ಅಜಿತ್ ಪವಾರ್ ಪ್ರಯಾಣಿಸಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ – ಅಪಘಾತದ ನಿಜವಾದ ಕಾರಣ ರಿವೀಲ್!

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ಸಾವು ದೇಶದ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ. ವಿಮಾನ ಅಪಘಾತವೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದ್ದರು, ಈ ಅಪಘಾತದ ಹಿಂದೆ ನಿಖರವಾಗಿ ಏನಾಯಿತು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ನಡುವೆ ಅಜಿತ್ ಪವಾರ್ ಸಾವಿನ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಅಜಿತ್ ಪವಾರ್ ಅವರು ಪ್ರಯಾಣಿಸಿದ್ದ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ದೃಢಪಡಿಸಿದೆ.
ವಿಮಾನ ಅಪಘಾತದ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ವಿಧಿವಿಜ್ಞಾನ ತಂಡಗಳ ಅಧಿಕಾರಿಗಳು ಗುರುವಾರ ಬಾರಾಮತಿಯಲ್ಲಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ವಿಮಾನದಲ್ಲಿದ್ದ ಕಪ್ಪು ಪೆಟ್ಟಿಗೆಯೂ ಈಗ ಪತ್ತೆಯಾಗಿದ್ದು, ತನಿಖಾಧಿಕಾರಿಗಳು ಅದನ್ನು ಡಿಕೋಡ್ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಮುನಿದ ಚಿನ್ನ ಒಲಿಯಲಿ.. ಬಂಗಾರದ ದರ ಇಳಿಯಲಿ! – ದೇವಿ ಮುಂದೆ ವಿಶೇಷ ಬೇಡಿಕೆ ಇಟ್ಟ ಭಕ್ತ!
ಈ ಕಪ್ಪು ಪೆಟ್ಟಿಗೆಯಲ್ಲಿ ಎರಡು ಮುಖ್ಯ ಭಾಗಗಳಿವೆ. ಒಂದು ಫ್ಲೈಟ್ ಡೇಟಾ ರೆಕಾರ್ಡರ್ (FDR) ಇದು ವಿಮಾನದ ವೇಗ, ಎತ್ತರ, ಇಂಧನ ಬಳಕೆ, ದಿಕ್ಕು ಸೇರಿದಂತೆ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ.ಮತ್ತೊಂದು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಇದು ಪೈಲಟ್ಗಳ ನಡುವಿನ ಸಂಭಾಷಣೆ, ಎಚ್ಚರಿಕೆ ಧ್ವನಿಗಳು ಮತ್ತು ಅಪಘಾತದ ಕೊನೆಯ ಕ್ಷಣಗಳ ಶಬ್ದಗಳನ್ನು ದಾಖಲಿಸುತ್ತದೆ. ಈ ಡೇಟಾವನ್ನು ವಿಶ್ಲೇಷಿಸಲು ಕನಿಷ್ಠ 3 ರಿಂದ 4 ವಾರಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ನೀಡಿದ್ದಾರೆ.
ವಿಮಾನ ಅಪಘಾತಗಳ ತನಿಖೆಯಲ್ಲಿ ಬ್ಲಾಕ್ ಬಾಕ್ಸ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಾಮಾನ್ಯ ಪೆಟ್ಟಿಗೆಯಲ್ಲ, ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಅತ್ಯಂತ ಬಲಿಷ್ಠ ಸಾಧನವಾಗಿದೆ. ಅಪಘಾತ, ಬೆಂಕಿ, ನೀರು ಅಥವಾ ಭಾರೀ ಆಘಾತಗಳ ನಡುವೆಯೂ ಒಳಗಿನ ಡೇಟಾವನ್ನು ಸುರಕ್ಷಿತವಾಗಿ ಉಳಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಬ್ಲಾಕ್ ಬಾಕ್ಸ್ ಹೊರಭಾಗವನ್ನು ಸಾಮಾನ್ಯವಾಗಿ ’ಟೈಟಾನಿಯಂ ಅಥವಾ ಸ್ಟೇನ್ಲೆಸ್ ಸ್ಟೀಲ್ ನಿಂದ ತಯಾರಿಸಲಾಗುತ್ತದೆ. ಇವು ಅತ್ಯಂತ ಬಲವಾದ ಲೋಹಗಳು. ಇದರ ಒಳಭಾಗದಲ್ಲಿ ಹಲವು ಪದರಗಳ ರಕ್ಷಣೆ ಇರುತ್ತದೆ. ಉಷ್ಣ ನಿರೋಧಕ ಪದರಗಳು, ಆಘಾತವನ್ನು ಹೀರಿಕೊಳ್ಳುವ ಅಬ್ಸಾರ್ಬರ್ಗಳು ಮತ್ತು ವಿಶೇಷ ಇನ್ಸುಲೇಷನ್ ವ್ಯವಸ್ಥೆಗಳು ಇದರಲ್ಲಿ ಸೇರಿವೆ. ಇದರಿಂದ ಯಾವುದೇ ಅಪಘಾತ ಸಂಭವಿಸಿದರೂ ಒಳಗಿನ ಮಾಹಿತಿಗೆ ಹಾನಿಯಾಗುವುದಿಲ್ಲ.

ನೋಡಿರಿ

