ಚೊಚ್ಚಲ ಪಂದ್ಯದಲ್ಲಿ ಆಕಾಶ್ ದೀಪ್ ಶೈನಿಂಗ್ –ಇಂಗ್ಲೆಂಡ್‌ನ ಸೆಂಚೂರಿ ಸ್ಟಾರ್ ಜೋ ರೂಟ್ ಬೊಂಬಾಟ್ ಬ್ಯಾಟಿಂಗ್

ಚೊಚ್ಚಲ ಪಂದ್ಯದಲ್ಲಿ ಆಕಾಶ್ ದೀಪ್ ಶೈನಿಂಗ್ –ಇಂಗ್ಲೆಂಡ್‌ನ ಸೆಂಚೂರಿ ಸ್ಟಾರ್ ಜೋ ರೂಟ್ ಬೊಂಬಾಟ್ ಬ್ಯಾಟಿಂಗ್

ಭಾರತ VS ಇಂಗ್ಲೆಂಡ್.. 4ನೇ ಟೆಸ್ಟ್ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿಯ ಹೋಮ್​​ಗ್ರೌಂಡ್ ರಾಂಚಿಯಲ್ಲಿ ಮ್ಯಾಚ್ ನಡೀತಿದೆ. ಇದು ಇಂಗ್ಲೆಂಡ್ ಪಾಲಿಗೆ ಡೂ ಆರ್​ ಡೈ ಮ್ಯಾಚ್.    ಫಸ್ಟ್ ಬ್ಯಾಟಿಂಗ್​ಗೆ ಇಳಿದಿರೋ ಇಂಗ್ಲೆಂಡ್​​ಗೆ ಆರಂಭದಲ್ಲೇ ಶಾಕ್​ ಹೊಡೆದಿತ್ತು. ಬಟ್ ಆಮೇಲೆ ಸೆಂಚೂರಿ ಸ್ಟಾರ್ ಜೋ ರೂಟ್ ಇಡೀ ಟೀಮ್​​ನ್ನ ರಿಕವರಿ ಮೋಡ್​ಗೆ ತಂದಿದ್ದಾರೆ. ಮೊದಲ ದಿನದಾಟದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:6 ಬಾಲ್.. 6 ಸಿಕ್ಸರ್ – ಯುವ ದಾಂಡಿಗ ವಂಶಿಕೃಷ್ಣ ಕಮಾಲ್

