ಆಲಿಯಾ ಭಟ್ ಮತ್ತೆ ಪ್ರೆಗ್ನೆಂಟ್? – ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಣಬೀರ್ ಜೋಡಿ?

ನಟಿ ಆಲಿಯಾ ಭಟ್ ಮತ್ತು ಪತಿ ರಣಬೀರ್ ಕಪೂರ್ ಸದಾ ಟ್ರೆಂಡಿಂಗ್ನಲ್ಲಿರುವ ಬಾಲಿವುಡ್ ಕಪಲ್. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಏಪ್ರಿಲ್ 2022 ರಲ್ಲಿ ವಿವಾಹವಾದರು. ಈ ದಂಪತಿಗೆ ಈಗ ಎರಡೂವರೆ ವರ್ಷದ ಮಗಳಿದ್ದಾಳೆ. ಇದೀಗ ಆಲಿಯಾ ಮತ್ತೆ ತಾಯಿ ಆಗ್ತಿದ್ದಾರಾ ಅನ್ನೋ ಪ್ರಶ್ನೆ ಫ್ಯಾನ್ಸ್ನ ಕಾಡ್ತಿದೆ.
ಇದನ್ನೂ ಓದಿ; ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೆ ಜಾರಿದ ಬೆಂಗಳೂರು ಟೀಂ! – ಪ್ಲೇಆಫ್ನಲ್ಲಿ RCBಗೆ ಎದುರಾಳಿ ಯಾರು?
ಆಲಿಯಾ ಭಟ್ ಅವರು ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿ ಆಗಿದ್ದಾರೆ. ಫ್ರಾನ್ಸ್ನಲ್ಲಿ ನಡೆಯುತ್ತಿರುವ ಈ ಸಿನಿಮೋತ್ಸವದಲ್ಲಿ ಆಲಿಯಾ ಮೊದಲ ಬಾರಿಗೆ ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ್ದಾರೆ. ಅವರು ಪೋಸ್ ಕೊಡುವಾಗ ಹೊಟ್ಟೆ ಸ್ವಲ್ಪ ಮುಂದೆ ಬಂದಂತೆ ಕಾಣಿಸಿದೆ. ಇದರಿಂದ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಇದೀಗ ಆಲಿಯಾ ಭಟ್ ಅವರು ಮತ್ತೊಂದು ಮಗು ಹೊಂದಲು ರೆಡಿ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
‘ಆಲಿಯಾ ಪ್ರೆಗ್ನೆಂಟ್ ರೀತಿ ಕಾಣಿಸುತ್ತಾರೆ’ ಎಂದು ಕೆಲವರು ಹೇಳಿದ್ದಾರೆ. ‘ಇವರು ಮತ್ತೊಮ್ಮೆ ಪ್ರೆಗ್ನೆಂಟ್ ಆಗಿದ್ದಾರೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ವಿಡಿಯೋಗೆ ಬಹುತೇಕರು ಇದೇ ರೀತಿಯ ಕಮೆಂಟ್ ಮಾಡಿದ್ದಾರೆ. ಇದರಿಂದ ಕುತೂಹಲ ಮತ್ತಷ್ಟು ಜೋರಾಗಿದೆ.
ಆಲಿಯಾ ಭಟ್ ಅವರು ಮದುವೆ ಆದ ಕೇವಲ ಏಳು ತಿಂಗಳಿಗೆ ಮಗುವಿಗೆ ಜನ್ಮನೀಡಿದರು. ಮದುವೆಗೂ ಮೊದಲೇ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬಂತು. ಆದರೆ, ಮಗು ಏಳು ತಿಂಗಳಿಗೆ ಜನಿಸಿದೆ ಎಂದು ಕುಟುಂಬದವರು ಹೇಳಿಕೊಂಡರು. ಆ ಬಳಿಕ ಆಲಿಯಾ ಭಟ್ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಈಗ ಅವರ ಕೈಯಲ್ಲಿ ಕೆಲ ಪ್ರಮುಖ ಸಿನಿಮಾಗಳು ಇವೆ. ಹೀಗಿರುವಾಗಲೇ ಅವರಿಗೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಅವರಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಆಲಿಯಾ-ರಣಬೀರ್ ದಂಪತಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.