ಅಲಿಯಾ ಭಟ್ ಫಿಟ್ನೆಸ್‌ ರಹಸ್ಯ! – ಬಾಲಿವುಡ್ ನಟಿಯ ದಿನಚರಿ ಹೇಗಿರುತ್ತೆ ಗೊತ್ತಾ?

ಅಲಿಯಾ ಭಟ್ ಫಿಟ್ನೆಸ್‌ ರಹಸ್ಯ! – ಬಾಲಿವುಡ್ ನಟಿಯ ದಿನಚರಿ ಹೇಗಿರುತ್ತೆ ಗೊತ್ತಾ?

ನಟಿ ಅಲಿಯಾ ಭಟ್ ಬಾಲಿವುಡ್ ನ ಟಾಪ್ ನಟಿಯರಲ್ಲಿ ಒಬ್ಬರು. ತಮ್ಮ ಬ್ಯೂಟಿ ಹಾಗೂ ನಟನೆ ಮೂಲಕ ಸಿನಿ ಪ್ರೇಕ್ಷಕರ ಹೃದಯ ಕದ್ದಿದ್ದ ನಟಿ ಆಲಿಯಾ ಭಟ್ ಫಿಟ್ ನೆಸ್ ವಿಚಾರದಲ್ಲಿ ಎಂದಿಗೂ ಕಾಂಪ್ರಮೈಸ್ ಮಾಡಿಕೊಂಡವರೇ ಅಲ್ಲ.ಅಷ್ಟಕ್ಕೂ ಮಗು  ಆದ ಮೇಲೆ ಆಲಿಯಾ ತೂಕ ಇಳಿಸಿದ್ದು ಹೇಗೆ? ಅವ್ರ ಡಯಟ್ ಪ್ಲಾನ್ ಏನು ಅನ್ನೋ ಮಾಹಿತಿ ಇಲ್ಲಿದೆ..

ಬಾಲಿವುಡ್‌ ನಟಿಯರಲ್ಲಿ ಆಲಿಯಾ ಭಟ್‌ ಎಂದರೆ ಸಾಕಷ್ಟು ಜನರಿಗೆ ಅಚ್ಚರಿ. ಪುಟ್ಟ ಹುಡುಗಿಯಂತೆ ಕಾಣಿಸುವ ಈ ನಟಿ ಹೇಗೆ ತನ್ನ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತಾರೆ. ಇವರ ಸುಂದರ ಮೈಕಟ್ಟಿನ ರಹಸ್ಯವೇನು ಎಂಬ ಸಂದೇಹ ಎಲ್ಲರಲ್ಲಿಯೂ ಇರುತ್ತದೆ. ರಾಕಿ ಔರ್‌ ರಾಣಿ ಕಾ ಪ್ರೇಮ್‌ ಕಹಾನಿ, ಬ್ರಹ್ಮಾಸ್ತ್ರ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಆಲಿಯಾ ಭಟ್‌ ಅವರು ಆಗಾಗ ಸೋಷಿಯಲ್‌ ಮೀಡಿಯಾದಲ್ಲೂ ತಮ್ಮ ತೂಕ ಇಳಿಕೆ ಕುರಿತಾದ ಅಪ್‌ಡೇಟ್‌ಗಳನ್ನು ನೀಡುತ್ತ ಇರುತ್ತಾರೆ. ಪ್ರತಿನಿತ್ಯ ತೂಕ ಹೆಚ್ಚಾಗುತ್ತದೆ ಎಂಬ ಭಯದಲ್ಲಿ ಸರಿಯಾಗಿ ಊಟ ಮಾಡದೆ ಇರುವ ಮಹಿಳೆಯರಿಗೆ, ಪುರುಷರಿಗೆ ಆಲಿಯಾ ಭಟ್‌ ಅವರ ವರ್ಕೌಟ್‌ ಮತ್ತು ಡಯೆಟ್‌ ಪ್ಲ್ಯಾನ್‌ಗಳು ಸ್ಪೂರ್ತಿಯಾಗುತ್ತೆ.

ಇದನ್ನೂ ಓದಿ: ನಟಿ ಆಲಿಯಾ ಭಟ್ ‘ಬ್ಲೌಸ್’ ಹಾಕಿಲ್ವಾ ? –ಈ ‘ಅಶ್ಲೀಲ’ ಫೋಟೋದ ಅಸಲಿ ವಿಚಾರ ಏನು ಗೊತ್ತಾ?

