ಟೆನಿಸ್ ದೈತ್ಯ ಜೊಕೊವಿಕ್ ಗೆಲುವಿನ ಓಟಕ್ಕೆ ಬ್ರೇಕ್..! – ಚೊಚ್ಚಲ ವಿಂಬಲ್ಡನ್ ಗೆದ್ದ ಅಲ್ಕರಾಝ್

ಟೆನಿಸ್ ದೈತ್ಯ ಜೊಕೊವಿಕ್ ಗೆಲುವಿನ ಓಟಕ್ಕೆ ಬ್ರೇಕ್..! – ಚೊಚ್ಚಲ ವಿಂಬಲ್ಡನ್ ಗೆದ್ದ ಅಲ್ಕರಾಝ್

ವಿಂಬಲ್ಡನ್ ಲೋಕದಲ್ಲಿ ಹೊಸ ತಾರೆಯ ಉದಯವಾಗಿದೆ. ಕಳೆದ 10 ವರ್ಷಗಳಿಂದ ವಿಂಬಲ್ಡನ್ ಸೆಂಟರ್ ಕೋರ್ಟ್‌ನಲ್ಲಿ ಸೋಲಿಲ್ಲದ ಸರದಾರನಾಗಿ ಆರ್ಭಟಿಸಿದ್ದ ನೊವಾಕ್ ಜೊಕೊವಿಕ್‌ ಗೆ ಸೋಲುಣಿಸಿ ವಿಶ್ವ ಶ್ರೇಯಾಂಕ ಆಟಗಾರ ಕಾರ್ಲೊಸ್‌ ಅಲ್ಕರಾಝ್‌ ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ – ಯಶಸ್ವಿ ಜೈಸ್ವಾಲ್ ಈಗ ಹಲವು ದಾಖಲೆಗಳ ಸರದಾರ

ಸತತ ನಾಲ್ಕು ವಿಂಬಲ್ಡನ್ ಗೆದ್ದಿದ್ದ ಸರ್ಬಿಯಾದ ಸೂಪರ್‌ಸ್ಟಾರ್ ನೊವಾಕ್ ಜೊಕೊವಿಕ್  20ರ ಹರೆಯ ಕಾರ್ಲೋಸ್ ಅಲ್ಕರಾಝ್ ಎದುರು ಸೋತು ತನ್ನ ವಿಂಬಲ್ಡನ್ ಓಟಕ್ಕೆ ಬ್ರೇಕ್ ಹಾಕಿದ್ದಾರೆ. ವಿಂಬಲ್ಡನ್ ಪುರುಷರ ಸಿಂಗಲ್‌ನಲ್ಲಿ ಸರ್ಬಿಯಾದ ದಂತಕಥೆ ಜೊಕೊವಿಕ್ ಆಳ್ವಿಕೆಯನ್ನು ಅಂತ್ಯಗೊಳಿಸಿದ 20 ವರ್ಷದ ಅಲ್ಕರಾಝ್, 1-6, 7-6, 6-1, 3-6, 6-4 ಸೆಟ್‌ಗಳಿಂದ ಗೆದ್ದು ಮೊದಲ ಬಾರಿಗೆ ವಿಂಬಲ್ಡನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ಕೊನೆಯ ಬಾರಿಗೆ ಫೆಡರರ್ ಎದುರು ವಿಂಬಲ್ಡನ್ ಫೈನಲ್‌ನಲ್ಲಿ ಸೋಲನುಭವಿಸಿದ್ದ ಜೊಕೊವಿಕ್‌ಗೆ 4 ವರ್ಷಗಳ ಕಾಲ ಒಂದೇ ಒಂದು ಸೋಲು ಎದುರಾಗಿರಲಿಲ್ಲ.

ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲುವಿನ ಸಂಭ್ರಮ ಕಂಡು ವಿಂಬಲ್ಡನ್ ಮುಕುಟ ಗೆದ್ದ ಕಾರ್ಲೊಸ್‌ ಅಲ್ಕರಾಝ್‌ ವಿಶ್ವದ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳುವುದರ ಜೊತೆಗೆ 2003ರ ಬಳಿಕ ಟೆನ್ನಿಸ್‌ ಲೋಕದ ದಿಗ್ಗಜರಾದ ರೋಜರ್ ಫೆಡರರ್, ರಫಾಲ್ ನಡಾಲ್, ನೊವಾಕ್ ಜೊಕೋವಿಕ್, ಆಂಡಿ ಮರ್ರೆ ನಂತರ ವಿಂಬಲ್ಡನ್ ಗೆದ್ದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

suddiyaana