ಟಾಸ್ ಗೆದ್ದ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿದ್ರು. ಇಂಗ್ಲೆಂಡ್ ಬ್ಯಾಟಿಂಗ್ ಸ್ಟಾರ್ಟ್ ಮಾಡಿದಾಗ ಬೆನ್​ಸ್ಟೋಕ್ಸ್ ರಾಂಗ್ ಡಿಸೀಶನ್​ ತಗೊಂಡ್ರಾ ಎಂಬಂತಾಗಿತ್ತು. ಯಾಕಂದ್ರೆ, ಕೇವಲ 112 ರನ್​ಗಳಿಗೆ ಇಂಗ್ಲೆಂಡ್ ಐದು ವಿಕೆಟ್​ಗಳನ್ನ ಕಳೆದುಕೊಂಡಿತ್ತು. ಇಂಗ್ಲೆಂಡ್​ಗೆ ಈ ಫಸ್ಟ್ ಶಾಕ್ ಕೊಟ್ಟಿದ್ದೇ ಟೀಂ ಇಂಡಿಯಾದ ಡೆಬ್ಯೂ ಪ್ಲೇಯರ್ ಆಕಾಶ್ ದೀಪ್. ಜ್ಯಾಕ್ ಕ್ರೌಲಿ, ಬೆನ್​ ಡಕೆಟ್ ಮತ್ತು ಆಲಿ ಪಾಪ್.. ಇಂಗ್ಲೆಂಡ್​​ನ ಮೊದಲ ಮೂವರು ಬ್ಯಾಟ್ಸ್​​ಮನ್​​ಗಳನ್ನೂ ಪೆವಿಲಿಯನ್​ಗೆ ಕಳುಹಿಸಿದ್ದೇ ಆಕಾಶ್ ದೀಪ್. ಮೊದಲ ಮೂರೂ ವಿಕೆಟ್​ಗಳನ್ನ ಕಿತ್ತು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲು ಮುರಿದ್ರು. ಆದ್ರೆ ಈ ನಡುವೆಯೂ –ಒಂದು ಇಂಟ್ರೆಸ್ಟಿಂಗ್ ಘಟನೆಯಾಗಿದೆ. ಅಕಾಶ್ ದೀಪ್ ಎಸೆದ ಲೆಂತ್ ಬಾಲ್​ ಜ್ಯಾಕ್ ಬ್ಯಾಟ್​​ ಮತ್ತು ಪ್ಯಾಡ್​ನ್ನ ಮಿಸ್ ಆಗಿ ಸೀದಾ ವಿಕೆಟ್​​ಗೆ ನುಗ್ಗಿ ಬಿಡುತ್ತೆ. ಜ್ಯಾಕ್​ ಕ್ರೌಲಿ ಕ್ಲೀನ್ ಬೌಲ್ಡ್ ಆಗ್ತಾರೆ. ಬಾಲ್​ ಬಡಿದ ರಭಸಕ್ಕೆ ವಿಕೆಟ್​ಗಳು ಪಲ್ಟಿ ಹೊಡೀತಾವೆ. ಬುಮ್ರಾ ಬೌಲ್ಡ್ ಮಾಡಿದಾಗ ಹೇಗಿತ್ತೋ ಅದೇ ರೀತಿ ಇತ್ತು. ಇತ್ತ ಜ್ಯಾಕ್ ಕ್ರೌಲಿ ಪೆವಿಲಿಯನ್ ಕಡೆ ಹೊರಡ್ತಾರೆ. ಆಕಾಶ್ ದೀಪ್ ಫಸ್ಟ್​ ವಿಕೆಟ್ ತೆಗೆದ ಅಂತಾ ಫುಲ್ ಸೆಲೆಬ್ರೇಟ್ ಮಾಡ್ತಾರೆ. ಅಷ್ಟೊತ್ತಿಗಾಗಲೇ ಅಂಪೈರ್ ಕಡೆಯಿಂದ ಶಾಕಿಂಗ್ ಸಿಗ್ನಲ್ ಬರುತ್ತೆ. ನೋ ಬಾಲ್.. ಜ್ಯಾಕ್ ಕ್ರೌಲಿ ನಾಟೌಟ್. ಆಕಾಶ್ ದೀಪ್ ಓವರ್​​ ಸ್ಟೆಪ್ ಆಗಿ ನೋ ಬಾಲ್​​ ಎಸೆದಿದ್ರು. ಇದಾದ ಬೆನ್ನಲ್ಲೇ ಬೆನ್ ಡಕೆಟ್ ಮತ್ತು ಆಲಿ ಪಾಪ್​ರನ್ನ​ ಬ್ಯಾಕ್ ಟು ಬ್ಯಾಕ್ ಔಟ್ ಮಾಡ್ತಾರೆ. ನಂತ್ರ ನೋ ಬಾಲ್​ನಲ್ಲಿ ಬಚಾವಾಗಿದ್ದ ಜ್ಯಾಕ್​ ಕ್ರೌಲಿಯನ್ನ ಕೂಡ ಪೆವಿಲಿಯನ್​ ಸೇರಿಸ್ತಾರೆ.

