ಪಾಟೀದಾರ್ ಗೆ 2ನೇ ಕಪ್ ಚಾಲೆಂಜ್ – ಅಗ್ನಿಪರೀಕ್ಷೆ ಗೆಲ್ತಾರಾ ಕಿಶನ್ & ಪರಾಗ್?
10 ಟೀಂ.. ಕ್ಯಾಪ್ಟನ್ಸ್ ಫೈಟ್ ಹೇಗಿದೆ?

2026ರ ಐಪಿಎಲ್ಗೆ ಫ್ರಾಂಚೈಸಿಗಳೆಲ್ಲಾ ಪವರ್ಫುಲ್ ಆಗೇ ಪ್ರಿಪೇರ್ ಆಗ್ತಿದ್ದಾರೆ. ಮಿನಿ ಆಕ್ಷನ್ ಬಳಿಕ ಒಂದಷ್ಟು ತಂಡಗಳಲ್ಲಿ ಆಟಗಾರರೂ ಬದಲಾಗಿದ್ದಾರೆ. ಕ್ಯಾಪ್ಟನ್ಸ್ ಕೂಡ ಚೇಂಜ್ ಆಗಿದ್ದಾರೆ. 19ನೇ ಸೀಸನ್ ಐಪಿಲ್ ಗ್ರ್ಯಾಂಡ್ ಓಪನಿಂಗ್ಗೆ ಇನ್ನೊಂದೇ ವಾರ ಬಾಕಿ. ಮುಂದಿನ ಶನಿವಾರದಿಂದ ಅದ್ಧೂರಿಯಾಗಿ ಐಪಿಎಲ್ ಆರಂಭವಾಗಲಿದೆ. ಮೊದಲ ಮ್ಯಾಚಲ್ಲೇ ಬೆಂಗಳೂರು ಮತ್ತು ಹೈದ್ರಾಬಾದ್ ತಂಡಗಳು ಮುಖಾಮುಖಿ ಆಗ್ತಿದ್ದಾರೆ. ಈ ಸಲ ಎರಡು ಫ್ರಾಂಚೈಸಿಗಳು ಹೊಸ ಕ್ಯಾಪ್ಟನ್ನೊಂದಿಗೆ ಜರ್ನಿ ಸ್ಟಾರ್ಟ್ ಮಾಡ್ತಿದ್ದಾರೆ.
ಇದನ್ನೂ ಓದಿ : 9 ಗಲ್ಫ್ ರಾಷ್ಟ್ರಗಳ ಏರ್ಸ್ಪೇಸ್ ಪ್ರವೇಶಕ್ಕೆ ನಿರ್ಬಂಧ – ವಿಮಾನಯಾನ ಕಂಪನಿಗಳಿಗೆ DGCA ಸೂಚನೆ
ಹೈದ್ರಾಬಾದ್ ಗೆ ಕಿಶನ್, ರಾಜಸ್ಥಾನಕ್ಕೆ ಪರಾಗ್ ನಾಯಕ!
10 ತಂಡಗಳ ಪೈಕಿ ಈ ಬಾರಿ ಟೂರ್ನಿಗೆ ಎರಡು ತಂಡಗಳು ನಾಯಕರ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿವೆ. ಮೊದಲನೇದಾಗಿ ರಾಜಸ್ಥಾನ ರಾಯಲ್ಸ್. ರಾಜಸ್ಥಾನ ಕ್ಯಾಪ್ಟನ್ ಆಗಿದ್ದ ಸಂಜು ಸ್ಯಾಮ್ಸನ್ ಮಿನಿ ಆಕ್ಷನ್ ಗೂ ಮುನ್ನ ಟ್ರೇಡ್ ವಿಂಡೋ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸೇರಿದ್ರು. ಸೋ ಪಿಂಕ್ ಆರ್ಮಿಗೆ ಈಗ ರಿಯಾನ್ ಪರಾಗ್ ನಾಯಕನಾಗಿ ಪಟ್ಟಕ್ಕೇರಿದ್ದಾರೆ. ಇನ್ನು ಆರೆಂಜ್ ಆರ್ಮಿ ಸನ್ ರೈಸರ್ಸ್ ಹೈದ್ರಾಬಾದ್ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಇಂಜುರಿಯಾಗಿರೋದ್ರಿಂದ ಆರಂಭದ ಪಂದ್ಯಗಳಿಗೆ ಇಶಾನ್ ಕಿಶನ್ ಲೀಡರ್ಶಿಪ್ನಲ್ಲಿ ಕಣಕ್ಕಿಳೀತಾರೆ. ಸೋ ಈ ಎರಡು ಟೀಮ್ಸ್ ಬಿಟ್ರೆ ಉಳಿದೆಲ್ಲಾ ತಂಡಗಳು ಸೇಮ್ ಸ್ಕಿಪ್ಪರ್ ಜೊತೆಯೇ ಆಡ್ತಾರೆ.
