IPLನಲ್ಲಿ 70 ರನ್.. T-20Iನಲ್ಲಿ ಯಾಕಿಲ್ಲ? – ಸೂರ್ಯವಂಶಿಗೆ ಪ್ರಚಾರ ಜಾಸ್ತಿ ಆಯ್ತಾ?
ಅಂತಾರಾಷ್ಟ್ರೀಯ ಪಂದ್ಯಗಳ ಸವಾಲೇನು?

IPLನಲ್ಲಿ 70 ರನ್.. T-20Iನಲ್ಲಿ ಯಾಕಿಲ್ಲ? – ಸೂರ್ಯವಂಶಿಗೆ ಪ್ರಚಾರ ಜಾಸ್ತಿ ಆಯ್ತಾ?ಅಂತಾರಾಷ್ಟ್ರೀಯ ಪಂದ್ಯಗಳ ಸವಾಲೇನು?

ಟೀಂ ಇಂಡಿಯಾದ ಯಂಗೆಸ್ಟ್ ಪ್ಲೇಯರ್ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಟ್ಯಾಲೆಂಟ್​ನ ಎಲ್ಲರೂ ಒಪ್ಪಿಕೊಳ್ತಿದ್ದಾರೆ. ಅಪ್ರಿಶಿಯೇಟ್ ಕೂಡ ಮಾಡ್ತಿದ್ದಾರೆ. ಹಾಗೇ ಕೆಲ ಸಜೇಷನ್​ಗಳಲ್ಲೂ ಕೊಟ್ಟಿದ್ದಾರೆ. ಈಗ ಭಾರತದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಕೂಡ ಸೂರ್ಯವಂಶಿ ಬಗ್ಗೆ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ವಾರ್ನ್ ಕೂಡ ಮಾಡಿದ್ದಾರೆ. ಐಪಿಎಲ್ಲೇ ಬೇರೆ ಅಂತಾರಾಷ್ಟ್ರೀಯ ಪಂದ್ಯಗಳೇ ಬೇರೆ ಅನ್ನೋ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : FITNESS ಇಲ್ಲದ ಟೀಂ ಇಂಡಿಯಾ – Bronco ಟೆಸ್ಟ್ ಮತ್ತಷ್ಟು ಟೈಟ್ ಆಗುತ್ತಾ?

ಭಾರತದ ಸೀನಿಯರ್ ಕ್ರಿಕೆಟರ್ ಇತ್ತೀಚೆಗೆ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಟ್ಯಾಲೆಂಟ್ ಬಗ್ಗೆ ಮಾತನಾಡಿದ್ದಾರೆ. ಸೂರ್ಯವಂಶಿಗೆ ಅವ್ರ ಆಟದ ಬಗ್ಗೆ ಕೆಲ ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಹಾಗೇ  ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಡುವಿನ ವ್ಯತ್ಯಾಸಗಳನ್ನೂ ರಿವೀಲ್ ಮಾಡಿದ್ದಾರೆ.

ಐಪಿಎಲ್ ನಲ್ಲಿ ಸ್ಫೋಟಕ ಇನ್ನಿಂಗ್ಸ್.. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರೆಶರ್!

ವೈಭವ್ ಬ್ಯಾಟಿಂಗ್ ಬಗ್ಗೆ ಪ್ರಸ್ತಾಪ ಮಾಡಿರುವ ಅಜಿಂಕ್ಯ ರಹಾನೆ ಒಂದಷ್ಟು ವಿಚಾರಗಳನ್ನ ಶೇರ್ ಮಾಡಿದ್ದಾರೆ. ಹಾಗೇ ಐಪಿಎಲ್​ ಪಂದ್ಯಗಳಿಗೂ ವಿದೇಶಿ ತಂಡಗಳ ಎದುರಿನ ಪಂದ್ಯಗಳಿಗೂ ಇರುವಂಥ ಡಿಫ್ರೆನ್ಸಸ್ ಏನು ಅನ್ನೋದನ್ನೂ ರಿವೀಲ್ ಮಾಡಿದ್ದಾರೆ. ಐಪಿಎಲ್‌ನಲ್ಲಿ 4-5 ಓವರ್‌ಗಳಲ್ಲಿ 70 ಅಥವಾ ಅದಕ್ಕಿಂತ ಹೆಚ್ಚಿನ ರನ್ಸ್ ಕಲೆ ಹಾಕೋದು ಈಸಿ ಅನ್ನಿಸ್ಬೋದು. ಆದರೆ ದೇಶಕ್ಕಾಗಿ ಆಡುವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸವಾಲು ಮತ್ತು ಒತ್ತಡವೇ ಬೇರೆಯಾಗಿರುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ಹಾಗೇ 15 ವರ್ಷದ ವೈಭವ್ ಸೂರ್ಯವಂಶಿ ಅವರ ಟೆಸ್ಟ್ ಕ್ರಿಕೆಟ್ ಭವಿಷ್ಯದ ಕುರಿತು ಸಾರ್ವಜನಿಕವಾಗಿ ಚರ್ಚೆಗಳು ನಡೆಯುತ್ತಿವೆಯಾದರೂ, ಅವರಿಗೆ ಟೆಸ್ಟ್ ಆಡಿಸಲು ತರಾತುರಿ ಮಾಡಬಾರದು. ಅವರ ಮೇಲೆ ಹೆಚ್ಚುವರಿ ಒತ್ತಡ ಹೇರಬಾರದು ಎಂದಿದ್ದಾರೆ. ಇದೆಲ್ಲದ್ರ ಜೊತೆಗೆ ಸೂರ್ಯವಂಶಿಗೆ ಅಟ್ ಪ್ರಸೆಂಟ್ ಯಾವುದರ ಅವಶ್ಯಕತೆ ಇದೆ ಅನ್ನೋದನ್ನ ತುಂಬಾ ಕ್ಲಿಯರ್ ಆಗಿ ಹೇಳಿದ್ದಾರೆ.

ಸೂರ್ಯವಂಶಿಗೆ ಅತಿಯಾದ ಪ್ರಚಾರದಿಂದ ಹಾದಿ ತಪ್ಪಬಾರದು!

ವೈಭವ್ ಸೂರ್ಯವಂಶಿ ಐಪಿಎಲ್​ನಲ್ಲಿ 2 ಸೀಸನ್ ಆಡಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಭಾರತ ತಂಡಕ್ಕೂ ಕಾಲಿಟ್ಟಿದ್ದಾರೆ. ಹೀಗಿದ್ರೂ ವೈಭವ್ ಬಗ್ಗೆ ತುಂಬಾನೇ ಎಕ್ಸ್​ಪೆಕ್ಟೇಷನ್ಸ್ ಇದೆ. ಹಾಗೇ ಅಗತ್ಯಕ್ಕಿಂತನೇ ಜಾಸ್ತಿ ಪ್ರಚಾರ ಸಿಗ್ತಿದೆ ಎಂದಿದ್ದಾರೆ.  ಪ್ರಸ್ತುತ ಸಿಗುತ್ತಿರುವ ಅತಿಯಾದ ಪ್ರಚಾರದಿಂದ ಯುವ ಆಟಗಾರ ಹಾದಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಕುಟುಂಬಸ್ಥರ ಪಾತ್ರ ತುಂಬಾನೇ ದೊಡ್ಡದಿದೆ ಎಂದಿದ್ದಾರೆ. ಮುಂದಿನ 5 ರಿಂದ 10 ವರ್ಷಗಳ ಅವಧಿಗೆ ವೈಭವ್ ತುಂಬಾ ಡಿಸಿಪ್ಲೀನ್ ಆಗಿ ಇರುವಂತೆ ಪೋಷಕರು ನೋಡಿಕೊಳ್ಳಬೇಕು ಅನ್ನೋದನ್ನ ಹೇಳೋಕೂ ಮರೆಯಲಿಲ್ಲ. ಸೋ ಅಲ್ಲಿಗೆ ಸೂರ್ಯವಂಶಿಗೆ ಐಪಿಎಲ್​ನಲ್ಲಿ ರನ್ಸ್ ಕಲೆ ಹಾಕೋದಷ್ಟೇ ಅಲ್ಲ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡೋ ಪ್ರೆಶರ್ ಹ್ಯಾಂಡಲ್ ಮಾಡ್ಬೇಕು. ಅದಕ್ಕೂ ಮುಖ್ಯವಾಗಿ ವೈಭವ್ ದಾರಿ ತಪ್ಪದಂತೆ ನೋಡಿಕೊಳ್ಬೇಕು ಅನ್ನೋ ಮೆಸೇಜ್ ಕೂಡ ಕೊಟ್ಟಿದ್ದಾರೆ. ಹಾಗಂತ ರಹಾನೆ ಮಾತ್ರನೇ ಅಲ್ಲ. ರಾಬಿನ್ ಉತ್ತಪ್ಪ ವಿತ್ ಎಕ್ಸಾಂಪಲ್ ನೀಡಿ ವಾರ್ನ್ ಮಾಡಿದ್ದಾರೆ.

ಹುಡುಗಿಯರ ವ್ಯಾಮೋಹ ಮತ್ತು ಸೋಶಿಯಲ್ ಮೀಡಿಯಾ ಹುಚ್ಚು ಬೇಡ!

