ಬಡತನದಲ್ಲಿ ಬದುಕಿ ಕ್ರಿಕೆಟ್ ಜಗತ್ತು ಬೆಳಗಲು ಬಂದ ಆಕಾಶದೀಪ – ಚೊಚ್ಚಲ ಪಂದ್ಯದಲ್ಲೇ ಸ್ಟಾರ್ ಆದ ಆಕಾಶ್‌ದೀಪ್

ಬಡತನದಲ್ಲಿ ಬದುಕಿ ಕ್ರಿಕೆಟ್ ಜಗತ್ತು ಬೆಳಗಲು ಬಂದ ಆಕಾಶದೀಪ – ಚೊಚ್ಚಲ ಪಂದ್ಯದಲ್ಲೇ ಸ್ಟಾರ್ ಆದ ಆಕಾಶ್‌ದೀಪ್

ಇಂಗ್ಲೆಂಡ್ ವಿರುದ್ಧದ ಐದು ಮ್ಯಾಚ್​ಗಳ ಟೆಸ್ಟ್​ ಸೀರಿಸ್​​ನಲ್ಲಿ ಟೀಂ ಇಂಡಿಯಾ ಪರ ಯಂಗ್​ಸ್ಟರ್ಸ್​​ಗಳೇ ಅಬ್ಬರಿಸ್ತಾ ಇದ್ದಾರೆ. ಈ ಸೀರಿಸ್​​ನಲ್ಲಿ ಕೆಲವರ ಡೆಬ್ಯೂ ಕೂಡ ಆಗಿದೆ. ಸರ್ಫರಾಜ್ ಖಾನ್, ಧ್ರುವ್ ಜ್ಯುರೆಲ್, ಆಕಾಶ್ ದೀಪ್ ಇವರೆಲ್ಲರೂ ಸಿಕ್ಕ ಅವಕಾಶವನ್ನ ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ತಮ್ಮ ಸೆಲೆಕ್ಷನ್​​ನನ್ನ ಪರ್ಫಾಮೆನ್ಸ್ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಚೊಚ್ಚಲ ಪಂದ್ಯದಲ್ಲಿಯೇ ಆಕಾಶ್‌ದೀಪ್ ಫುಲ್ ಶೈನ್ ಆಗಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಪಂದ್ಯದಲ್ಲಿ ಆಕಾಶ್ ದೀಪ್ ಶೈನಿಂಗ್ –ಇಂಗ್ಲೆಂಡ್‌ನ ಸೆಂಚೂರಿ ಸ್ಟಾರ್ ಜೋ ರೂಟ್ ಬೊಂಬಾಟ್ ಬ್ಯಾಟಿಂಗ್

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಆಕಾಶ್ ದೀಪ್ ಜೀವನವನ್ನೇ ಬದಲಾಯಿಸಿದೆ. ​ಕೋಚ್ ರಾಹುಲ್ ದ್ರಾವಿಡ್​​ ಬಳಿಯಿಂದ ಆಕಾಶ್ ದೀಪ್ ಟೆಸ್ಟ್​ಕ್ಯಾಪ್ ಪಡೆದುಕೊಳ್ತಾರೆ. ಕ್ಯಾಪ್ ಪಡೆದ ಬಳಿಕ ಅಕಾಶ್ ದೀಪ್ ಅಲ್ಲೇ ಇದ್ದ ತಮ್ಮ ತಾಯಿ ಬಳಿಕಗೆ ಹೋಗಿ ಆಶೀರ್ವಾದ ಪಡೀತಾರೆ. ಆಕಾಶ್ ದೀಪ್​ ಜರ್ನಿ ನಿಜಕ್ಕೂ ಒಂದು ಇನ್​ಸ್ಟೈರಿಂಗ್ ಸ್ಟೋರಿ. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ಅಕಾಶ್ ಮಾಡಿರೋ ಸ್ಟ್ರಗಲ್ ಅಷ್ಟಿಷ್ಟಲ್ಲ.

