ಸೌಂದರ್ಯ ಚಿಕಿತ್ಸೆಯಿಂದ ಪಾರ್ಶ್ವವಾಯು – ಆಲಿಯಾ ಭಟ್ ಕೆರಿಯರ್ ಎಂಡ್?
ಬಾಲಿವುಡ್ ನಟಿ ಶಾಕಿಂಗ್ ಮಾತು..!

ಸೌಂದರ್ಯ ಚಿಕಿತ್ಸೆಯಿಂದ ಪಾರ್ಶ್ವವಾಯು – ಆಲಿಯಾ ಭಟ್ ಕೆರಿಯರ್ ಎಂಡ್?ಬಾಲಿವುಡ್ ನಟಿ ಶಾಕಿಂಗ್ ಮಾತು..!

ಆಲಿಯಾ ಭಟ್.‌. ಬಾಲಿವುಡ್‌ ನ ಬಹುಬೇಡಿಕೆಯ ನಟಿ.. ಈಕೆಯ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.. ಮಗುವಾದ ಬಳಿಕ ಕೂಡ ಸಿನಿಮಾ ಇಂಡಸ್ಟ್ರಿಗೆ ಮರಳಿದ್ದು, ಒಂದಾದ ಮೇಲೊಂದು ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ.. ಇದೀಗ ಆಲಿಯಾ ಭಟ್‌ ಸೌಂದರ್ಯ ಹಾಗೂ ಆರೋಗ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಆಲಿಯಾ ಸೌಂದರ್ಯ ಚಿಕಿತ್ಸೆ ಮಾಡಿಸಲು ಹೋಗಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ ಎಂಬ ಸುದ್ದಿ ಜೋರಾಗೇ ಹಬ್ತಾ ಇದೆ.. ನಿಜಕ್ಕೂ ಆಲಿಯಾ ಪಾರ್ಶ್ವವಾಯುವಿಗೆ ತುತ್ತಾಗಿದ್ರಾ? ಹರಿದಾಡ್ತಿರೋ ಸುದ್ದಿ ಬಗ್ಗೆ ಆಲಿಯಾ ಹೇಳಿದ್ದೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 70 ವರ್ಷ ಮೆಲ್ಪಟ್ಟವರಿಗೆ ‘ಆಯುಷ್ಮಾನ್ ಭಾರತ್’ – ರೂಲ್ಸ್ ಏನು..? ಕಾರ್ಡ್‌ಗೆ ಅಪ್ಲೈ ಮಾಡೋದ್ ಹೇಗೆ?

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಒಂದಾದಮೇಲೊಂದು ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ.. ಸಿನಿಮಾ ಜೊತೆ ಜೊತೆಗೆ ಫ್ಯಾಮಿಲಿಗೂ ಟೈಮ್‌ ಕೊಡ್ತಾ ಇದ್ದಾರೆ.. ಮಗು ಆದ್ಮೇಲೆ ಹೆಣ್ಮಕ್ಕಳಿದೆ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗೋದು ಸಾಮಾನ್ಯ.. ಆದ್ರೆ ಆಲಿಯಾ ಫ್ಯಾನ್ಸ್‌ ಮಾತ್ರ ಬೇರೆ ವಿಚಾರಕ್ಕೆ ಬೊಟ್ಟು ಮಾಡಿ ಮಾತನಾಡುತ್ತಿದ್ದಾರೆ..  ಆಲಿಯಾರ ಮುಖದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿ, ಆಕೆಯ ಮುಖ ಮೊದಲಿನಂತಿಲ್ಲ. ಆಲಿಯಾರ ನಗು ಹಾಗೂ ಮಾತನಾಡುವ ಶೈಲಿಯೂ ಬದಲಾಗಿದೆ. ಆಲಿಯಾರ ಮುಖ ಬೇರೆ ಆಕಾರವನ್ನೇ ಪಡೆದುಕೊಂಡಿದೆ ಎಂದು ಗುರುತಿಸಿದ್ದರು. ಇದೇ ಹೊತ್ತಲ್ಲೇ  ಕಾಸ್ಮೆಟಿಕ್ ಸರ್ಜನ್ ಒಬ್ಬರು ಉರಿಯೋ ಬೆಂಕಿಗೆ ತುಪ್ಪ ಸುರಿವಂತೆ ಶಾಕಿಂಗ್‌ ಸ್ಟೇಟ್‌ಮೆಂಟ್‌ ಕೊಟ್ಟು ಬಿಟ್ಟಿದ್ದಾರೆ.. ಕಾಸ್ಮೆಟಿಗ್‌ ಸರ್ಜರಿ ಮಾಡಿಸಲು ಹೋಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ ಎಂದು ಹೇಳಿದ್ರು.. ಈ ಹೇಳಿಕೆ ಬಿಟೌನ್‌ ನಲ್ಲಿ ಬಾರಿ ಸದ್ದು ಮಾಡ್ತಾ ಇದೆ.

