ಮಹಾರಾಷ್ಟ್ರದಲ್ಲಿ ʼಪವಾರ್‌ʼ ಬಣಗಳ ಶಕ್ತಿ ಪ್ರದರ್ಶನ – ಮಗನ ಮುಂದೆ ಸೈಡ್‌ ಲೈನ್‌ ಆದ್ರಾ  ಎನ್‌ಸಿಪಿ ವರಿಷ್ಠ?

ಮಹಾರಾಷ್ಟ್ರದಲ್ಲಿ ʼಪವಾರ್‌ʼ ಬಣಗಳ ಶಕ್ತಿ ಪ್ರದರ್ಶನ – ಮಗನ ಮುಂದೆ ಸೈಡ್‌ ಲೈನ್‌ ಆದ್ರಾ  ಎನ್‌ಸಿಪಿ ವರಿಷ್ಠ?

ಮಹಾರಾಷ್ಟ್ರದ ಎನ್​ಸಿಪಿ ಒಡೆದು ಹೋಳಾಗಿದ್ದು ಇವತ್ತು ಎರಡು ಬಣಗಳ ನಡುವೆ ಶಕ್ತಿಪ್ರದರ್ಶನ ನಡೆದಿದೆ. ಎನ್​ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಬಂಡಾಯ ನಾಯಕ ಅಜಿತ್ ಪವಾರ್ ತಮ್ಮ ಬೆಂಬಲಿಗ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಉಪನಗರ ಬಾಂದ್ರಾದಲ್ಲಿ ಅಜಿತ್ ಪವಾರ್ ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್‌ಸಿಪಿ ಶಾಸಕರ ಪೈಕಿ 35 ಶಾಸಕರು ಹಾಜರಿದ್ದರು. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸದನದಲ್ಲಿ ಗಂಟಲು ಹರಿದುಕೊಳ್ಳುವ ಕಾಂಪಿಟೇಷನ್! – ಕಾಂಗ್ರೆಸ್‌ ವ್ಯಂಗ್ಯ

ಸಭೆಯಲ್ಲಿ ಮಾತನಾಡಿದ ಅಜಿತ್, ತಮ್ಮ ಕಡೆ 30 ಕ್ಕೂ ಹೆಚ್ಚು ಶಾಸಕರು ಇರೋದಾಗಿ ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪರ್ಯಾಯವಾಗಿ ಬೇರೆ ಯಾವ ನಾಯಕನೂ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಚಿಕ್ಕಪ್ಪ ಶರದ್ ಪವಾರ್​ಗೆ 83 ವರ್ಷ ವಯಸ್ಸಾಗಿದ್ದು ಅವರು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಮತ್ತೊಂದೆಡೆ ಮುಂಬೈನ ವೈಬಿ ಚವಾಣ್ ಸೆಂಟರ್‌ದಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಟ್ಟು 13 ಶಾಸಕರು, ಮೂವರು ಎಂಎಲ್‌ಸಿಗಳು ಮತ್ತು ಐವರು ಸಂಸದರು ಉಪಸ್ಥಿತರಿದ್ದರು. ಸಭೆಗೆ ಎನ್​ಸಿಪಿಯ ಎಲ್ಲಾ ಶಾಸಕರು ಹಾಜರಾಗಬೇಕು ಎಂದು ವಿಪ್ ಜಾರಿ ಮಾಡಿದ್ದರೂ ಕೂಡ ಬಹುತೇಕ ನಾಯಕರು ಅಜಿತ್ ಪವಾರ್ ಬಣ ಸೇರಿದ್ದಾರೆ. ಈ ಮೂಲಕ ಶರದ್ ಪವಾರ್ ಗೆ ಭಾರೀ ಹಿನ್ನಡೆಯಾಗಿದೆ.

ಮತ್ತೊಂದೆಡೆ ಎನ್​ಸಿಪಿ ವರಿಷ್ಠ ಶರದ್ ಪವಾರ್ ಅವರ ದೀರ್ಘಾವಧಿಯ ಆಪ್ತ ಪ್ರಫುಲ್ ಪಟೇಲ್, ಇದೀಗ ಅಜಿತ್ ಪವಾರ್ ಬಣ ಸೇರಿದ್ದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಳೆದ ತಿಂಗಳು 17 ವಿರೋಧ ಪಕ್ಷಗಳ ಸಭೆಯಲ್ಲಿ ಶರದ್ ಪವಾರ್ ಜೊತೆ ಭಾಗಿಯಾಗಿದ್ದ ಪ್ರಫುಲ್ ಪಟೇಲ್ ಇದೀಗ ಅದೇ ಸಭೆ ಬಗ್ಗೆ ಲೇವಡಿ ಮಾಡಿದ್ದಾರೆ. ಅಲ್ಲಿನ ದೃಶ್ಯ ನೋಡಿ ನಗು ಬಂತು. ಅಲ್ಲಿ 17 ವಿರೋಧ ಪಕ್ಷಗಳಿದ್ದು, 7 ಪಕ್ಷಗಳು ಲೋಕಸಭೆಯಲ್ಲಿ ಒಬ್ಬ  ಸಂಸದರನ್ನು ಹೊಂದಿದ್ದಾರೆ. ಮತ್ತೊಂದು ಪಕ್ಷದಲ್ಲಿ ಸಂಸದರೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

 

suddiyaana