ವಿಕೆಟ್ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಇಂಗ್ಲೆಂಡ್​ಗೆ ನೆರವಾಗಿದ್ದು ಎಕ್ಸ್​​ಪೀರಿಯನ್ಸ್ ಕ್ರಿಕೆಟರ್ ಜೋ ರೂಟ್. ಟೆಸ್ಟ್​ ಕ್ರಿಕೆಟ್​​ಗೆ ಜೋ ರೂಟ್ ಹೇಳಿ ಮಾಡಿಸಿದಂಥಾ ಬ್ಯಾಟ್ಸ್​​ಮನ್. 226 ಬಾಲ್​ಗಳಲ್ಲಿ 106ರನ್ ಗಳಿಸಿ ನಾಟೌಟ್ ಆಗಿದ್ರು. ಜೋ ರೂಟ್ ಒಂಭತ್ತು ಬೌಂಡರಿ ಹೊಡೆದಿದ್ದು ಬಿಟ್ರೆ ಒಂದೇ ಒಂದು ಸಿಕ್ಸರ್ ಕೂಡ ಆವರ ಬ್ಯಾಟ್​​ನಿಂದ ಬಂದಿರಲಿಲ್ಲ. ರನ್ನಿಂಗ್ ಬಿಟ್ವೀನ್​ ದಿ ವಿಕೆಟ್ ಮೂಲಕವೇ ಸ್ಕೋರ್ ಮಾಡಿದ್ರು. ತಮ್ಮ ಕೆರಿಯರ್​ನ 31ನೇ ಸೆಂಚೂರಿ ಹೊಡೆದ್ರು. ಕೇನ್ ವಿಲಿಯಮ್ಸನ್ ಮತ್ತು ಸ್ಟೀವ್ ಸ್ಮಿತ್ ಬಳಿಕ ಟೆಸ್ಟ್​​ನಲ್ಲಿ ಸದ್ಯ ಹೈಯೆಸ್ಟ್ ಸೆಂಚೂರಿ ಹೊಡೆದಿರೋದು ಅಂದ್ರೆ ಅದು ಜೋ ರೋಟ್. ಅದು ಕೂಡ ಭಾರತದ ವಿರುದ್ಧ ರೂಟ್ ಹೊಡೆದಿರೋದು 10ನೇ ಶತಕ. ಇಲ್ಲೊಂಡು ವರ್ಲ್ಡ್​ ರೆಕಾರ್ಡ್ ಕೂಡ ರೂಟ್ ಹೆಸರಿಗೆ ಆ್ಯಡ್ ಆಗಿದೆ. ಟೆಸ್ಟ್​ನಲ್ಲಿ ಭಾರತದ ವಿರುದ್ಧ 10 ಸೆಂಚೂರಿ ಹೊಡೆದ ಏಕೈಕ ಬ್ಯಾಟ್ಸ್​ಮನ್ ಜೋ ರೂಟ್. ಇನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಟೆಸ್ಟ್​ನಲ್ಲಿ ಒಟ್ಟು ಒಂಭತ್ತು ಸೆಂಚೂರಿ ಹೊಡೆದಿದ್ದಾರೆ. ​ವಂಡೇ ಮತ್ತು ಟೆಸ್ಟ್ ಎರಡೂ ಸೇರಿಸಿದ್ರೆ ಭಾರತದ ವಿರುದ್ಧ ಹೈಯೆಸ್ಟ್ ಸೆಂಚೂರಿ ಹೊಡೆದಿರೋ ರೆಕಾರ್ಡ್ ರಿಕ್ಕಿ ಪಾಂಟಿಂಗ್ ಹೆಸರಲ್ಲೇ ಇದೆ. ಪಂಟರ್​ ಒಟ್ಟು 14 ಸೆಂಚೂರಿ ಹೊಡೆದಿದ್ದಾರೆ.

