ಜನಪ್ರಿಯ “ಚಿಕನ್ ಟಿಕ್ಕಾ ಮಸಾಲ” ಕಂಡುಹಿಡಿದ ಬಾಣಸಿಗ ಅಲಿ ಅಹ್ಮದ್ ನಿಧನ

ಜನಪ್ರಿಯ “ಚಿಕನ್ ಟಿಕ್ಕಾ ಮಸಾಲ” ಕಂಡುಹಿಡಿದ ಬಾಣಸಿಗ ಅಲಿ ಅಹ್ಮದ್ ನಿಧನ

ಗ್ಲಾಸ್ಗೋ: ಚಿಕನ್ ಟಿಕ್ಕಾ ನಾನ್ ವೆಜ್ ಪ್ರಿಯರ  ಫೆವರೆಟ್. ರೆಸ್ಟೋರೆಂಟ್ ಗೆ ಹೋದಾಗ ಚಿಕನ್ ಟಿಕ್ಕಾಆರ್ಡರ್ ಮಾಡುತ್ತಾರೆ. ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದಿರುವುದು ಖ್ಯಾತ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್.  77ನೇ ವಯಸ್ಸಿನ ಅಲಿ ಅಹ್ಮದ್ ಗುರುವಾರ ಮುಂಜಾನೆ  ನಿಧನರಾಗಿದ್ದಾರೆ.

ಅಲಿ ಅಹ್ಮದ್ ಅಸ್ಲಾಮ್ ಅವರು ಗುರುವಾರ ನಿಧನರಾಗಿದ್ದಾರೆ ಎಂದು ಸ್ಕಾಟ್ಲೆಂಡ್ ನ ಗ್ಲಾಸ್ಗೋದ ಶೀಶ ಮಹಲ್ ಹೋಟೆಲ್ ನಲ್ಲಿ ಘೋಷಣೆ ಮಾಡಲಾಯಿತು. ಗೌರವ ಸೂಚಕವಾಗಿ 48 ಗಂಟೆಗಳ ಕಾಲ ಹೋಟೆಲ್ ಮುಚ್ಚಲಾಗಿದೆ.

ಇದನ್ನೂ ಓದಿ: ನಿಲ್ಲುತ್ತಿಲ್ಲ ಚೀನಾ ಕುತಂತ್ರ – ಅತಿಕ್ರಮಣದ ಸಾಕ್ಷ್ಯ ನುಡಿಯುತ್ತಿವೆ ಉಪಗ್ರಹದ ಚಿತ್ರಗಳು

1970 ರ ದಶಕದಲ್ಲಿ ತಮ್ಮ ರೆಸ್ಟೋರೆಂಟ್ ಶಿಶ್ ಮಹಲ್‌ನಲ್ಲಿ ಟೊಮೆಟೊ ಸೂಪ್‌ನಿಂದ ತಯಾರಿಸಿದ ಸಾಸ್ ಅನ್ನು ಸುಧಾರಿಸುವ ಮೂಲಕ ಅಲಿ ಅಹ್ಮದ್ ಅಸ್ಲಾಮ್, ಚಿಕನ್ ಟಿಕ್ಕಾ ಮಸಾಲಾ ಖಾದ್ಯವನ್ನು ಕಂಡುಹಿಡಿದರು.

ಒಮ್ಮೆ ಗ್ರಾಹಕರಿಗೆ ಸರ್ವ್ ಮಾಡಿದಾಗ ಚಿಕನ್ ಟಿಕ್ಕಾ ತುಂಬಾ ಡ್ರೈ ಇದೆ ಎಂದು ದೂರಿದ್ದರು. ನಂತರ ಚಿಕನ್ ಟಿಕ್ಕಾ ಮಸಾಲಾ ಪಾಕವಿಧಾನವನ್ನು ಕಂಡು ಹಿಡಿದೆ ಎಂದು ಅಲಿ 2009 ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಚಿಕನ್ ಟಿಕ್ಕಾ ಮಸಾಲಾ ಬ್ರಿಟನ್ ರೆಸ್ಟೋರೆಂಟ್ ಗಳಲ್ಲಿ ಭಾರೀ ಜನಮನ್ನಣೆ ಪಡೆದಿದೆ. ‘ಚಿಕನ್ ಟಿಕ್ಕಾ ಮಸಾಲಾ ಈಗ ಬ್ರಿಟಿಷ್ ರಾಷ್ಟ್ರೀಯ ಭಕ್ಷ್ಯವಾಗಿದೆ. ಯಾಕೆಂದರೆ ಅದು ಹೆಚ್ಚು ಜನಪ್ರಿಯವಾಗಿದೆ ಎಂದಲ್ಲ, ಅಲ್ಲದೆ ಇದು ಬ್ರಿಟನ್ ಬಾಹ್ಯ ಪ್ರಭಾವಗಳನ್ನು ಹೀರಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ವಿಧಾನದ ಪರಿಪೂರ್ಣ ಸಂಕೇತವಾಗಿದೆ’ ಎಂದು ಮಾಜಿ ವಿದೇಶಾಂಗ ಸಚಿವ ರಾಬಿನ್ ಕುಕ್ ಹೇಳಿದ್ದಾರೆ.

suddiyaana