ಬಂಗಲೆ‌ ಖರೀದಿಸಿದ 2 ವರ್ಷದ ರಾಹಾ! –  ಸ್ಟಾರ್‌ ಕಿಡ್‌ ₹250 ಕೋಟಿಯ ಒಡತಿ!

ಬಂಗಲೆ‌ ಖರೀದಿಸಿದ 2 ವರ್ಷದ ರಾಹಾ! –  ಸ್ಟಾರ್‌ ಕಿಡ್‌ ₹250 ಕೋಟಿಯ ಒಡತಿ!

ಬಾಲಿವುಡ್ ನ ಕ್ಯೂಟ್ ಕಪಲ್ ಗಳಲ್ಲಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿ ಹೆಚ್ಚು‌ ಜನಪ್ರಿಯವಾಗಿದೆ. ಈ ತಾರಾ ದಂಪತಿಗೆ ಮುದ್ದಾದ ಮಗಳಿದ್ದಾಳೆ. ಈ ದಂಪತಿಯ ಮುದ್ದಿನ ಮಗಳೆ ರಾಹಾ.. ಹಾಲುಗಲ್ಲದ ಈ‌ ಪುಟಾಣಿ ಸಣ್ಣ ವಯಸ್ಸಿನಲ್ಲೇ ಹೊಸ ದಾಖಲೆ ಬರ್ದಿದ್ದಾಳೆ.. ನೀಲಿ ಕಂಗಳ ಸುಂದರಿ ಈಗ ಕೋಟಿ ಕೋಟಿ ಒಡತಿ. ಇಷ್ಟು ಸಣ್ಣ ವಯಸ್ಸಲ್ಲೇ ರಾಹಾ ಇಷ್ಟು ಶ್ರೀಮಂತೆ ಆಗಿದ್ದು ಹೇಗೆ ಗೊತ್ತಾ?

ಇದನ್ನೂ ಓದಿ: ತಾಪ್ಸಿ ಪನ್ನು ಮದುವೆ ವಿಡಿಯೋ ಲೀಕ್ – ಗುಟ್ಟಾಗಿ ವಿವಾಹವಾಗಿದ್ದೇಕೆ ನಟಿ?

ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಗಳು ರಾಹಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಈ ಸ್ಟಾರ್ ದಂಪತಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಮಗಳ ಜೊತೆ ಪೋಸ್ ಕೊಡುತ್ತಾರೆ. ರಾಹಾ ಫೋಟೋ ಎಲ್ಲ ಕಡೆ ವೈರಲ್ ಆಗಿದೆ. ಜಗತ್ತಿನ ಕಣ್ಣಿಗೆ ಬಿದ್ದ ನಂತರ ರಾಹಾ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಾ ಇದೆ.. ರಾಹಾಳ ಕಣ್ಣಿನ ಬಣ್ಣ.. ಆಕೆ ಯಾರ ಹಾಗೆ ಇದ್ದಾಳೆ.. ಹೀಗೆ ನಾನಾ ತರಹದ ಟಾಕ್ ಶುರುವಾಗಿದೆ.. ಇದೀಗ ರಾಹಾ ಬಾಲಿವುಡ್​ನ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್ ಎಂಬ ಖ್ಯಾತಿ ಗಳಿಸುತ್ತಿದ್ದಾಳೆ. ಇದಕ್ಕೆ ಕಾರಣ ಆಗಿರೋದು ಆಲಿಯಾ ಹಾಗೂ ರಣಬೀರ್ ಕಪೂರ್ ಅವರ ನಿರ್ಧಾರ.