ಕರಣ್‌ ಜೋಹರ್‌ ಸಿನಿಮಾದಲ್ಲಿ ನಟಿಸಬೇಕಾದ ಸಂದರ್ಭದಲ್ಲಿ ಆಲಿಯಾ 68 ಕೆಜಿ ತೂಕ ಹೊಂದಿದ್ದರು. ಅವರ ವಯಸ್ಸು ಮತ್ತು ಎತ್ತರಕ್ಕೆ ಹೋಲಿಸಿದರೆ ಅವರ ತೂಕ 20 ಕೆಜಿ ಹೆಚ್ಚಿತ್ತು. ಹೀಗಾಗಿ ಆಲಿಯಾ ಭಟ್‌ ತೂಕ ಇಳಿಸಿಕೊಂಡಿರುವುದು ಹೇಗೆ ಎಂದು ಇಂಟರ್‌ನೆಟ್‌ನಲ್ಲಿ ಅತ್ಯಧಿಕ ಜನರು ಸರ್ಚ್‌ ಮಾಡಿದ್ದಾರೆ.   ಅವರಿಗೆ ರಹಾ ಎಂಬ  ಹುಟ್ಟಿದ ಬಳಿಕ ಆಲಿಯಾ ತೂಕ ಇಳಿಕೆ ಮಾಡಲು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಸಿನಿಮಾದಲ್ಲಿ ನಟಿಸುವ ಉದ್ದೇಶಕ್ಕಾಗಿ ತೂಕ ಇಳಿಕೆ ಅನಿವಾರ್ಯ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ವರ್ಕೌಟ್‌ ಎಂದರೆ ಕೇವಲ ಮೈಮಾಟ ರೂಪುಗೊಳ್ಳುವ ಪ್ರಕ್ರಿಯೆಯಲ್ಲ. ಅದು ನಮ್ಮ ರೋಗ ನಿರೋಧಕತೆ ಮತ್ತು ಶಕ್ತಿಯನ್ನು ಹೆಚ್ಚಿಸುವಂತೆ ಇರಬೇಕು. ನಾವು ಮಾಡುವ ವರ್ಕೌಟ್‌ ಆರೋಗ್ಯಕರವಾಗಿರಬೇಕು. ಅನಾರೋಗ್ಯಕರ ಡಯೆಟ್‌ ಮಾಡಬೇಡಿ” ಎಂದು ತಮ್ಮ ಫ್ಯಾನ್ಸ್‌ಗೆ ಅವರು ಹಲವು ಬಾರಿ ಸಲಹೆ ನೀಡಿದ್ದಾರೆ.

ಆಲಿಯಾ ಭಟ್‌ ಅವರ ಡಯೆಟ್‌ ಪ್ಲ್ಯಾನ್‌ನಲ್ಲಿ ಸಾವಯವ ಮತ್ತು ಆರೋಗ್ಯಕರ ಆಹಾರ ಇರುತ್ತದೆ. ಈಕೆಗೆ ಸಿಹಿ ತಿನ್ನುವುದು ಇಷ್ಟವಂತೆ. ಸಿಹಿ ಸಿಕ್ಕಾಗ ಬಿಡುವವರೇ ಅಲ್ಲ. “ನನಗೆ ಪರ್ಸನಲ್‌ ಟ್ರೈನರ್‌ (ಫಿಟ್ನಸ್‌ ಟ್ರೈನರ್‌) ದೊರಕಿದರು. ಅವರು ನನ್ನ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿದರು. ನಾನು ತರಕಾರಿ ಮತ್ತು ಚಿಕನ್‌ ತಿನ್ನುತ್ತೇನೆ. ನನಗೆ ಇಷ್ಟವಾಗಿರುವ ಎಲ್ಲಾ ಆಹಾರಗಳನ್ನು ತ್ಯಜಿಸಬೇಕಾಯಿತು” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನು ಬೆಳಗ್ಗೆ ಎದ್ದ ಬಳಿಕ ಬಿಸಿ ಹರ್ಬಲ್‌ ಟೀ ಅಥವಾ ಕಾಫಿ ಕುಡಿಯುತ್ತಾರೆ. ಇದಕ್ಕೆ ಸಕ್ಕರೆ ಹಾಕುವುದಿಲ್ಲ. ಇದರೊಂದಿಗೆ ಒಂದು ಬೌಲ್‌ನಲ್ಲಿ ವೆಜಿಟೇಬಲ್‌ ಪೋಹ ಅಥವಾ ಮೊಟ್ಟೆ ಬಿಳಿಭಾಗದ ಸ್ಯಾಂಡ್‌ವಿಚ್‌ ಸೇವಿಸುತ್ತಾರೆ. ಇನ್ನು ಬೆಳಗ್ಗೆ-ಮಧ್ಯಾಹ್ನದ ನಡುವೆ ಒಂದು ಬೌಲ್‌ ಹಣ್ಣುಗಳು (ಹೆಚ್ಚಾಗಿ ಪಪ್ಪಾಯಿ) ಅಥವಾ ಒಂದು ಇಂಡ್ಲಿ (ಕೊಂಚ ಸಾಂಬಾರ್‌). ಮಧ್ಯಾಹ್ನ ತುಪ್ಪ ಇಲ್ಲದೆ ಒಂದು ರೊಟ್ಟಿ. ಸಾಕಷ್ಟು ತರಕಾರಿ. ಒಂದು ಕಪ್‌ ದಾಲ್‌. ಮೊಸರು ಅಥವಾ ಚಿಕನ್‌ ಜತೆ ನವಣೆ. ಸಂಜೆ  ಸಕ್ಕರೆ ರಹಿತ ಚಹ ಅಥವಾ ಕಾಫಿ. ಒಂದು ಇಡ್ಲಿ ಸಾಂಬಾರ್ ತಿಂತಾರೆ. ಇನ್ನು ರಾತ್ರಿಯೂಟವಾದರೂ ಹೊಟ್ಟೆ ತುಂಬಾ ತಿನ್ತಾರ ಎಂದುಕೊಳ್ಳಬೇಡಿ. ರಾತ್ರಿಯೂ ತುಪ್ಪ ಇಲ್ಲದೆ ಒಂದು ರೊಟ್ಟಿ. ಒಂದು ಬೌಲ್‌ ತರಕಾರಿ. ಅಪರೂಪಕ್ಕೆ ಗ್ರಿಲ್‌ ಚಿಕನ್‌ ತಿಂತಾರೆ..

Shwetha M