ಇನ್ನು ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 302/7 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಆಕಾಶ್ ದೀಪ್ ಮೂರು ವಿಕೆಟ್ ಪಡೆದ್ರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಗಳಿಸಿದ್ರು. ಜಸ್ಪ್ರಿತ್ ಬುಮ್ರಾ ಈ ಮ್ಯಾಚ್​​ನಲ್ಲಿ ಆಡ್ತಾ ಇಲ್ಲ. ಬಟ್ ಆಕಾಶ್ ದೀಪ್ ತುಂಬಾನೆ ಇಂಪ್ರೆಸಿವ್ ಆಗಿ ಬೌಲಿಂಗ್ ಮಾಡಿದ್ದಾರೆ. ತಮ್ಮ ಫಸ್ಟ್​ ಮ್ಯಾಚ್​​ನಲ್ಲೇ ಸ್ಟಾರ್ ಆಗೋ ಎಲ್ಲಾ ಸಾಧ್ಯತೆಗಳೂ ಇದೆ.

ಇವೆಲ್ಲದ್ರ ಮಧ್ಯ ರಾಂಚಿ ಪಿಚ್ ಬಗ್ಗೆ ಭಾರಿ ಚರ್ಚೆ ನಡೀತಾ ಇದೆ. ಮ್ಯಾಚ್ ಶುರುವಾಗೋ ಮುನ್ನವೇ ಇಂಗ್ಲೆಂಡ್ ಕ್ಯಾಪ್ಟನ್ ಬೆನ್​ ಸ್ಟೋಕ್ಸ್​ ಪಿಚ್ ಬಗ್ಗೆ ಡೌಟ್ ಪಟ್ಟಿದ್ರು. ಇಂಥಾ ಪಿಚ್​​ನ್ನ ನಾನ್ಯಾವತ್ತೂ ನೋಡಿಯೇ ಇಲ್ಲ. ಈ ಪಿಚ್​​ ಹೇಗಿರಬಹುದು ಅನ್ನೋ ಬಗ್ಗೆ ಐಡಿಯಾನೇ ಸಿಗ್ತಿಲ್ಲ. ಪೆವಿಲಿಯನ್​ನಿಂದ ನೋಡೋವಾಗ ಪಿಚ್ ಗ್ರೀನ್ ಮತ್ತು ಗ್ರಾಸಿಯಾಗಿ ಕಾಣ್ಸುತ್ತೆ. ಆದ್ರೆ ಹತ್ತಿರ ಬಂದು ನೋಡಿದ್ರೆ ಪಿಚ್ ಫುಲ್ ಡಾರ್ಕ್ ಆಗಿ ಫ್ಲ್ಯಾಟ್ ಆಗಿದೆ. ಹಾಗೆಯೇ ಪಿಚ್​​ನಲ್ಲಿ ಒಂದಷ್ಟು ಕ್ರ್ಯಾಕ್​ಗಳು ಕೂಡ ಇವೆ ಅಂತಾ ಬೆನ್​ಸ್ಟೋಕ್ಸ್ ಹೇಳಿದ್ದಾರೆ. ಅಸಲಿಗೆ ಈ ಪಿಚ್​​ಗೆ ಕಪ್ಪು ಮಣ್ಣನ್ನ ಯೂಸ್ ಮಾಡಲಾಗಿದ್ಯಂತೆ. ಕಪ್ಪು ಮಣ್ಣು ಅಂದ ತಕ್ಷಣ ವಂಡೇ ವರ್ಲ್ಡ್​​​ಕಪ್ ಫೈನಲ್ ಮ್ಯಾಚ್ ನೆನಪಾಗಿ ಬಿಡುತ್ತೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲೂ ಬ್ಲ್ಯಾಕ್ ಸಾಯಿಲ್ ಯೂಸ್ ಮಾಡಿದ್ರು. ಆಕ್ಚುವಲಿ ಬ್ಲ್ಯಾಕ್ ಸಾಯಿಲ್ ಅಂದ ಕೂಡಲೇ ಪಿಚ್ ಡಿಫರೆಂಟ್ ಆಗಿಯೇ ಬಿಹೇವ್ ಮಾಡುತ್ತೆ. ಈಗ ಇಂಗ್ಲೆಂಡ್ ಪ್ಲೇಯರ್ಸ್​ಗಳಿಗೆ ಅದ್ರ ಅನುಭವ ಆಗ್ತಾ ಇದೆ. ಬಟ್ ಬೆನ್​ಸ್ಟೋಕ್ಸ್​ ರಾಂಚಿ ಪಿಚ್​​ ಬಗ್ಗೆ ಕ್ರಿಟಿಸೈಸ್ ಮಾಡಿಯೇ ಮಾತನಾಡಿರೋದು. ಪ್ರತಿ ಬಾರಿಯೂ ಭಾರತದಲ್ಲಿ ಸೀರಿಸ್ ನಡೆಯೋವಾಗ ಇಂಗ್ಲೆಂಡ್, ಆಸ್ಟ್ರೇಲಿಯಾದ ಪ್ಲೇಯರ್ಸ್​ಗಳು ಪಿಚ್​​ನ್ನ ಕ್ವಶ್ಚನ್ ಮಾಡಿಯೇ ಮಾಡ್ತಾರೆ. ಭಾರತದಲ್ಲಿ ಇಲ್ಲಿನ ಕಂಡೀಷನ್​​ಗೆ ಸರಿಯಾಗಿ ಪಿಚ್ ರೆಡಿ ಮಾಡಲಾಗುತ್ತೆ. ಅವರು ಇಲ್ಲಿ ಬಂದು ಆಡೋವಾಗ ಇಲ್ಲಿನ ಪಿಚ್ ಕಂಡೀಷನ್​ಗೆ ಹೊಂದಿಕೊಳ್ಳಬೇಕು. ಅಲ್ಲೇ ಇರೋದಲ್ವಾ ಚಾಲೆಂಜ್​. ನಮ್ಮಲ್ಲೂ ಇಂಗ್ಲೆಂಡ್, ಆಸ್ಟ್ರೇಲಿಯಾ ರೀತಿಯ ಪಿಚ್ ಮಾಡಿದ್ರೆ ಅದಕ್ಕೆ ಅರ್ಥವೇ ಇಲ್ಲ. ಈಗ ನಮ್ಮವರು ಆಸ್ಟ್ರೇಲಿಯಾ, ಇಂಗ್ಲೆಂಡ್​ಗೆ ಟೂರ್ ಮಾಡಿದಾಗ ಯಾವತ್ತೂ ಅಲ್ಲಿನ ಪಿಚ್ ಬಗ್ಗೆ ಪ್ರಶ್ನೆ ಮಾಡಿಯೇ ಇಲ್ಲ. ಆ ಚಾಲೆಂಜ್​​​ನ್ನ ಫೇಸ್ ಮಾಡಬೇಕು. ಆಗಷ್ಟೇ ಕಂಪ್ಲೀಟ್ ಕ್ರಿಕೆಟರ್ ಆಗೋಕೆ ಆಗೋದು. ಆಗಷ್ಟೇ ಒಂದು ಟೀಮ್ ಸ್ಟ್ರಾಂಗ್​​ ಆಗೋಕೆ ಸಾಧ್ಯವಾಗೋದು. ಇರ್ಲಿ ಕೆಲ ಫಾರಿನ್ ಪ್ಲೇಯರ್ಸ್​ ಅವರ ಚಾಳಿ ಬಿಡೋದಿಲ್ಲ.

Sulekha