ಅಕ್ಷಯ ತೃತೀಯಾಗೆ ಆಭರಣ ಶಾಪಿಂಗ್ ಮಾಡುಬೇಕೆಂದುಕೊಂಡಿದ್ದೀರಾ! – ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಅಕ್ಷಯ ತೃತೀಯಾಗೆ ಆಭರಣ ಶಾಪಿಂಗ್ ಮಾಡುಬೇಕೆಂದುಕೊಂಡಿದ್ದೀರಾ! – ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಈ ಬಾರಿಯ ಅಕ್ಷಯ ತೃತೀಯಾಗೆ ಒಂದಿಷ್ಟು ಆಭರಣಗಳನ್ನು ಶಾಪಿಂಗ್ ಮಾಡುಬೇಕೆಂದುಕೊಂಡಿದ್ದೀರಾ! ಹಾಗಾದಲ್ಲಿ ಒಂದಿಷ್ಟು ಸಿಂಪಲ್ ಸಲಹೆಗಳನ್ನು ಫಾಲೋ ಮಾಡಿ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್. ಸಾಕಷ್ಟು ಆಫರ್ಸ್ ಹಾಗೂ ಡಿಸ್ಕೌಂಟ್ಸ್ ಎನ್ನುವುದಕ್ಕಿಂತ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಆಭರಣ ಮಳಿಗೆಗೆ ಮೊದಲು ಆದ್ಯತೆ ನೀಡಿ. ಖರೀದಿಸುತ್ತಿರುವ ಆಭರಣಗಳ ಬ್ರಾಂಡ್ ಅಧಿಕೃತವೇ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಿ.

ಚಿನ್ನ ಖರೀದಿಸುವುದಕ್ಕೂ ಮುನ್ನ ಅದರ ಶುದ್ಧತೆ, ಗುಣಮಟ್ಟ , ಟ್ರೆಂಡಿ ವಿನ್ಯಾಸವನ್ನು ಪರಿಗಣಿಸಿ. ಜಾಹೀರಾತಿನಲ್ಲಿಬರುವ ಆಭರಣಗಳಿಗೆ ಮಾರುಹೋಗಬೇಡಿ. ಖರೀದಿ ಮಾಡುವ ಮುನ್ನ ಅಂದಿನ ಚಿನ್ನದ ಬೆಲೆ ಎಷ್ಟೆಂದು ತಿಳಿದುಕೊಳ್ಳಿ. ಮಜೂರಿ, ವೇಸ್ಟೇಜ್, ಎಕ್ಸ್ಟ್ರಾ ಚಾರ್ಜಸ್ ಬಗ್ಗೆಯೂ ಅರಿವಿರಲಿ.

ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನವಲ್ಲ ಕಮ್ಮಿಗೆ ಸಿಗುವ ಈ ವಸ್ತುವನ್ನ ಮನೆಗೆ ತನ್ನಿ – ಬದಲಾಗುತ್ತೆ ನಿಮ್ಮ ಅದೃಷ್ಟ

ಖರೀದಿಸುವ ಮುನ ಚಿನ್ನದಲ್ಲಿ ಹಾಲ್‌ಮಾರ್ಕ್ ಸಿಂಬಲ್ ಇದೆಯೇ ಎಂದು ಪರೀಕ್ಷಿಸಿ. 24 ಕ್ಯಾರೆಟ್ ಚಿನ್ನವನ್ನು ಕೊಂಡುಕೊಳ್ಳಿ. ಚಿನ್ನದ ತೂಕದ ಕಡೆ ಗಮನಹರಿಸಿ. ಬಿಐಎಸ್ ಹಾಲ್ ಮಾರ್ಕ್ ಗುರುತಿನ ಬಂಗಾರವನ್ನು ಖರೀದಿಸಿ, ನಿಶ್ಚಿಂತೆಯಿಂದಿರಿ. ಆಭರಣದ ಬೈ-ಬ್ಯಾಕ್ ನೀತಿಗಳ ಬಗ್ಗೆ ಕೂಡ ಸಾಕಷ್ಟು ವಿಚಾರಿಸುವುದು ಉತ್ತಮ. ಹಲವು ಜ್ಯುವೆಲರಿಗಳು ಹಾಗೂ ಆಭರಣಗಳನ್ನು ಮರು ಖರೀದಿಸುವಾಗ ಲೇಬರ್ ವೇಸ್ಟೇಜ್ ಎಂದು ದರ ಕಡಿತ ಮಾಡುತ್ತಾರೆ. ಈ ಬಗ್ಗೆ ಗೊತ್ತಿರಲಿ.

ವಜ್ರಾಭರಣಗಳನ್ನು ಖರೀದಿಸುವ ಹಾಗೂ ಮಾರಾಟದ ವೇಳೆ ಬಿಲ್‌ಗಳನ್ನು ತಪ್ಪದೆ ಪಡೆಯಿರಿ. ಕೊಡು-ಕೊಳ್ಳುವಿಕೆಯ ದಾಖಲೆ ನಿಮ್ಮ ಬಳಿ ಇರಬೇಕಾದ್ದು ಅಗತ್ಯ ಎಂಬುದನ್ನು ಮರೆಯದಿರಿ. ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ಮಾಡುವಾಗ ಎಚ್ಚರ ವಹಿಸಿ. ಅಲ್ಲಿರುವ ಷರತ್ತು ಮತ್ತು ನಿಬಂಧನೆಗಳನ್ನು ಸರಿಯಾಗಿ ಓದಿಕೊಳ್ಳಿ. ಬ್ಯಾಂಕಿನ ಅಕೌಂಟ್ ನಂಬರ್ ಸರಿಯಾಗಿ ಬರೆಯಿರಿ. ಒಮ್ಮೆ ಖರೀದಿಸಿದರೆ ಪುನಃ ಹಿಂತಿರುಗಿಸಲು ಕಷ್ಟವಾಗಬಹುದು.

Kishor KV