ಬಿಹಾರದ ಸಸರಾಮ್​​ನಲ್ಲಿ ಜನಿಸಿದ್ದ ಆಕಾಶ್ ದೀಪ್​​ಗೆ ಸಣ್ಣ ವಯಸ್ಸಲ್ಲೇ ಕ್ರಿಕೆಟ್ ಬಗ್ಗೆ ಭಾರಿ ಪ್ಯಾಶನ್ ಇತ್ತು. ತಾನೊಬ್ಬ ಕ್ರಿಕೆಟರ್ ಆಗಬೇಕು, ಭಾರತದ ಪರ ಆಡಬೇಕು ಅಂತಾ ಕನಸು ಕಂಡಿದ್ರು. ಆದ್ರೆ ಮನೆಯಲ್ಲಿ ಆಕಾಶ್​ಗೆ ತಂದೆಯ ಸಪೋರ್ಟ್ ಇರೋದಿಲ್ಲ. ಮಗ ಕ್ರಿಕೆಟ್ ಆಡೋದು ತಂದೆಗೆ ಬೇಕಾಗಿಯೇ ಇರಲಿಲ್ಲ. ಯಾವುದೇ ಫೀಲ್ಡ್ ಆದ್ರೂ ಪೋಷಕರ ಬೆಂಬಲ ಇಲ್ಲ ಅಂದ್ರೆ ಮಕ್ಕಳಿಗೆ ತಮ್ಮ ಕನಸು ನನಸು ಮಾಡಿಕೊಳ್ಳೋದು ಕಷ್ಟವೇ. ಎಸ್ಪೆಷಲಿ ಕ್ರಿಕೆಟ್ ವಿಚಾರದಲ್ಲಿ ತಂದೆಯ ಸಪೋರ್ಟ್​ ತುಂಬಾನೆ ಮುಖ್ಯವಾಗುತ್ತೆ. ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಂಕು ಸಿಂಗ್ ಇವರೆಲ್ಲರ ಕ್ರಿಕೆಟ್ ಕೆರಿಯರ್​​ನಲ್ಲೂ ತಂದೆಯ ರೋಲ್ ತುಂಬಾ ದೊಡ್ಡದಿದೆ. ಆದ್ರೆ ಆಕಾಶ್ ದೀಪ್ ವಿಚಾರದಲ್ಲಿ ಹಾಗಾಗಿಲ್ಲ. ತಂದೆಯಿಂದ ಯಾವುದೇ ರೀತಿಯ ಬೆಂಬಲ ಸಿಗದೇ ಇದ್ದಿದ್ರಿಂದ ಆಕಾಶ್ ಕೆಲಸ ಹುಡುಕೋದಕ್ಕಾಗಿ ಮನೆ ಬಿಟ್ಟು ಪಶ್ಚಿಮ ಬಂಗಾಳದ ದುರ್ಗಾಪುರ್​ ಅನ್ನೋ ಸಣ್ಣ ನಗರಕ್ಕೆ ತೆರಳ್ತಾರೆ. ಅಲ್ಲಿ ಆಕಾಶ್ ದೀಪ್​​ಗೆ ಅವರ ಮಾವನಿಂದ ಬೆಂಬಲ ಸಿಗುತ್ತೆ. ಹೀಗಾಗಿ ಆಕಾಶ್ ದೀಪ್ ಲೋಕಲ್ ಕ್ರಿಕೆಟ್ ಅಕಾಡೆಮಿಯೊಂದನ್ನ ಜಾಯಿನ್ ಆಗ್ತಾರೆ. ಆಕಾಶ್ ಪೇಸ್​ ಬೌಲಿಂಗ್​​ ನೋಡಿಯೇ ಕೋಚ್​ ಸೇರಿದಂತೆ ಅಕಾಡೆಮಿಯಲ್ಲಿ ಆಡ್ತಾ ಇದ್ದ ಕ್ರಿಕೆಟರ್ಸ್​​ಗಳೆಲ್ಲಾ ಫುಲ್ ಇಂಪ್ರೆಸ್ ಆಗ್ತಾರೆ. ಆದ್ರೆ ಕ್ರಿಕೆಟ್​​ನಲ್ಲಿ ಹೆಸರು ಮಾಡೋ ಮುನ್ನವೇ, ಅಂದ್ರೆ ಫಸ್ಟ್ ಕ್ಲಾಸ್​​​ ಕ್ರಿಕೆಟ್​​ನಲ್ಲೂ ಗುರುತಿಸಿಕೊಳ್ಳೋ ಮೊದಲೇ ಆಕಾಶ್ ದೀಪ್ ತಂದೆ ಸ್ಟ್ರೋಕ್​ ಆಗಿ ಅವರು ಮೃತಪಡ್ತಾರೆ. ತಂದೆ ಮೃತಪಟ್ಟು ಎರಡೇ ತಿಂಗಳಲ್ಲಿ ಆಕಾಶ್ ಫ್ಯಾಮಿಲಿಯಲ್ಲಿ ಇನ್ನೊಂದು ಟ್ರ್ಯಾಜಿಡಿ ಆಗುತ್ತೆ. ಆಕಾಶ್ ದೀಪ್​​ರ ಅಣ್ಣ ಕೂಡ ಸಾವನ್ನಪ್ತಾರೆ. ಆಕಾಶ್​ ದೀಪ್​​ ಕುಟುಂಬ ಕಂಗಾಲಾಗಿ ಹೋಗುತ್ತದೆ. ಮನೆ ನಡೆಸಲು ಕೂಡಾ ಹಣವೇ ಇರೋದಿಲ್ಲ. ತಾಯಿಯನ್ನ ನೋಡಿಕೊಳ್ಳೋಕೆ ಅನಿವಾರ್ಯವಾಗಿ ಆಕಾಶ್ ದೀಪ್ ಮನೆಗೆ ತೆರಳಬೇಕಾಗುತ್ತೆ. ಹೀಗಾಗಿ ಕ್ರಿಕೆಟ್ ಆಡೋದನ್ನೇ ಬಿಟ್ಟು ಬಿಡ್ತಾರೆ. ಸುಮಾರು ಮೂರು ವರ್ಷಗಳ ಕಾಲ ಬೇರೆ ಕೆಲಸ ಮಾಡಿಕೊಂಡು ಮನೆ ನಡೆಸ್ತಾ ಇರ್ತಾರೆ. ಆದ್ರೆ ಆಕಾಶ್ ಕ್ರಿಕೆಟ್ ಆಡೋದನ್ನ ಬಿಟ್ರೂ ಕ್ರಿಕೆಟ್ ಮಾತ್ರ ಆಕಾಶ್​​ರನ್ನ ಬಿಡೋದಿಲ್ಲ. ನೀವು ಯಾವುದಾದ್ರೂ ವಿಚಾರದಲ್ಲಿ ಪ್ಯಾಶನ್ ಆಗಿದ್ದೀರಾ ಅಂದ್ರೆ, ಅದು ನಿಮ್ಮ ಕನಸಾಗಿದೆ ಅಂದ್ರೆ ಅದೇನೇ ಮಾಡಿದ್ರೂ ಅದ್ರಿಂದ ಹೊರ ಬರೋಕೆ ಆಗೋದೆ ಇಲ್ಲ. ಕನಸು ನನಸಾಗೋವರೆಗೂ ಅದು ಕಾಡ್ತಾನೆ ಇರುತ್ತೆ. ಪ್ಯಾಶನ್ ಅನ್ನೋದು