ಟಿ-20ಐ ಅಗ್ರೆಶನ್.. ಏಕದಿನ ಟೆಕ್ನಿಕ್.. ಟೆಸ್ಟ್ ತಾಳ್ಮೆ – ಮೂರೂ ಮಾದರಿಯಲ್ಲಿ ಆಡ್ತಾರಾ ಸೂರ್ಯವಂಶಿ?
ಆಲ್ ಫಾರ್ಮೆಟ್ ಪ್ಲೇಯರ್ ಆಗಲು ಏನೆಲ್ಲಾ ಚಾಲೆಂಜ್?

ಟಿ-20ಐ ಅಗ್ರೆಶನ್.. ಏಕದಿನ ಟೆಕ್ನಿಕ್.. ಟೆಸ್ಟ್ ತಾಳ್ಮೆ – ಮೂರೂ ಮಾದರಿಯಲ್ಲಿ ಆಡ್ತಾರಾ ಸೂರ್ಯವಂಶಿ?ಆಲ್ ಫಾರ್ಮೆಟ್ ಪ್ಲೇಯರ್ ಆಗಲು ಏನೆಲ್ಲಾ ಚಾಲೆಂಜ್?

ಜನರೇಷನಲ್ ಬ್ಯಾಟರ್ ಅಂತಾನೇ ಕರೆಸಿಕೊಳ್ತಿರೋ ವೈಭವ್ ಸೂರ್ಯವಂಶಿ 15 ವರ್ಷ ವಯಸ್ಸಲ್ಲೇ ತಮ್ಮ ಐಡೆಂಟಿಯಯನ್ನ ರಿಜಿಸ್ಟರ್ ಮಾಡಿದ್ದಾರೆ. ಕನ್ಸಿಸ್ಟಿನ್ಸಿ ಪರ್ಫಾಮೆನ್ಸ್ ಇತ್ತು ಅಂದ್ರೆ ಭಾರತದ ಪರ ಟಿ-20ಐ ತಂಡದಲ್ಲಿ ಇನ್ಮುಂದೆ ಓಪನಿಂಗ್ ಸ್ಲಾಟ್ ಫಿಕ್ಸ್. ಹಾಗಂತ ಒಂದೇ ಮಾದರಿಗೆ ಸ್ಟಿಕ್ ಆನ್ ಆಗೋಕೂ ಆಗಲ್ಲ. ಏಕದಿನ ತಂಡದಲ್ಲೂ ಆಡ್ಬೇಕು. ಟೆಸ್ಟ್ ಟೀಮ್​ಗೂ ಸೆಲೆಕ್ಟ್ ಆಗ್ಬೇಕು.

ಇದನ್ನೂ ಓದಿ : ರೋಹಿತ್​ ಗಾಗಿ ಅಗರ್ಕರ್ ಗೆ ಗೇಟ್ ಪಾಸ್ – ನೀವೇ ಡ್ರಾಪ್ ಮಾಡಿ ಅಂದ್ರಾ HITಮ್ಯಾನ್?

