊಂದಿಗೆ ವಿದೇಶದಲ್ಲೇ ಸೆಟಲ್ ಆಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು.. ಆದ್ರೀಗ ಐಶ್ ನ್ಯಾಯಾರ್ಕ್ನಿಂದ ಬಂದಿದ್ದು ಆಯ್ತು.. ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ್ರಾ ಅನ್ನೋ ಪ್ರಶ್ನೆ ಎದುರಾಗಿದೆ..
ಹೌದು.. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವೆ ಏನು ನಡೆಯುತ್ತಿದೆ? ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ಯಾ? ಅಥವಾ ಈ ಸುದ್ದಿ ಕೇವಲ ವದಂತಿನಾ? ಎಂಬ ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಾ ಇದ್ರು.. ಇದೀಗ ಐಶ್ ಈ ಬಗ್ಗೆ ಮಾತನಾಡಿದ್ದಾರೆ. 15 ದಿನಗಳ ನಂತರ ಐಶ್ವರ್ಯಾ ಮಗಳು ಆರಾಧ್ಯ ಜೊತೆ ಭಾರತಕ್ಕೆ ಬಂದಿದ್ದಾರೆ. ಈ ವೇಳೆ ನಟಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ..
ಐಶ್ವರ್ಯ ಏರ್ಪೋರ್ಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಮಾಧ್ಯಮದವರು ಮೇಡಂ, ಹೇಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಐಶ್ ಎಲ್ಲವೂ ಚೆನ್ನಾಗಿದೆ, ಧನ್ಯವಾದಗಳು ಎಂದು ನಗುತ್ತಲೇ ಹೇಳಿದ್ರು. ಬಳಿಕ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟು ಮುಂದೆ ಸಾಗಿದ್ದಾರೆ..
ನಟಿ ಐಶ್ವರ್ಯಾ ರೈ ಮಾಧ್ಯಮದವರೊಂದಿಗೆ ಮಾತಾಡುವಾಗ ತುಂಬಾ ಖುಷಿಯಾಗಿದ್ರು.. ವಿಚ್ಛೇದನದ ವದಂತಿಗಳ ಮಧ್ಯೆ, ನಟಿ ಮುಗ್ದ ನಗು ಹಾಗೂ ಮಗಳ ಜೊತೆಗಿನ ಕಮ್ಯೂನಿಕೇಷನ್ ನೋಡಿ ಅಭಿಮಾನಿಗಳು ಐಶ್ ಫುಲ್ ಖುಷಿಯಾಗಿದ್ದಾರೆ ಎಂದಿದ್ದಾರೆ. ಎಲ್ಲವೂ ಚೆನ್ನಾಗಿದೆ ಎಂದು ಐಶ್ ಹೇಳಿದ್ದನ್ನು ಕೇಳಿದ ಫ್ಯಾನ್ಸ್ ವಿಚ್ಚೇದನ ಕೇವಲ ವದಂತಿ ಎನ್ನುತ್ತಿದ್ದಾರೆ. ಇದೇ ವೇಳೆ ನಟಿ ನಡೆದುಕೊಂಡ ರೀತಿ ಜನರ ಹೃದಯವನ್ನು ಗೆದ್ದಿದೆ. ಸೆಲ್ಫಿ ತೆಗೆದುಕೊಂಡ ನಂತರ ವಿಮಾನ ನಿಲ್ದಾಣದ ಸಿಬ್ಬಂದಿಗೆ ‘ಗಾಡ್ ಬ್ಲೆಸ್’ ಎಂದು ಹೇಳಿ ಐಶ್ವರ್ಯಾ ರೈ ಕಾರಿನಲ್ಲಿ ಕುಳಿತು ಎಲ್ಲರಿಗೂ ಧನ್ಯವಾದ ಹೇಳಿದ್ರು. ನೆಟಿಜನ್ ಗಳು ಈಗ ನಟಿಯನ್ನು ‘ಕ್ವೀನ್’ ಎಂದು ಕರೆಯುತ್ತಿದ್ದಾರೆ.
ಅದೇನೇ ಇರ್ಲಿ.. ಐಶ್ವರ್ಯ ಮಗಳೊಂದಿಗೆ ನ್ಯೂಯಾರ್ಕ್ ಗೆ ಹೋಗಿ ಬಂದ್ಮೇಲೆ ಖುಷಿ ಖುಷಿಯಾಗಿ ಇದ್ದಾರೆ.. ಸೆಲೆಬ್ರಿಟಿಗಳು ಅಂದ್ಮೇಲೆ ಸಣ್ಣ ವಿಚಾರವೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗೋದು ಕಾಮನ್.. ಹರಿದಾಡ್ತಿರುವ ಡಿವೋರ್ಸ್ ಗಾಸಿಪ್ ಬಗ್ಗೆ ಇನ್ನಾದ್ರೂ ಬಚ್ಚನ್ ಫ್ಯಾಮಿಲಿ ಬ್ರೇಕ್ ಹಾಕ್ತಾರಾ ಅಂತಾ ಕಾದು ನೋಡ್ಬೇಕಾಗಿದೆ.