15ವರ್ಷಕ್ಕೇ ಭಾರತ ತಂಡಕ್ಕೆ ಕಾಲಿಟ್ಟಿರೋ ವೈಭವ್​ಗೆ ಸೀನಿಯರ್ ಪ್ಳೇಯರ್​ಗಳಿಂದಲೂ ಒಳ್ಳೊಳ್ಳೆ ಸಜೇಷನ್ ಸಿಗ್ತಿದೆ. ಈಗ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಕೂಡ ಒಂದು ಸಲಹೆ ನೀಡಿದ್ದಾರೆ. ತಂಡದಲ್ಲಿ ತಮ್ಮ ಕೆರಿಯರ್​ನ ಹೇಗೆ ಬಿಲ್ಡ್ ಮಾಡಿಕೊಳ್ಬೇಕೋ ಹಾಗೇ ಕೆಲವರ ರೀತಿಯಲ್ಲಿ ಕೆರಿಯರ್ ಹಾಳು ಮಾಡಿಕೊಳ್ಳಬಾರದು ಅನ್ನೋದನ್ನೂ ಉದಾಹರಣೆ ಸಮೇತ ಉತ್ತಪ್ಪ ಹೇಳಿದ್ದಾರೆ. ವೈಭವ್ ಭವಿಷ್ಯ ಮುಂದಿನ ಐದು ವರ್ಷಗಳಲ್ಲಿ ಡಿಸೈಡ್ ಆಗುತ್ತೆ. ಅಂದ್ರೆ 20 ವರ್ಷ ತುಂಬೋದ್ರೊಳಗೆ ಆಟದ ಮೇಲೆ ಎಷ್ಟು ಫೋಕಸ್ ಮಾಡ್ತಾರೋ ಅದೇ ಆತನ ಯಶಸ್ಸನ್ನ ನಿರ್ಧಾರ ಮಾಡುತ್ತೆ. 18 ವರ್ಷದ ಮೇಲೆ ಹುಡ್ಗೀರ ಕಡೆ ಅಟೆನ್ಷನ್ ಆಯ್ತು ಅಂದ್ರೆ ಆಟದ ಮೇಲಿನ ಶ್ರದ್ಧೆ ಕಡಿಮೆಯಾಗಿ, ದಾರಿ ತಪ್ಪುವ ಅಪಾಯವಿರುತ್ತದೆ ಎಂದು ನೇರನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.  ಹಾಗೇ ಟ್ಯಾಲೆಂಟ್ ಇದ್ರೂ ಕೆರಿಯರ್ ಹಾಳುಮಾಡಿಕೊಂಡ ವಿನೋದ್ ಕಾಂಬ್ಲಿ ಮತ್ತು ಪೃಥ್ವಿ ಶಾ ಉದಾಹರಣೆ ನೀಡಿದ್ದಾರೆ. ಇವ್ರಿಬ್ಬರಲ್ಲಿ ಅದ್ಭುತ ಪ್ರತಿಭೆ ಇತ್ತು. 17, 18ನೇ ವಯಸ್ಸಲ್ಲೇ ಎಲ್ಲರ ಗಮನ ಸೆಳೆದಿದ್ರು. ಬಟ್ ಬ್ಯಾಡ್​ಲಕ್ ಅದೇ ಸ್ಪೀಡ್​ನಲ್ಲೇ ಡೌನ್ ಫಾಲ್ ಆದ್ರು. ಹೀಗಾಗಿ ವೈಭವ್ ಸೂರ್ಯವಂಶಿ ಈ ಥರಹದ ತಪ್ಪುಗಳನ್ನ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಸಾಮರ್ಥ್ಯ ವೈಭವ್‌ಗಿದೆ ಅಂತಾ ಹೊಗಳಿದ್ದಾರೆ. ಒಟ್ನಲ್ಲಿ ವೈಭವ್​ಗೆ ಮಾಜಿ ಕ್ರಿಕೆಟರ್ಸ್, ಲೆಜೆಂಡರ್ಸ್ ಎಲ್ರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಎಲ್ಲರ ಕನ್ಸರ್ನ್ ಒಂದೇ. ಕೆರಿಯರ್ ಕಡೆ ಮಾತ್ರ ಫೋಕಸ್ ಮಾಡ್ಬೇಕು.. ಪ್ರಚಾರ ಮತ್ತು ಯಶಸ್ಸನ್ನ ನೆತ್ತಿಗೇರಿಸಿಕೊಂಡು ಅಡ್ಡದಾರಿ ಹಿಡಿಯಬಾರದು ಎಂದು ಸಲಹೆ ನೀಡಿದ್ದಾರೆ. ಸೋ ಇದನ್ನೆಲ್ಲಾ ಮೆಟ್ಟಿ ಸೂರ್ಯವಂಶಿ ಹೇಗೆ ಸರ್ವೈವ್ ಆಗ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *