DSP ಹುದ್ದೆಗೇರಿದ ಬೆನ್ನಲ್ಲೇ ಆಕಾಶ್‌ದೀಪ್ ಮದುವೆ – ಹಸೆಮಣೆ ಏರಿದ ಟೀಮ್ ಇಂಡಿಯಾ ಕ್ರಿಕೆಟರ್

DSP ಹುದ್ದೆಗೇರಿದ ಬೆನ್ನಲ್ಲೇ ಆಕಾಶ್‌ದೀಪ್ ಮದುವೆ – ಹಸೆಮಣೆ ಏರಿದ ಟೀಮ್ ಇಂಡಿಯಾ ಕ್ರಿಕೆಟರ್

ಟೀಮ್ ಇಂಡಿಯಾ ಕ್ರಿಕೆಟರ್ ಆಕಾಶ್‌ದೀಪ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಕಾಶ್‌ದೀಪ್ ಮತ್ತು ಅಕ್ಷಿತಾ ರಾಜ್ ವಿವಾಹವಾಗಿದ್ದು, ಟೀಮ್ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಗಣ್ಯರು ಶುಭಹಾರೈಸಿದ್ದಾರೆ.

ಇದನ್ನೂ ಓದಿ:DSP ಹುದ್ದೆಗೇರಿದ ಆಕಾಶ್ ದೀಪ್ ಮತ್ತು ಮುಕೇಶ್ ಕುಮಾರ್ – ಬಿಹಾರ ಸರ್ಕಾರದಿಂದ ಗೌರವಾನ್ವಿತ ಹುದ್ದೆ

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪಂಚತಾರಾ ಹೋಟೆಲ್‌ನಲ್ಲಿ ಕ್ರಿಕೆಟರ್ ಆಕಾಶ್ ದೀಪ್ ವಿವಾಹ ನೆರವೇರಿದೆ. ಟೀಮ್ ಇಂಡಿಯಾ ಕ್ರಿಕೆಟರ್ ಆಕಾಶ್ ದೀಪ್ , ಅಕ್ಷಿತಾ ರಾಜ್ ಅವರನ್ನು ವರಿಸಿದ್ದು, ಗಣ್ಯರ ಸಮ್ಮುಖದಲ್ಲಿ ಮದುವೆಯಾದರು. ಭೋಜ್‌ಪುರಿ ತಾರೆ ಪವನ್ ಸಿಂಗ್ ಮತ್ತು ಕ್ರಿಕೆಟಿಗ ಮುಖೇಶ್ ಕುಮಾರ್ ಸೇರಿದಂತೆ ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ವಾರಣಾಸಿಯ ತಾಜ್ ಗಂಗೆಯಲ್ಲಿ ಈ ಅದ್ಧೂರಿ ವಿವಾಹ ಮಹೋತ್ಸವ ನಡೆದಿದೆ. ವೇಗಿ ಆಕಾಶ್ ದೀಪ್ ಬಿಹಾರ ಮೂಲದ ಅಕ್ಷಿತಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಕಾಶ್ ದೀಪ್ ಟೀಂ ಇಂಡಿಯಾ ಪರ 10 ಟೆಸ್ಟ್ ಪಂದ್ಯ ಆಡಿದ್ದಾರೆ. ಇಂಗ್ಲೆಂಡ್ ವಿರುದ್ದ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅಕಾಶ್ ದೀಪ್ ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಕಾಶ್‌ದೀಪ್ ಅವರಿಗೆ ಬಿಹಾರ ಸರ್ಕಾರ ಡಿಎಸ್‌ಪಿ ಹುದ್ದೆ ನೀಡಿ ಗೌರವಿಸಿತ್ತು.

Sulekha