ಡ್ರೈವ್ ಮಾಡ್ತಾನೆ ಇರುತ್ತೆ. ಆಕಾಶ್ ದೀಪ್ ವಿಚಾರದಲ್ಲೂ ಆಗಿರೋದು ಇದೇ. ಮತ್ತೆ ಕ್ರಿಕೆಟ್ ಕಂಟಿನ್ಯೂ ಮಾಡಲೇಬೇಕು ಅನ್ನೋ ನಿರ್ಧಾರಕ್ಕೆ ಆಕಾಶ್ ದೀಪ್ ಬರ್ತಾರೆ. ಹೀಗಾಗಿ ಮೂರು ವರ್ಷಗಳ ಬಳಿಕ ಮತ್ತೆ ದುರ್ಗಾಪುರ್​​​ಗೆ ತೆರಳ್ತಾರೆ. ಅಲ್ಲಿಂದ ಕೊಲ್ಕತ್ತಾಗೆ ಹೋಗ್ತಾರೆ. ಕೊಲ್ಕತ್ತಾದಲ್ಲಿ ಒಂದು ಬಾಡಿಗೆ ರೂಮ್​​ನಲ್ಲಿ ಕಸಿನ್ ಜೊತೆಗೆ ಆಕಾಶ್ ದೀಪ್ ಇರ್ತಾರೆ. 2019ರಲ್ಲಿ ಬೆಂಗಾಲ್​ ಅಂಡರ್-23 ಟೀಮ್​​ನ್ನ ಜಾಯಿನ್ ಆಗ್ತಾರೆ. ಅಲ್ಲಿ ಮತ್ತೆ ಬೆಸ್ಟ್​ ಪರ್ಫಾಮೆನ್ಸ್ ನೀಡ್ತಾರೆ. ಟಾಪ್​ ಕ್ಲಾಸ್ ಬೌಲಿಂಗ್ ಮೂಲಕ ಅಂಡರ್-23 ಟೀಮ್​ ಪರ ಹಲವು ವಿಕೆಟ್​ಗಳನ್ನ ತೆಗೀತಾರೆ. ಆಕಾಶ್ ದೀಪ್​ ಅಚೀವ್​ಮೆಂಟ್​​ನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನೋಟ್ ಮಾಡಿಕೊಳ್ಳುತ್ತೆ. 2022ರ ಸೀಸನ್​​​ ವೇಳೆಗೆ ಆಕಾಶ್ ದೀಪ್​ರನ್ನ ಆರ್​ಸಿಬಿಗೆ ಸೇರಿಸಿಕೊಳ್ಳಲಾಗುತ್ತೆ. ಇದು ನಿಜಕ್ಕೂ ಆಕಾಶ್ ದೀಪ್ ಕೆರಿಯರ್​ನ ಟರ್ನಿಂಗ್ ಪಾಯಿಂಟ್ ಅಂತಾನೆ ಹೇಳಬಹುದು. ಐಪಿಎಲ್​​ನಲ್ಲಿ ಆರ್​​ಸಿಬಿ ಪರ ಆಕಾಶ್ ಒಟ್ಟು ಏಳು ಮ್ಯಾಚ್​ಗಳನ್ನಾಡಿದ್ದು, ಆರು ವಿಕೆಟ್​​ಗಳನ್ನ ಪಡೆದಿದ್ದಾರೆ.

