ಹೋಳಿ ಹಬ್ಬದಂದೇ ಇಡೀ ಮಸೀದಿಗೆ ಕಪ್ಪು ಟಾರ್ಪಲ್ – ಪೊಲೀಸರೇ ಸೂಚನೆ ಕೊಟ್ಟಿದ್ದೇಕೆ..?

ಹೋಳಿ ಹಬ್ಬದಂದೇ ಇಡೀ ಮಸೀದಿಗೆ ಕಪ್ಪು ಟಾರ್ಪಲ್ – ಪೊಲೀಸರೇ ಸೂಚನೆ ಕೊಟ್ಟಿದ್ದೇಕೆ..?

ಹೋಳಿ ಅಂದ್ರೆನೆ ರಂಗು ರಂಗಿನ ಹಬ್ಬ. ಬಣ್ಣಗಳನ್ನ ಎರಚುತ್ತಾ ಬದುಕು ಕೂಡ ಕಲರ್ ಫುಲ್ ಆಗಿರಲಿ ಎಂದು ಸಂಭ್ರಮಿಸೋ ಕ್ಷಣ. ಆದ್ರೆ ಅದೇ ಹೋಳಿಯ ರಂಗು ತಾಗಬಾರದೆಂದು ಮಸೀದಿಯನ್ನೇ ಟಾರ್ಪಲ್​ನಲ್ಲಿ ಮುಚ್ಚಲಾಗಿದೆ. ಉತ್ತರಪ್ರದೇಶದ ಅಲಿಘರ್‌ನಲ್ಲಿ ಪೊಲೀಸರ ಸೂಚನೆಯ ಮೇರೆಗೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲಿಘರ್‌ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಮ್ ಮಸೀದಿಯಲ್ಲಿ ಟಾರ್ಪಲ್‌ನಿಂದ ಕವರ್ ಮಾಡಲಾಗಿದೆ.

ಇದನ್ನೂ ಓದಿ : ಬಣ್ಣ ಬಣ್ಣದ ರಂಗು ಎಲ್ಲೆಡೆಯೂ ಸಂಭ್ರಮದ ಗುಂಗು – ಹೋಳಿ ಹಬ್ಬಕ್ಕೂ ಇದೆ ವಿವಿಧ ಹಿನ್ನೆಲೆ..!

ಹೋಳಿ ಸಂದರ್ಭದಲ್ಲಿ ಹಿಂದಿನ ದಿನ ರಾತ್ರಿಯೇ ಮಸೀದಿಯನ್ನು ಟಾರ್ಪಲ್‌ನಿಂದ ಮುಚ್ಚಲಾಗುತ್ತದೆ. ಆದ್ದರಿಂದ ಹೋಳಿಯಿಂದಾಗಿ ಮಸೀದಿಯ ಮೇಲೆ ಯಾರೂ ಬಣ್ಣ ಎರಚುವುದಿಲ್ಲ. ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ. ಪೊಲೀಸರ ಸೂಚನೆಯ ಮೇರೆಗೆ ನಾವು ಮಸೀದಿಯನ್ನು ಟಾರ್ಪಲ್‌ನಿಂದ ಮುಚ್ಚಿದ್ದೇವೆ. ಆದ್ದರಿಂದ ಯಾರೂ ಮಸೀದಿಗೆ ಬಣ್ಣವನ್ನು ಎರಚಬಾರದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣಗಳಿಂದ ಕಾಪಾಡುವ ನಿಟ್ಟಿನಲ್ಲಿ ಕಪ್ಪು ಟಾರ್ಪಲ್​​ನಿಂದ ಮುಚ್ಚಲಾಗಿದೆ.

suddiyaana