ಮಾರ್ಡ್ರೆನ್ ಕ್ರಿಕೆಟ್​ನಲ್ಲಿ ಎಂಥದ್ದೇ ಪವರ್ ಹಿಟ್ಟರ್ ಆಗಿದ್ರೂ ಅದೆಷ್ಟೇ ಅಗ್ರೆಶನ್ ಇದ್ರೂ ಒಬ್ಬ ಕ್ರಿಕೆಟರ್​ ಪರಿಪೂರ್ಣ ಎನಿಸಿಕೊಳ್ಳೋದು ತಮ್ಮ ರಾಷ್ಟ್ರದ ಪರ ಮೂರೂ ಮಾದರಿಯ ಪಂದ್ಯಗಳನ್ನ​ ಆಡಿದಾಗ ಮಾತ್ರವೇ. ಯಾಕಂದ್ರೆ ಮೂರೂ ಮಾದರಿಯೂ ಡಿಫ್ರೆಂಟ್. ಅಲ್ಲಿ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಬೇಕು. ಟಿ-20ಐನಲ್ಲಿ ಹೊಡಿಬಡಿ ಎನ್ನುವಂತೆ ಬ್ಯಾಟ್ ಬೀಸಿದ್ರೆ ಏಕದಿನ ಮಾದರಿಯಲ್ಲಿ ಸಿಚುಯೇಷನ್​ಗೆ ತಕ್ಕಂತೆ ಪರ್ಫಾಮ್ ಮಾಡ್ಬೇಕು. ಅದೇ ಟೆಸ್ಟ್ ಮಾದರಿ ಅಂತಾ ಬಂದಾಗ ಪೇಷನ್ಸ್ ತುಂಬಾನೇ ಮುಖ್ಯವಾಗುತ್ತೆ. ಸೋ ಈಗ ಸೂರ್ಯವಂಶಿ ಟಿ-20ಐ ಫಾರ್ಮೆಟ್​ಗೆ ಪರ್ಫೆಕ್ಟ್ ಬ್ಯಾಟರ್. ಏಕದಿನ ಮಾದರಿಯಲ್ಲೂ ಆಡ್ಬೋದು. ಆದ್ರೆ ಇಲ್ಲಿರುವಂಥ ಪ್ರಶ್ನೆಯೇ ಟೆಸ್ಟ್ ಫಾರ್ಮೆಟ್. ಆದ್ರೆ ಇದಕ್ಕೆ ಅವ್ರ ಬಾಲ್ಯದ ಕೋಚ್ ಉತ್ತರ ಕೊಟ್ಟಿದ್ದಾರೆ. ಸೂರ್ಯವಂಶಿಗೆ ಮೂರೂ ಮಾದರಿಯಲ್ಲೂ ಆಡುವಂಥ ಸಾಮರ್ಥ್ಯ ಇದೆ ಎಂದಿದ್ದಾರೆ.

ವೈಭವ್ ಸೂರ್ಯವಂಶಿ ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಂದ್ರೆ ಟಿ20 ಮಿಂಚುತ್ತಿದ್ದರೂ, ಓಡಿಐ ಮತ್ತು ರೆಡ್ ಬಾಲ್ (ಟೆಸ್ಟ್) ಕ್ರಿಕೆಟ್‌ಗೆ ಬೇಕಾದ ಟೆಕ್ನಿಕಲ್ ಎಬಿಲಿಟಿ ಮತ್ತು ಬೇಸ್ ಅವ್ರಲ್ಲಿದೆ. ಈಗಾಗ್ಲೇ ಲಿಸ್ಟ್ ‘ಎ’ ಏಕದಿನ ಮಾದರಿ ಕ್ರಿಕೆಟ್​ನ ಇತಿಹಾಸದಲ್ಲೇ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ತಮ್ಮ ಬಿರುಸಿನ ಬ್ಯಾಟಿಂಗ್ ಕೇವಲ ಟಿ20ಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ರು. ಹಾಗೇ ಟೆಸ್ಟ್ ಮಾದರಿಯಲ್ಲೂ ಮುಂದೊಂದು ದಿನ ಅವಕಾಶ ಪಡೆಯಬಲ್ಲೆ ಅನ್ನೋ ಭರವಸೆ ಮೂಡಿಸಿದ್ದಾರೆ. ಬಿಹಾರ್ ತಂಡದ ಪರವಾಗಿ ಕೇವಲ 12ನೇ ವಯಸ್ಸಿನಲ್ಲೇ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನ ಅನುಭವವನ್ನು ಹೊಂದಿದ್ದಾರೆ. ಹಾಗೇ  ದುಲೀಪ್ ಟ್ರೋಫಿಯ ಈಸ್ಟ್ ಝೋನ್ ತಂಡಕ್ಕೆ ಉಪನಾಯಕನಾಗಿ ಆಯ್ಕೆಯಾಗುವ ಮೂಲಕ ಬಿಸಿಸಿಐ ಸೆಲೆಕ್ಟರ್ಸ್ ಸೂರ್ಯವಂಶಿಯನ್ನ ದೀರ್ಘಾವಧಿ ಕ್ರಿಕೆಟ್‌ಗೂ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಅನ್ನೋಧು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಅದೂ ಅಲ್ದೇ ಭಾರತದ ಅಂಡರ್-19 ತಂಡದ ಪರವಾಗಿ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ 4 ದಿನಗಳ ಪಂದ್ಯದಲ್ಲಿ ವೈಭವ್ ಅದ್ಭುತ ಶತಕ ಸಿಡಿಸಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ 2026ರ ಐಪಿಎಲ್ ಯಶಸ್ಸಿನ ನಂತರ ನೀಡಿದ ಸಂದರ್ಶನವೊಂದರಲ್ಲಿ ವೈಭವ್, “ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಮತ್ತು ನನ್ನ ತಂದೆಯ ಅಂತಿಮ ಕನಸು ಎಂದಿದ್ದಾರೆ.. ಸೋ ಅಲ್ಲಿಗೆ ಟೆಸ್ಟ್ ಮಾದರಿ ವೈಭವ್ ಅವ್ರ ಕನಸು ಅನ್ನೋದು ಇಲ್ಲೇ ಗೊತ್ತಾಗುತ್ತೆ. ಅಷ್ಟೇ ಅಲ್ಲದೆ ಆಲ್ ಫಾರ್ಮೆಟ್ ಪ್ಲೇಯರ್ ಆಗೋದ್ರ ಹಿಂದೆ ತಂಡಕ್ಕೂ ಲಾಭ ಇದೆ.

ಕಂಪ್ಲೀಟ್ ಕ್ರಿಕೆಟರ್ ಚಾಲೆಂಜ್!

ಕ್ರಿಕೆಟ್‌ ನಲ್ಲಿ 3 ಮಾದರಿಯ ಯಶಸ್ವಿ ಆಟಗಾರನಾಗುವುದು ದೊಡ್ಡ ಸಾಧನೆ

ಪ್ರತಿ ಮಾದರಿಗೂ ವಿಭಿನ್ನ ಕೌಶಲ್ಯ, ಮಾನಸಿಕ ಶಕ್ತಿ ಮತ್ತು ಫಿಟ್‌ ನೆಸ್ ಅಗತ್ಯ

ಟೆಸ್ಟ್ ಕ್ರಿಕೆಟ್‌ ಗೆ ಬೇಕಾದ ರಕ್ಷಣಾತ್ಮಕ ತಂತ್ರ ಮತ್ತು ಟಿ20ಗೆ ಬೇಕಾದ ಅಗ್ರೆಶನ್

ಟೆಸ್ಟ್ ನಲ್ಲಿ ದಿನವಿಡೀ ಬ್ಯಾಟಿಂಗ್ ಗೆ ತಾಳ್ಮೆ, ಟಿ20ಯಲ್ಲಿ ಫಸ್ಟ್ ಬಾಲ್ ಅಟ್ಯಾಕ್

ಟೀಂ ಇಂಡಿಯಾದಲ್ಲಿ ಆಲ್ ಫಾರ್ಮೆಟ್ ಪ್ಲೇಯರ್ ಅಂದ್ರೆ ಆಸ್ತಿ ಇದ್ದಂತೆ

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಬುಮ್ರಾ 3 ಮಾದರಿಯ ಮ್ಯಾಚ್ ವಿನ್ನರ್ಸ್

ಆಲ್ ಫಾರ್ಮೆಟ್ ಪ್ಲೇಯರ್ ಗಳಿಗೆ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ನಾಯಕ