ಒಂದು ವರ್ಷದ ಹಿಂದೆ ಆಕಾಶ್ ದೀಪ್ ತಮ್ಮ ಬೌಲಿಂಗ್ ವಿಚಾರವಾಗಿ ಕೆಲ ಕನ್​ಫ್ಯೂಷನ್​​ನಲ್ಲಿದ್ರಂತೆ. ಬೇಸಿಕಲಿ ಅಕಾಶ್​ ದೀಪ್ ಒಬ್ಬ ಇನ್​ಸ್ವಿಂಗ್ ಬೌಲರ್. ಆರಂಭದಿಂದಲೇ ಇನ್​​ಸ್ವಿಂಗ್ ಬೌಲಿಂಗ್​​ನ್ನೇ ಪ್ರಾಕ್ಟೀಸ್ ಮಾಡ್ತಾ ಬಂದವರು. ಆದ್ರೆ ಇನ್​ಸ್ವಿಂಗ್​​ನಲ್ಲಿ ಅಷ್ಟೊಂದು ವಿಕೆಟ್ ತೆಗಿಯೋಕೆ ಆಗ್ತಾ ಇಲ್ಲ ಅನ್ನೋ ಫೀಲಿಂಗ್ ಆಕಾಶ್ ದೀಪ್​ಗೆ ಬರುತ್ತೆ. ಹೀಗಾಗಿ ಔಟ್​ಸ್ವಿಂಗ್​ ಮಾಡೋ ಬಗ್ಗೆ ಯೋಚಿಸ್ತಾರೆ. ಆದ್ರೆ ತಮ್ಮ ನ್ಯಾಚ್ಯುರೆಲ್​ ಸ್ಟ್ರೆಂತ್ ಇನ್​ಸ್ವಿಂಗ್ ಆಗಿರೋವಾ​ಗ ಔಟ್​​ಸ್ವಿಂಗ್ ಪ್ರಾಕ್ಟೀಸ್ ಮಾಡೋಕೆ ಹೋದ್ರೆ ಎಲ್ಲಿ ಬೌಲಿಂಗ್ ಮೇಲೆ ನೆಗೆಟಿವ್ ಎಫೆಕ್ಟ್ ಆಗುತ್ತೋ ಅನ್ನೋ ಭಯ ಆಕಾಶ್​ ದೀಪ್​ಗೆ ಇರುತ್ತೆ. ಆಗ ಬೆಂಗಾಲ್​ ಟೀಮ್ ಕೋಚ್, ಮಾಜಿ ಕ್ರಿಕೆಟರ್ ಲಕ್ಷ್ಮೀ ರತನ್ ಶುಕ್ಲಾ ಬಳಿ ಈ ಬಗ್ಗೆ ಡಿಸ್ಕಸ್ ಮಾಡ್ತಾರೆ. ಈ ವೇಳೆ ಶುಕ್ಲಾ ಯಾವುದೇ ಕಾರಣಕ್ಕೂ ಔಟ್ ಸ್ವಿಂಗ್ ಪ್ರಾಕ್ಟೀಸ್ ಮಾಡೋಕೆ ಹೋಗ್ಬೇಡ. ನಿನ್ನ ನ್ಯಾಚ್ಯುರಲ್ ಸ್ಟೈಲ್​​ನಲ್ಲೇ, ಇನ್​ಸ್ವಿಂಗ್​​ನಲ್ಲೇ ಇಷ್ಟೊಂದು ಸಕ್ಸಸ್ ಆಗಿರೋವಾಗ ಔಟ್​​ಸ್ವಿಂಗ್ ಬೌಲಿಂಗ್​ನ ಅವಶ್ಯಕತೆ ಏನು ಅಂತಾ ಆಕಾಶ್ ದೀಪ್​​ಗೆ ಸಲಹೆ ಕೊಡ್ತಾರೆ. ಇದಾದ್ಮೇಲೆ ಆಕಾಶ್ ಔಟ್​ಸ್ವಿಂಗ್​ ಬಗ್ಗೆ ತಲೆಕೆಡಿಸಿಕೊಳ್ಳದೆ, ಇನ್​ಸ್ವಿಂಗ್ ಮೇಲೆಯೇ ಕಂಪ್ಲೀಟ್ ಫೋಕಸ್ ಮಾಡ್ತಾರೆ.

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವನ್ನ ಹೇಳಲೇಬೇಕು. ಇಂಗ್ಲೆಂಡ್​ ವಿರುದ್ಧ 4ನೇ ಟೆಸ್ಟ್​ನಲ್ಲಿ ಕ್ಯಾಪ್ ಹ್ಯಾಂಡೋವರ್​ ಮಾಡೋ ವೇಳೆ ಕೋಚ್ ರಾಹುಲ್ ದ್ರಾವಿಡ್ ಅವರು ಆಕಾಶ್ ದೀಪ್​ ಲೈಫ್​ ಜರ್ನಿ ಬಗ್ಗೆಯೇ ಒಂದು ಸ್ಮಾಲ್ ಸ್ಪೀಚ್ ಮಾಡಿದ್ರು. ಆಕಾಶ್ ದೀಪ್​ಗೆ ಟೀಮ್ ಇಂಡಿಯಾ ಪರ ಆಡಬೇಕು ಅನ್ನೋ ಇನ್ಪಿರೇಷನ್ ಸಿಕ್ಕಿದ್ದೇ 2007ರಲ್ಲಿ ಭಾರತ ಟಿ20 ವರ್ಲ್ಡ್​ಕಪ್ ಗೆದ್ದಾಗ. ಕ್ರಿಕೆಟ್ ಪ್ರಾಕ್ಟೀಸ್ ಮಾಡೋಕೆ ಅಂತಾನೆ ಆಕಾಶ್ ದೀಪ್ ಸಣ್ಣ ವಯಸ್ಸಲ್ಲೇ ಮನೆ ಬಿಟ್ಟು ದೆಹಲಿ, ಕೊಲ್ಕತ್ತಾಗೆಲ್ಲಾ ಓಡಾಡಿದ್ರು. ಈ ಸಂಗತಿ ಹೇಳ್ತಾನೆ, ರಾಹುಲ್ ದ್ರಾವಿಡ್ ಅವರು ಆಕಾಶ್ ದೀಪ್​ರ ತಂದೆ ಮತ್ತು ಅಣ್ಣನ ಬಗ್ಗೆಯೂ ಮಾತನಾಡ್ತಾರೆ. ಅವರು ಖಂಡಿತಾ ಮೇಲಿನಿಂದಲೇ ನಿಮಗೆ ಆಶೀರ್ವಾದ ಮಾಡ್ತಾರೆ ಅನ್ನೋ ಮಾತನ್ನ ಕೂಡ ದ್ರಾವಿಡ್ ಹೇಳ್ತಾರೆ. ಫಸ್ಟ್ ಡೇ ಆಟದ ಬಳಿಕ ದ್ರಾವಿಡ್ ಅವರ ಸ್ಪೀಚ್ ಬಗ್ಗೆ ಆಕಾಶ್ ದೀಪ್ ಕೂಡ ಮಾತನಾಡಿದ್ದು, ನಂಗೆ ತುಂಬಾ ಕಾನ್ಫಿಡೆನ್ಸ್ ಸಿಗ್ತು ಅಂತಾನೂ ಹೇಳಿದ್ರೂ. ಹಾಗೆಯೇ ನನ್ನ ಅಚೀವ್​ಮೆಂಟ್​ನ್ನ ನೋಡೋಕೆ ತಂದೆ, ಅಣ್ಣ ಇಲ್ವಲ್ಲಾ ಅನ್ನೋ ನೋವು ಕೂಡ ಇದೆ ಅನ್ನೋದಾಗಿಯೂ ಆಕಾಶ್ ದೀಪ್ ಫೀಲ್ ಆಗಿದ್ರು.

ತಮ್ಮ ಫಸ್ಟ್ ಟೆಸ್ಟ್​​ನ ಫಸ್ಟ್​ ಇನ್ನಿಂಗ್ಸ್​ನಲ್ಲೇ ಆಕಾಶ್ ದೀಪ್ ಒಟ್ಟು ಮೂರು ವಿಕೆಟ್ ಪಡೆದಿದ್ರು. ಆದ್ರೆ ಆಕಾಶ್ ಸಕ್ಸಸ್ ಹಿಂದೆ ಟೀಂ ಇಂಡಿಯಾದ ಬ್ರಹ್ಮಾಸ್ತ್ರ ಜಸ್ಪ್ರಿತ್ ಬುಮ್ರಾ ಕೂಡ ಇದ್ದಾರೆ. ಯಾಕಂದ್ರೆ ಮ್ಯಾಚ್​ಗೂ ಮುನ್ನವೇ ಆಕಾಶ್​ಗೆ ಬುಮ್ರಾ ಕೆಲ ಇಂಪಾರ್ಟೆಟ್ ಟಿಪ್ಸ್​ಗಳನ್ನ ನೀಡಿದ್ದಾರೆ. ಈ ಬಗ್ಗೆ ಪ್ರೆಸ್​ಮೀಟ್ ವೇಳೆ ಆಕಾಶ್ ದೀಪ್ ರಿವೀಲ್ ಮಾಡಿದ್ರು. ಇಂಗ್ಲೆಂಡ್ ಬ್ಯಾಟ್ಸ್​​ಮನ್ ಶಾರ್ಟರ್ ಬಾಲ್​​ಗಳನ್ನ ಎಸೆಯುವಂತೆ ಬುಮ್ರಾ ಸಲಹೆ ಕೊಟ್ಟಿದ್ರಂತೆ. ಡೊಮೆಸ್ಟಿಕ್ ಕ್ರಿಕೆಟ್ ಆಡೋವಾಗ ಫುಲ್ಲರ್ ಲೆಂತ್ ಬಾಲ್​ಗಳನ್ನೇ ಎಸೀತೇವೆ. ಆದ್ರೆ ಇಂಟರ್​​ನ್ಯಾಷನಲ್ ಕ್ರಿಕೆಟ್​ನಲ್ಲಿ ಶಾರ್ಟರ್​ ಲೆಂತ್ ಬಾಲ್​ ಹಾಕೋಕೆ ಪ್ರಿಫರ್ ಮಾಡಬೇಕು ಅಂತಾ ಟಿಪ್ಸ್ ಕೊಟ್ಟಿದ್ರು. ಹೀಗಾಗಿ ಆಕಾಶ್ ದೀಪ್ ತಮ್ಮ ಲೈನ್ & ಲೆಂತ್ ಮೇಲೆಯೇ ಫುಲ್​ ಫೋಕಸ್ ಮಾಡಿದ್ರು. ಫಸ್ಟ್​ ಇನ್ನಿಂಗ್ಸ್​ನಲ್ಲಿ ಆಕಾಶ್ ದೀಪ್​ ಪಡೆದ ಮೂರು ವಿಕೆಟ್​ಗಳ ಪೈಕಿ ಎರಡು ವಿಕೆಟ್​​ಗಳು ಶಾರ್ಟರ್​ ಲೆಂತ್​ ಬಾಲ್​ಗೆ ಬಿದ್ದಿದ್ವು. ಸೋ ಬುಮ್ರಾ ಕೊಟ್ಟ ಟಿಪ್ಸ್​ ವರ್ಕೌಟ್ ಆಗಿದೆ.

ಇಲ್ಲಿ ಇನ್ನೊಂದು ಸಂಗತಿಯನ್ನ ಹೇಳಲೇಬೇಕು. ಆಕಾಶ್ ದೀಪ್​​ರಂಥಾ ಬ್ಯಾಕ್​​ಗ್ರೌಂಡ್​ನಿಂದ ಬಂದ ಕ್ರಿಕೆಟಿಗರಲ್ಲಿ ಒಂದು ಸ್ಪೆಷಲ್ ಎಬಿಲಿಟಿ ಇರುತ್ತೆ. ಆಕಾಶ್ ದೀಪ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್, ರಿಂಕು ಸಿಂಗ್​ ಇವರು ಯಾರ ಇನ್​ಫ್ಲುಯೆನ್ಸ್ ಮೇಲೂ ಇಂಡಿಯನ್​ ಟೀಮ್​​ ಜಾಯಿನ್ ಆಗಿಲ್ಲ. ಅವರ ಫ್ಯಾಮಿಲಿ ಮೆಂಬರ್ಸ್ ಯಾರು ಕೂಡ ಕ್ರಿಕೆಟರ್ಸ್​ ಆಗಿಲ್ಲ. ಇವೆರೆಲ್ಲರೂ ಬಡತನವನ್ನ ಅನುಭವಿಸಿ ಬಂದವರೇ. ಹೀಗಾಗಿ ಸಹಜವಾಗಿಯೇ ಅವರಲ್ಲಿ ರನ್​ ಮಾಡಬೇಕು, ವಿಕೆಟ್ ತೆಗೆಯಬೇಕು ಅನ್ನೋ ಹಸಿವಿರುತ್ತೆ. ಹಠ ಇರುತ್ತೆ. ಇದೇ ಅವರನ್ನ ಸಕ್ಸಸ್​​ನತ್ತ ಡ್ರೈವ್ ಮಾಡ್ತಾ ಇರೋದು.

Sulekha