ಪಡಿಕ್ಕಲ್ ಗೆ NZ ಸರಣಿ ವಾರ್ನಿಂಗ್ – ಕಿವೀಸ್ ವಿರುದ್ಧ ಬ್ಯಾಟಿಂಗ್ ಕಷ್ಟನಾ?
ಸುದರ್ಶನ್ ಬಂದ್ರೆ SLOT ಮಿಸ್?

ಪಡಿಕ್ಕಲ್ ಗೆ NZ ಸರಣಿ ವಾರ್ನಿಂಗ್ – ಕಿವೀಸ್ ವಿರುದ್ಧ ಬ್ಯಾಟಿಂಗ್ ಕಷ್ಟನಾ?ಸುದರ್ಶನ್ ಬಂದ್ರೆ SLOT ಮಿಸ್?

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಆದ್ರೆ ನೆಕ್ಸ್​ಟ್ ನ್ಯೂಜಿಲೆಂಡ್ ವಿರುದ್ಧದ ಸರಣಿ ಈಸಿ ಅಲ್ಲ ಅಂತಾ ಅಜಿಂಕ್ಯ ರಹಾನೆ ಎಚ್ಚರಿಕೆ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಾಯಿ ಸುದರ್ಶನ್ ಗಾಯಗೊಂಡಿದ್ದರಿಂದ ಸಿಕ್ಕ ಅವಕಾಶವನ್ನು ಅತ್ಯದ್ಭುತವಾಗಿ ಬಳಸಿಕೊಂಡ ಪಡಿಕ್ಕಲ್ Player of the Series ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಮೂರು ಇನ್ನಿಂಗ್ಸ್‌ಗಳಲ್ಲಿ 109.33 ಸರಾಸರಿಯಲ್ಲಿ 328 ರನ್‌ಗಳೊಂದಿಗೆ ಸರಣಿಯನ್ನು ಮುಗಿಸಿದರು, ಇದರಲ್ಲಿ ಎರಡು ಶತಕಗಳು ಮತ್ತು 167 ರ ಅತ್ಯಧಿಕ ಸ್ಕೋರ್ ಸೇರಿದೆ. ಇದೀಗ ಯುವ ಬ್ಯಾಟರ್ ಪಡಿಕ್ಕಲ್ ಅವರ ಪ್ರದರ್ಶನವನ್ನು ಅಪ್ರಿಶಿಯೇಟ್ ಮಾಡುತ್ತಲೇ ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಸವಾಲುಗಳ ಕುರಿತು ಅಜಿಂಕ್ಯ ರಹಾನೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : 2023ರಲ್ಲಿ ಮಿಸ್.. 2027ಕ್ಕೆ ಸಕ್ಸಸ್ – ODI ವಿಶ್ವಕಪ್ ಬೇಟೆ ಭಾರತಕ್ಕೇನಾ?

ನಂಬರ್ 3 ಸ್ಲಾಟ್ ನಲ್ಲಿ ಚೆನ್ನಾಗಿ ಆಡಿದ್ರೂ ತಾತ್ಕಾಲಿಕ ಅಷ್ಟೇ!

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 328 ರನ್ಸ್ ಬಾರಿಸೋ ಮೂಲಕ  ಪಡಿಕ್ಕಲ್ ಟೆಸ್ಟ್ ತಂಡದ ನಂಬರ್ 3 ಸ್ಲಾಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ಸರಣಿಯ ಯಶಸ್ಸನ್ನು ನಾವು ಈಗ ಸಂಭ್ರಮಿಸಬಹುದು. ಆದರೆ, ಭಾರತ ತಂಡ ಮುಂದೆ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಾಗ ಅಲ್ಲಿನ ಪರಿಸ್ಥಿತಿಗಳು ಸಂಪೂರ್ಣ ಭಿನ್ನವಾಗಿರುತ್ತವೆ. ಅಲ್ಲಿನ ಪಿಚ್ ಹಾಗೂ ಹವಾಮಾನಕ್ಕೆ ತಕ್ಕಂತೆ ಪಡಿಕ್ಕಲ್ ತಮ್ಮ ಸಿದ್ಧತೆಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಲ್ಲಿನ ಪರಿಸ್ಥಿತಿ ಅಷ್ಟು ಸುಲಭವಾಗಿರುವುದಿಲ್ಲ ಎಂದು ರಹಾನೆ ಎಚ್ಚರಿಸಿದ್ದಾರೆ. ಹಾಗೇ ತಂಡದಲ್ಲಿ ಯಾವುದೇ ಸ್ಥಾನವೂ ಶಾಶ್ವತವಲ್ಲ. ಸಾಯಿ ಸುದರ್ಶನ್ ಕೂಡ ಅತ್ಯಂತ ಗುಣಮಟ್ಟದ ಆಟಗಾರನಾಗಿದ್ದು, ಕಠಿಣ ಪೈಪೋಟಿ ಇರಲಿದೆ. ಆದ್ದರಿಂದ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ. ಚೇತೇಶ್ವರ್ ಪೂಜಾರ ಅವರ ನಂತರ ನಂ. 3 ಸ್ಥಾನದಲ್ಲಿ ಇಷ್ಟೊಂದು ಆತ್ಮವಿಶ್ವಾಸದಿಂದ ಬ್ಯಾಟ್ ಮಾಡಿದ ಮತ್ತೊಬ್ಬ ಭಾರತೀಯ ಆಟಗಾರನನ್ನು ತಾನು ನೋಡಿಲ್ಲ ಎಂದು ಪಡಿಕ್ಕಲ್ ಅವರ ಬ್ಯಾಟಿಂಗ್ ಟೆಕ್ನಿಕ್ ಅನ್ನು ಶ್ಲಾಘಿಸಿದ್ದಾರೆ. ಅಷ್ಟಕ್ಕೂ ಇಲ್ಲಿ ಪಡಿಕ್ಕಲ್ ಟೀಂ ಇಂಡಿಯಾ ಬಾಗಿಲು ತೆರೆದಿದ್ದೇ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿನ ಎಕ್ಸ್​ಟ್ರಾರ್ಡಿನರಿ ಪ್ರದರ್ಶನ ನೀಡಿದ ಬಳಿಕವೇ..