ಟೀಂ ಇಂಡಿಯಾ ಪರ ಧೀರ್ಘವಾದ ವೃತ್ತಿಜೀವನ ನಡೆಸಲು ಕೂಡ ಸಹಕಾರಿ

ಮೂರೂ ಮಾದರಿಯಲ್ಲಿ ಆಡುವ ಆಟಗಾರರಿಗೆ ಅತ್ಯುನ್ನತವಾದ ‘A+’ ಗ್ರೇಡ್

ಟೆಸ್ಟ್ ಟೆಕ್ನಿಕ್ & ಟಿ20 ಹಿಟ್ಟಿಂಗ್ ಸಾಮರ್ಥ್ಯ ಇದ್ದವ್ರಿಗೆ ಐಪಿಎಲ್ ನಲ್ಲೂ ಬೇಡಿಕೆ

ವರ್ಷಪೂರ್ತಿ ಬ್ಯುಸಿ ಇರೋದ್ರಿಂದ ಮೆಂಟಲ್ ಎಬಿಲಿಟಿ & ದೈಹಿಕ ಫಿಟ್‌ನೆಸ್

ವಿದೇಶಿ ಸರಣಿಗಳು, ಐಸಿಸಿ ಟೂರ್ನಮೆಂಟ್ ಗಳಲ್ಲಿ ಪ್ರೆಶರ್ ತಡೆಯುವ ಸಾಮರ್ಥ್ಯ

ಹೀಗೆ ಒಂದೊಂದು ಮಾದರಿಯೂ ಆಟಗಾರನಿಗೆ ಒಂದೊಂದು ರೀತಿಯ ಅಡ್ವಾಂಟೇಜ್​ ಆಗಲಿದೆ. ಸೋ  ಮೂರೂ ಮಾದರಿಯ ಕ್ರಿಕೆಟರ್ ಆಗುವುದು ಒಬ್ಬ ಆಟಗಾರನನ್ನು ಕೇವಲ ‘ಹಿಟ್ಟರ್’ ಅಥವಾ ‘ಡಿಫೆಂಡರ್’ ಮಾಡದೆ, ಒಬ್ಬ ‘ಸಂಪೂರ್ಣ ಕ್ರಿಕೆಟಿಗ’ ಅಂದ್ರೆ Complete Cricketer ಅನ್ನಾಗಿ ರೂಪಿಸುತ್ತದೆ. ವೈಭವ್ ಸೂರ್ಯವಂಶಿಗೂ ಕೂಡ ಮೂರೂ ಮಾದರಿಗಳನ್ನು ಆಳುವ ಸಾಮರ್ಥ್ಯಗಳಿವೆ. ಆದ್ರೆ ಅದಕ್ಕಾಗಿ ಒಂದಷ್ಟು ವರ್ಕ್ ಕೂಡ ಮಾಡ್ಬೇಕಾಗುತ್ತೆ. ಈಗಷ್ಟೇ 15 ವರ್ಷ. ಭಾರತ ಟಿ-20ಐ ತಂಕ್ಕೆ ಕಾಲಿಟ್ಟಾಗಿದೆ. ಮುಂದಿನ ದಿನಗಳಲ್ಲಿ ಮೂರೂ ಮಾದರಿಯಲ್ಲೂ ಮ್ಯಾಚ್ ವಿನ್ನರ್ ಪ್ಲೇಯರ್ ಆಗೋ ಸಾಮರ್ಥ್ಯವೂ ಇದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿದ್ದೇ ಟೆಸ್ಟ್ ಕ್ರಿಕೆಟ್​ನಲ್ಲಿನ ಅವ್ರ ಅದ್ಭುತ ಪ್ರದರ್ಶನದಿಂದ. ಹೌದು ಆ ಟೈಮಲ್ಲಿ ಟಿ-20ಐ ಇರ್ಲಿಲ್ಲ. ಏಕದಿನ ಪಂದ್ಯಗಳಿದ್ರೂ ಟೆಸ್ಟ್ ಮ್ಯಾಚಸ್ ಜಾಸ್ತಿ ಇತ್ತು. ಸೋ ಅದ್ರ ಮೇಲೇ ಫೋಕಸ್ ಮಾಡಿದ್ರು. ಬಟ್ ಮಾರ್ಡ್ರೆನ್ ಕ್ರಿಕೆಟ್​ನಲ್ಲಿ ಟಿ-20ಐ ಫೀವರ್ ಜಾಸ್ತಿ ಆಗ್ತಿರೋದ್ರಿಂದ ಎಲ್ಲರ ಫೇವರೆಟ್ ಫಾರ್ಮೆಟ್ ಕೂಡ ಆಗಿದೆ. ಆದ್ರೆ ಒಬ್ಬ ಕ್ರಿಕೆಟರ್ ಆಗಿ ಸಕ್ಸೀಡ್ ಆಗ್ಬೇಕು ಅಂದ್ರೆ ಮೂರೂ ಮಾದರಿಯಲ್ಲೂ ಮ್ಯಾಚ್ ವಿನ್ನರ್ ಆಗ್ಬೇಕಾಗುತ್ತೆ.

Shantha Kumari

Leave a Reply

Your email address will not be published. Required fields are marked *