2022ರ ನವೆಂಬರ್​ 6ರಂದು ಹುಟ್ಟಿರೋ ರಾಹಾಳಿಗೆ ಈಗ ಎರಡೂವರೆ ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೇ ಈಕೆ ಇಂಥದ್ದೊಂದು ಖ್ಯಾತಿ ಪಡೆದುಕೊಂಡಿದ್ದಾಳೆ. ಅಷ್ಟಕ್ಕೂ ಈ ರೀತಿ ಖ್ಯಾತಿ ಗಳಿಸಲು ಕಾರಣ ಏನೆಂದರೆ, ರಣಬೀರ್ ಮತ್ತು ಆಲಿಯಾ, ರಾಹಾ ಕಪೂರ್  ಹೆಸರಿನಲ್ಲಿ ಭರ್ಜರಿ ಬಂಗಲೆಯೊಂದು ನೋಂದಣಿ ಮಾಡಿದ್ದಾರೆ.  ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್‌ ಬಚ್ಚನ್ ಅವರ ‘ಜಲ್ಸಾ’ ಸಮೀಪವೇ ಇರುವ  ಅತ್ಯಂತ ದುಬಾರಿ  ಬಂಗಲೆಯೊಂದರ ಒಡತಿಯಾಗಿದ್ದಾಳೆ ರಾಹಾ.  ಕೆಲ ದಿನಗಳ ಹಿಂದಷ್ಟೇ,  ರಣಬೀರ್ ಕಪೂರ್, ಆಲಿಯಾ ಭಟ್ ದಂಪತಿ ಮತ್ತು ರಣಬೀರ್ ತಾಯಿ, ನಟಿ  ನೀತು ಕಪೂರ್  ಮುಂಬೈನ ಬಾಂದ್ರಾದಲ್ಲಿ  ನಿರ್ಮಾಣ ಹಂತದ ಬಂಗಲೆಗೆ ಭೇಟಿ ಕೊಟ್ಟಿದ್ದರು. ಅದಾಗಲೇ ಆ ಬಂಗಲೆ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಅದನ್ನು ದಂಪತಿ ಖರೀದಿ ಮಾಡುತ್ತಾರೆ ಎಂದು ವರದಿಯಾಗಿತ್ತು. ಆದ್ರೆ ಇದೀಗ ಅದೇ ಬಂಗಲೆ ರಾಹಾ ಹೆಸರಿಗೆ ನೋಂದಣಿಯಾಗಿದೆ. ಅಷ್ಟಕ್ಕೂ ಈ ಬಂಗಲೆಯ ಬೆಲೆ  250 ಕೋಟಿ ರೂಪಾಯಿಗೂ ಅಧಿಕ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಹಾ ಸದ್ಯ ಈ ಐಷಾರಾಮಿ ಬಂಗಲೆಯ ಒಡತಿಯಾಗಿದ್ದು,  ʻಕಿರಿಯ ಮತ್ತು ಶ್ರೀಮಂತ ಸ್ಟಾರ್‌ ಕಿಡ್‌ʼ ಅನ್ನೋ ಬಿರುದು ಕೂಡ ಈಕೆಗೆ ಸಿಕ್ಕಿದೆ..

ಇನ್ನು  ಈ ಮನೆಗೂ ಈ ಕುಟುಂಬಕ್ಕೂ ಒಂದು ಸಂಬಂಧವೂ ಇದೆ. ಅದೇನೆಂದರೆ, 2020ರಲ್ಲಿ ರಿಷಿ ಕಪೂರ್ ಸಾಯುವ ಮೊದಲು, ಅವರು ಈ ಸೈಟ್‌ಗೆ ಭೇಟಿ ನೀಡಿದ್ದರು. ಆಲಿಯಾ ಮತ್ತು ರಣಬೀರ್ ಸೆಪ್ಟೆಂಬರ್ 2022ರಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಲಿಯಾ ಗರ್ಭಿಣಿಯಾಗಿದ್ದರು. ಈ ಬಂಗಲೆ ಜತೆಗೆ ಆಲಿಯಾ ಮತ್ತು ರಣಬೀರ್ ಇಬ್ಬರೂ ಬಾಂದ್ರಾ ಪ್ರದೇಶದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಅವುಗಳ ಮೌಲ್ಯ 60 ಕೋಟಿ ರೂಪಾಯಿಗಿಂತ ಹೆಚ್ಚು. ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಇತ್ತೀಚೆಗೆ ಬಾಂದ್ರಾದಲ್ಲಿ 15 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಂಗಲೆ ಪೂರ್ಣವಾದ ಬಳಿಕ ಇಡೀ ಕಪೂರ್ ಕುಟುಂಬ, ನೀತು ಸೇರಿದಂತೆ ಇದೇ ಬಂಗಲೆಯಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಅಂತೂ ಮುದ್ದು ಪುಟಾಣಿ ರಾಹಾ ಈಗ ತನ್ನ‌ ಅಪ್ಪ-ಅಮ್ಮನ ನಿರ್ಧಾರದಿಂದ ದೊಡ್ಡ ಸುದ್ದಿಯಾಗಿದ್ದಾಳೆ.

Shwetha M