ವೈದ್ಯ ಸಾಯಿ ಗಣಪತಿ ಎಂಬುವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ರು.. ‘ಆಲಿಯಾ ಭಟ್​ರ ಇತ್ತೀಚೆಗಿನ ವಿಡಿಯೋ, ಚಿತ್ರಗಳನ್ನು ನೋಡಿದರೆ ಅವರಿಗೆ ಮುಖದ ಪಾರ್ಶ್ವವಾಯು ಆಗಿದೆ ಎನ್ನುವುದು ಗೊತ್ತಾಗುತ್ತೆ.. ಅವ್ರ ಬಾಯಿ ಸೊಟ್ಟ ಮಾಡಿ ನಗುತ್ತಾರೆ.. ಬಾಯಿ ಸೊಟ್ಟ ಮಾಡಿ ಮಾತನಾಡುತ್ತಾರೆ.. ಅವರ ಮುಖದ ಒಂದು ಭಾಗ ಮಾತ್ರ ಸಕ್ರಿಯವಾಗಿದೆ. ಒಂದು ಭಾಗ ಸತ್ವ ಕಳೆದುಕೊಂಡಿದೆ. ಅವರು ಬೋಟಾಕ್ಸ್  ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಅನಿಸುತ್ತೆ.. ಇದು ಒಂದು ಸೌಂದರ್ಯ ಹೆಚ್ಚು ಮಾಡುವ ಶಸ್ತ್ರಚಿಕಿತ್ಸೆಯಾಗಿದೆ.. ಈ ಶಸ್ತ್ರ ಚಿಕಿತ್ಸೆ  ಯಶಸ್ವಿಯಾಗಿಲ್ಲ ಎಂದು ಅವ್ರ ಮುಖ ನೋಡಿ ಸ್ಪಷ್ಟವಾಗಿ ಹೇಳಬಹುದು. ಇದು ಎಂಥಹವರಿಗೂ ಆಗಬಹುದು.. ನನ್ನ ಕೆಲ ರೋಗಿಗಳಿಗೂ ಹೀಗೆ ಆಗಿತ್ತು.. ಅದನ್ನು ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಬಹುದು ಎಂದು ಹೇಳಿದ್ರು.. ಸಾಯಿ ಗಣಪತಿಯ ಈ ವಿಡಿಯೋ ಭಾರಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಲಿಯಾರ ಹಳೆಯ ಫೋಟೊ ಮತ್ತು ಈಗಿನ ಫೋಟೊ ವಿಡಿಯೋಗಳನ್ನು ಹೋಲಿಸಿ ನೋಡಿ ಆಲಿಯಾಗೆ ಪಾರ್ಶ್ವವಾಯು ಆಗಿದೆ. ಅವರ ಬೋಟಾಕ್ಸ್ ಶಸ್ತ್ರಚಿಕಿತ್ಸೆ ವಿಫಲವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ರು.. ಇದೀಗ ಆಲಿಯಾ ಭಟ್ ಸುದೀರ್ಘ ಪೋಸ್ಟ್ ಒಂದರ ಮೂಲಕ ಎಲ್ಲದಕ್ಕೂ ಖಡಕ್‌ ಆಗೇ ಉತ್ತರ ನೀಡಿದ್ದಾರೆ.