ಐಪಿಎಲ್ ನಲ್ಲಿ ನಾಯಕರ ಖದರ್!
ತಂಡ ನಾಯಕ ಸಂಭಾವನೆ
ಆರ್ ಸಿಬಿ ರಜತ್ ಪಾಟಿದಾರ್ 11 ಕೋಟಿ
ಎಂಐ ಹಾರ್ದಿಕ್ ಪಾಂಡ್ಯ 16.35 ಕೋಟಿ
ಜಿಟಿ ಶುಭ್ ಮನ್ ಗಿಲ್ 16.5 ಕೋಟಿ
ಎಲ್ ಎಸ್ ಜಿ ರಿಷಭ್ ಪಂತ್ 27 ಕೋಟಿ
ಸಿಎಸ್ ಕೆ ರುತುರಾಜ್ ಗಾಯಕ್ವಾಡ್ 18 ಕೋಟಿ
ಕೆಕೆಆರ್ ಅಜಿಂಕ್ಯ ರಹಾನೆ 1.5 ಕೋಟಿ
ಡಿಸಿ ಅಕ್ಷರ್ ಪಟೇಲ್ 16.5 ಕೋಟಿ
ಪಿಬಿಕೆಸ್ ಶ್ರೇಯಸ್ ಅಯ್ಯರ್ 26.75 ಕೋಟಿ
ಎಸ್ ಆರ್ ಹೆಚ್ ಇಶಾನ್ ಕಿಶನ್ 11.25 ಕೋಟಿ
ಆರ್ ಆರ್ ರಿಯಾನ್ ಪರಾಗ್ 14 ಕೋಟಿ
ಆಲ್ಮೋಸ್ಟ್ ಎಲ್ಲಾ ಕ್ಯಾಪ್ಟನ್ಗಳು 11 ಕೋಟಿ ಮೇಲೆಯೇ ಸಂಭಾವನೆ ಪಡೀತಿದ್ದಾರೆ. ಬಟ್ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಒಬ್ರನ್ನ ಬಿಟ್ಟು. ರಹಾನೆ ಒಂದೂವರೆ ಕೋಟಿ ಮೂಲಕ ಅತೀ ಕಡಿಮೆ ಸಂಭಾವನೆ ಪಡೆಯುತ್ತಿರೋ ನಾಯಕ ಆಗಿದ್ದಾರೆ. ಇನ್ನು ರಿಷಭ್ ಪಂತ್ 27 ಕೋಟಿಯೊಂದಿಗೆ ಐಪಿಎಲ್ ಇತಿಹಾಸದಲ್ಲೇ ಕಾಸ್ಟ್ಲಿಯೆಸ್ಟ್ ಪ್ಲೇಯರ್ ಌಂಡ್ ಕಾಸ್ಟ್ಲಿಯೆಸ್ಟ್ ಕ್ಯಾಪ್ಟನ್ ಆಗಿದ್ದಾರೆ. ಸೋ ಈ ಮೊತ್ತಗಳನ್ನ ನೋಡಿದ್ರೇನೇ ಗೊತ್ತಾಗುತ್ತೆ ಕ್ಯಾಪ್ಟನ್ಗಳ ಖದರ್ ಹೆಂಗಿದೆ ಅಂತಾ. ಇನ್ನು ಕಿಶನ್ ಮತ್ತು ಪರಾಗ್ ಈ ಸಲ ನಾಯಕರ ಲಿಸ್ಟ್ನಲ್ಲಿದ್ದು ತಂಡಗಳನ್ನ ಹೇಗೆ ನಿಭಾಯಿಸ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಇದೆ.

ನೋಡಿರಿ

