ಪುತ್ತೂರಿನ ಪ್ರಖ್ಯಾತ ಹುಲಿವೇಷಧಾರಿ ಅಕ್ಷಯ್ ಕಲ್ಲೇಗ ಭೀಕರ ಹತ್ಯೆ – ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪಾತಕಿಗಳು

ಪುತ್ತೂರಿನ ಪ್ರಖ್ಯಾತ ಹುಲಿವೇಷಧಾರಿ ಅಕ್ಷಯ್ ಕಲ್ಲೇಗ ಭೀಕರ ಹತ್ಯೆ – ಕೊಲೆ ಮಾಡಿ ಪೊಲೀಸರಿಗೆ ಶರಣಾದ ಪಾತಕಿಗಳು

ಪುತ್ತೂರಿನ ಪ್ರಸಿದ್ಧ ನವರಾತ್ರಿ ಹುಲಿವೇಷ ತಂಡವಾದ ಕಲ್ಲೇಗ ಟೈಗಸ್೯ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೋಮವಾರ ಮಧ್ಯರಾತ್ರಿ ಪುತ್ತೂರು ಹೊರ ವಲಯದ ನೆಹರೂ ನಗರದಲ್ಲಿ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಚಾಡಿ ಮಾತು ಕೇಳಿ ಸೊಸೆ ಸಾಯುವಂತೆ ಮಾಡಿದ ಪಾಪಿಗಳು..! – ಐಶ್ವರ್ಯಾ ಸಾವಿಗೆ ಕಾರಣರಾದವರನ್ನು ಬಂಧಿಸಿದ ಪೊಲೀಸರು

ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಮುಖ್ಯಸ್ಥನಾಗಿ, ನವರಾತ್ರಿ ಸಮಯದಲ್ಲಿ ಹುಲಿವೇಷಧಾರಿಯಾಗಿ ಸಾಕಷ್ಟು ಫೇಮಸ್ ಆಗಿದ್ದ ಯುವಕ ಅಕ್ಷಯ್ ಕಲ್ಲೇಗ. ವಯಸ್ಸು ಇನ್ನೂ 24. ಜೀವನದಲ್ಲಿ ಎಷ್ಟೆಲ್ಲಾ ಸಾಧನೆ ಮಾಡಬೇಕು ಎಂಬ ಕನಸು ಮತ್ತು ಗುರಿ ಸ್ಪಷ್ಟವಾಗಿತ್ತು. ಇದರ ಮಧ್ಯೆ ಹುಲಿವೇಷಧಾರಿಯಾಗಿ ಪುತ್ತೂರಿನಲ್ಲಿ ಸಾಕಷ್ಟು ಹೆಸರು ಗಳಿಸಿದ್ದ. ಅಷ್ಟೇ ಅಲ್ಲ, ಅಕ್ಷಯ್ ನಡೆಸುತ್ತಿರುವ ಟೈಗರ್ಸ್ ತಂಡಕ್ಕೆ ಈಗಾಗಲೇ ಸ್ಟಾರ್ ಗಿರಿ ಬೇರೆ ಸಿಕ್ಕಿತ್ತು. ಈ ವರ್ಷದ ನವರಾತ್ರಿಯಲ್ಲೂ ಅಕ್ಟೋಬರ್ 18 ರಿಂದ ಊದು ಪೂಜೆಯೊಂದಿಗೆ ಪುತ್ತೂರಿನ ನಾನಾ ಕಡೆ ಇವರ ತಂಡ ಪ್ರದರ್ಶನ ನೀಡಿತ್ತು. ಪುತ್ತೂರಿನಲ್ಲಿ ಅ. 22ರಂದು ನಡೆದ ಪಿಲಿರಂಗ್ ಮತ್ತು ಪಿಲಿಗೊಬ್ಬು ಎಂಬ ಎರಡು ಹುಲಿ ವೇಷ ಸ್ಪರ್ಧೆಗಳಲ್ಲೂ ಇವರ ತಂಡ ಪ್ರಶಸ್ತಿ ಗಳಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಆಗಿದ್ದು ಮಾತ್ರ ದಾರುಣ ಘಟನೆ. ತನ್ನದೇ ಆದ ಬದುಕು ರೂಪಿಸಿಕೊಂಡಿದ್ದ ಅಕ್ಷಯ್ ಕಲ್ಲೇಗನನ್ನು ಪಾಪಿಗಳು ಬರ್ಬರವಾಗಿ ಕೊಂದು ಹಾಕಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್‌ನಲ್ಲಿ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್ ಮುಖ್ಯಸ್ಥನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಎರಡು ಸಾವಿರ ನೀಡುವ ಬಗ್ಗೆ ಮಾತುಕತೆ ನಡೆದಿದೆ. ಈ ವೇಳೆ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಹೀಗೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ. ಕೊನೆಗೆ ಮೂರಕ್ಕೂ ಅಧಿಕ ಮಂದಿಯ ತಂಡವು ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್‌ನಲ್ಲಿ ಅಕ್ಷಯ್‌ನನ್ನು ಅಟ್ಟಾಡಿಸಿ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಪುತ್ತೂರಿನ ಕೊಲೆ ನಂತರ ಮೂವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಬನ್ನೂರು ನಿವಾಸಿ ಮನೀಷ್, ಚೇತು ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಾಗುತ್ತಿದೆ.

ನೆಹರೂನಗರ ಬಳಿಯ ನಿವಾಸಿಯಾದ ಅಕ್ಷಯ್ ಅವರು ಚಂದ್ರಶೇಖರ ಮತ್ತು ಕಮಲ ದಂಪತಿಯ ಪುತ್ರ. 24ರ ಹರೆಯದ ಅಕ್ಷಯ್ ಕಳೆದ ಆರು ವರ್ಷಗಳ ಹಿಂದೆ ಕಲ್ಲೇಗ ಟೈಗಸ್೯ ಎಂಬ ಹೆಸರಿನ ಹುಲಿವೇಷ ತಂಡ ಕಟ್ಟಿದ್ದರು. ನೆಹರೂ ನಗರ ಪಕ್ಕದಲ್ಲಿರುವ ಕಲ್ಲೇಗದಲ್ಲಿ ಪ್ರಸಿದ್ಧ ಕಲ್ಕುಡ ದೈವದ ಕ್ಷೇತ್ರವಿದ್ದು, ಇದೇ ಕಲ್ಲೇಗದ ಹೆಸರಿನಲ್ಲಿ ಹುಲಿವೇಷ ತಂಡ ಕಟ್ಟಿದ್ದರು. ಈ ವರ್ಷದ ನವರಾತ್ರಿಯಲ್ಲೂ ಅಕ್ಟೋಬರ್ 18 ರಿಂದ ಊದು ಪೂಜೆಯೊಂದಿಗೆ ಪುತ್ತೂರಿನ ನಾನಾ ಕಡೆ ಇವರ ತಂಡ ಪ್ರದರ್ಶನ ನೀಡಿತ್ತು. ಪುತ್ತೂರಿನಲ್ಲಿ ಅ. 22ರಂದು ನಡೆದ ಪಿಲಿರಂಗ್ ಮತ್ತು ಪಿಲಿಗೊಬ್ಬು ಎಂಬ ಎರಡು ಹುಲಿ ವೇಷ ಸ್ಪರ್ಧೆಗಳಲ್ಲೂ ಇವರ ತಂಡ ಪ್ರಶಸ್ತಿ ಗಳಿಸಿತ್ತು.

Sulekha