ತನ್ನ ಬಗ್ಗೆ ಹರಿದಾಡ್ತಿರೋ ಸುದ್ದಿಯನ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಆಲಿಯಾ ಬರೆದುಕೊಂಡಿದ್ದಾರೆ. ಸೌಂದರ್ಯವರ್ಧಕ ಚಿಕಿತ್ಸೆ ಪಡೆಯುವವರ ಬಗ್ಗೆ ನನಗೆ ಯಾವುದೇ ದೂರು ಅಥವಾ ಬೇಸರ ಇಲ್ಲ. ನಿಮ್ಮ ದೇಹ ನಿಮ್ಮ ಇಷ್ಟ. ಆದರೆ ನನ್ನ ಬಗ್ಗೆ ಹಬ್ಬಿಸಲಾಗುತ್ತಿರುವ ಸುದ್ದಿಗಳು ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ನನ್ನದು ಸೊಟ್ಟ ನಗೆ, ವಿಚಿತ್ರ ರೀತಿಯ ಮಾತುಗಾರಿಕೆ ಎಂದೆಲ್ಲ ಹೇಳುತ್ತಿದ್ದಾರೆ. ಒಬ್ಬ ವ್ಯಕ್ತಿಯ ಮುಖದ ಬಗ್ಗೆ ಹೀಗೆಲ್ಲ ಮಾತನಾಡಲು ಹೇಗೆ ಸಾಧ್ಯ? ಇದು ಅವಶ್ಯಕತೆ ಇಲ್ಲ ಸೂಕ್ಷ್ಮ ವಿಮರ್ಶೆ. ಈ ಸುಳ್ಳುಗಳಿಗೆ ‘ಸೈಂಟಿಫಿಕ್’ ರೀಸನ್ ಸಹ ನೀಡುತ್ತಿದ್ದೀರಿ. ನನಗೆ ಪಾರ್ಶ್ವವಾಯು ಆಗಿದೆಯೇ? ನೀವೇನು ತಮಾಷೆ ಮಾಡುತ್ತಿದ್ದೀರಾ? ಇಂಥಹಾ ಒಂದು ಗಂಭೀರ ಹೇಳಿಕೆಯನ್ನು ಯಾವುದೇ ಸಾಕ್ಷಿ, ವಿಚಾರಣೆ ಇಲ್ಲದೆ ನೀವು ನೀಡಿದ್ದೀರಿ.. ಇದನ್ನೆಲ್ಲ ನೀವು ಮಾಡುತ್ತಿರುವುದು ಯಾಕೆ? ಜನಪ್ರಿಯತೆಗಾ?  ಅಥವಾ ಹಣ ಮಾಡಲಾ? ಇದರಿಂದ ಯುವ ಸಮಾಜಕ್ಕೆ ಏನು ಸಂದೇಶ ನೀಡುತ್ತಿದ್ದೀರಿ. ಮಹಿಳೆಯ ದೇಹ, ಮುಖ, ಖಾಸಗಿ ಜೀವನ ಬಗ್ಗೆ ಚರ್ಚೆ ಮಾಡುವ ಹೀನ ಮನಸ್ಥಿತಿಯವರ ಬಗ್ಗೆ ನಾವು ದನಿ ಎತ್ತಲೇ ಬೇಕಿದೆ. ನಮ್ಮ ದೇಹ ವಿಮರ್ಶೆಯ, ಚರ್ಚೆಯ ವಸ್ತು ಆಗಿಬಿಟ್ಟಿದ್ದೆಯೇ? ವ್ಯಕ್ತಿಗಳ ಭಿನ್ನತೆಯನ್ನು, ವ್ಯಕ್ತಿತ್ವವನ್ನು ನಾವು ಸಂಭ್ರಮಿಸಬೇಕಿದೆ, ಅದರ ಹೊರತಾಗಿ ಹೀಗೆ ಜಡ್ಜ್​ಮೆಂಟಲ್ ಆಗುವುದು ವಿಮರ್ಶೆ, ಟೀಕೆ ಮಾಡುವುದು ಹಾನಿಕಾರಕ, ಅದು ಸಾಕಾಗಿ ಹೋಗಿದೆ ಅಂತಾ ಆಲಿಯಾ ಸುಳ್ಳು ಸುದ್ದಿ ಹಬ್ಬಿಸುವವರಿಗೆ ವಾರ್ನ್‌ ಮಾಡಿದ್ದಾರೆ.. ಈ ಮೂಲಕ ನಟಿ ತಮ್ಮ ವಿರುದ್ದ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

Shwetha M