ರಣಜಿ ಮತ್ತು ವಿಜಯ್ ಹಜಾರೆಯಲ್ಲಿ ಪಡಿಕ್ಕಲ್ ಪರಾಕ್ರಮ!

ದೇವದತ್ ಪಡಿಕ್ಕಲ್ ಕರ್ನಾಟಕದ ಪರ ದೇಶಿ ಕ್ರಿಕೆಟ್‌ನಲ್ಲಿ ಅಂದ್ರೆ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ರನ್‌ಗಳ ಮಳೆ ಹರಿಸಿದ್ರು. ರಣಜಿ ಟ್ರೋಫಿಯಲ್ಲಿ ಆರು ಪಂದ್ಯಗಳಲ್ಲಿ 10 ಇನ್ನಿಂಗ್ಸ್‌ಗಳಲ್ಲಿ 60.33 ಸರಾಸರಿಯಲ್ಲಿ 543 ರನ್ ಗಳಿಸಿದರು. ಕರ್ನಾಟಕ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು, ಇದರಲ್ಲಿ ಅವರು ಎರಡು ಶತಕ ಮತ್ತು ಒಂದು ಅರ್ಧಶತಕ ಬಾರಿಸಿದರು, ಸೆಮಿಫೈನಲ್‌ನಲ್ಲಿ ಉತ್ತರಾಖಂಡ್ ವಿರುದ್ಧ 330 ಎಸೆತಗಳಲ್ಲಿ 232 ರನ್ ಗಳಿಸುವ ಮೂಲಕ ಅವರ ಅದ್ಭುತ ಪ್ರದರ್ಶನ ನೀಡಿದರು. ದೇಶೀಯ 50 ಓವರ್‌ಗಳ ಪಂದ್ಯಾವಳಿಯಾದ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಇನ್ನೂ ಚೆನ್ನಾಗಿ ಪರ್ಫಾಮ್ ಮಾಡಿದ್ರು. ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 90.62 ಸರಾಸರಿಯಲ್ಲಿ 725 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಅದ್ರಲ್ಲಿ ನಾಲ್ಕು ಶತಕ ಮತ್ತು ಎರಡು ಅರ್ಧಶತಕಗಳು ಇದ್ವು. ಈ ಎಲ್ಲಾ ಪ್ರದರ್ಶನ ನೋಡಿಯೇ ಭಾರತ ತಂಡದ ಬಾಗಿಲು ತೆರೆದಿತ್ತು. ಹಾಗೇ ಸಾಯಿ ಸುದರ್ಶನ್ ಇಂಜುರಿ ಪ್ಲೇಯಿಂಗ್ 11ನಲ್ಲೂ ಅವಕಾಶ ಕೊಡಿಸಿತ್ತು. ಸಿಕ್ಕ ಚಾನ್ಸ್​ನಲ್ಲಿ ಸೂಪರ್ ಡೂಪರ್ ಪ್ರದರ್ಶನವೂ ಬಂದಿದೆ. ಆದ್ರೆ ಇಲ್ಲಿ ನ್ಯೂಜಿಲೆಂಡ್ ವಿರುದ್ಧ ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದಕ್ಕಿಂತ ಸಾಯಿ ಸುದರ್ಶನ್ ಕಂ ಬ್ಯಾಕ್ ಬಳಿಕ ನಂಬರ್ 3ನಲ್ಲಿ ಯಾರು ಆಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *