ಐಶ್ವರ್ಯ – ಅಭಿ ಸಂಧಾನ​! – ಬಚ್ಚನ್​ ಮನೆಗೆ ಬಂದ ಐಶ್?
ಫ್ಯಾನ್ಸ್‌ ಭಾವನೆ ಜೊತೆ ಆಟವಾಡಿದ್ರಾ?

ಐಶ್ವರ್ಯ – ಅಭಿ ಸಂಧಾನ​! – ಬಚ್ಚನ್​ ಮನೆಗೆ ಬಂದ ಐಶ್?ಫ್ಯಾನ್ಸ್‌ ಭಾವನೆ ಜೊತೆ ಆಟವಾಡಿದ್ರಾ?

ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಅನ್ನೋ ಸುದ್ದಿ ಜೋರಾಗೇ ಸದ್ದು ಮಾಡ್ತಾ ಇರೋದು ನಿಮ್ಗೆ ಗೊತ್ತೇ ಇದೆ.. ಬಚ್ಚನ್‌ ಮನೆ ತೊರೆದು ಐಶ್‌ ಬೇರೆ ಮನೆಗೆ ಮನೆಗೆ ಶಿಫ್ಟ್‌ ಆಗಲಿದ್ದಾರೆ ಅಂತ ಹೇಳಲಾಗ್ತಿತ್ತು.. ಈ ಬಗ್ಗೆ ಸೆಲೆಬ್ರಿಟಿ ಜೋಡಿ ಇಲ್ಲಿವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.. ಆದ್ರೀಗ ಐಶ್‌ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ. ಐಶ್‌ ಮಗಳೊಂದಿಗೆ ಬಿಗ್‌ಬಿ ಮನೆಗೆ ಬಂದಿದ್ದಾರೆ. ಹಾಗಾದ್ರೆ ಐಶ್‌ ಹಾಗೂ ಅಭಿಷೇಕ್‌ ಮುನಿಸು ಮರೆತು ಒಂದಾದ್ರಾ? ಬಿಗ್‌ಬಿ ಮನೆಯ ಹೊಸ ಅಪ್‌ಡೇಟ್‌ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಹುಲ್ ಭೇಟಿಯಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್! – ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರಾ ಕುಸ್ತಿಪಟುಗಳು?

ಗಂಡ ಹೆಂಡ್ತಿ ಅಂದ್ಮೇಲೆ ಮನಸ್ತಾಪ, ಜಗಳ ಕಾಮನ್‌.. ಒಮ್ಮೆ ಕಿತ್ತಾಡ್ಕೊಳ್ತಾರೆ.. ಕೆಲ ನಿಮಿಷಗಳಲ್ಲಿ ಮತ್ತೆ ಒಂದಾಗ್ತಾರೆ. ಇನ್ನೂ ಕೆಲವೊಮ್ಮೆ ಕೆಲ ದಿನಗಳವರೆಗೆ ದೂರ ಇದ್ದು ಆ ನಂತರ ಮತ್ತೆ ಒಟ್ಟಿಗೆ ಬದುಕಲು ಶುರು ಮಾಡ್ತಾರೆ..  ಇದೆಲ್ಲವೂ ಕಾಮನ್‌.. ಆದರೆ ಬಣ್ಣದ ಲೋಕದಲ್ಲಿ ಈ ಚಿಕ್ಕ ವಿಚಾರನೇ ದೊಡ್ಡದು. ಗಂಡ ಹೆಂಡ್ತಿ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅಂದ್ರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ.. ಸಾಕಷ್ಟು ವದಂತಿ ಹಬ್ಬಲು ಶುರು ಆಗುತ್ತೆ. ಸೋಶಿಯಲ್‌ ಮೀಡಿಯಾ ತುಂಬೆಲ್ಲಾ ಇದ್ರದ್ದೇ ಸುದ್ದಿ ಸದ್ದು ಮಾಡ್ತಾ ಇರುತ್ತೆ..  ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಅಂದ್ರೆ  ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಾಂಸಾರಿಕ ಜೀವನ.

ಹೌದು, ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಸಾಂಸಾರಿಕ ಜೀವನ ಹಳಿ ತಪ್ಪಿದೆ. ಶೀಘ್ರದಲ್ಲೇ ಡಿವೋರ್ಸ್‌ ಪಡ್ಕೊಳ್ತಿದ್ದಾರೆ ಅಂತಾ ಹಲವು ದಿನಗಳಿಂದ ಬಾಲಿವುಡ್‌ ಅಂಗಳದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ.. ಇದಕ್ಕೆ ಪೂರಕವಾಗಿ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಈ ವರ್ಷದ ಆರಂಭದಲ್ಲಿಯೇ ಅಭಿಷೇಕ್ ಬಚ್ಚನ್ ಮನೆಯಿಂದ ಹೊರಬಂದಿದ್ದಾರೆ.. ಮಗಳ ಜೊತೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಅಂತಾ ಹೇಳಲಾಗ್ತಿತ್ತು.. ಇನ್ನೂ ಅಂಬಾನಿ ಮಗನ ಮದುವೆಯಲ್ಲಿ ಕೂಡ ಐಶ್ವರ್ಯ ರೈ ತಮ್ಮ ಮಗಳ ಜೊತೆ ಕಾಣಿಸಿಕೊಂಡಿದ್ದರೇ ಹೊರತು ಅಮಿತಾಬ್ ಬಚ್ಚನ್ -ಅಭಿಷೇಕ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಜೊತೆ ಕಾಣಿಸಿಕೊಂಡಿರಲಿಲ್ಲ. ತಮ್ಮ ಮಗಳ ಜೊತೆ ಐಶ್ವರ್ಯ ನ್ಯೂಯಾರ್ಕ್‌ ಪ್ರವಾಸಕ್ಕೆ ಹೋದಾಗ ಕೂಡ ಅಭಿಷೇಕ್ ಬಚ್ಚನ್ ಇರಲಿಲ್ಲ. ಅಭಿಷೇಕ್ ಬಚ್ಚನ್ ಪ್ಯಾರಿಸ್ ಗೆ ಪ್ರಯಾಣ ಮಾಡಿದಾಗ ಕೂಡ ಅಭಿಷೇಕ್ ಬಚ್ಚನ್ ಪಕ್ಕದಲ್ಲಿ ಐಶ್ವರ್ಯ ರೈ ಅಭಿಮಾನಿಗಳ ಕಣ್ಣಿಗೆ ಕಾಣಿಸಲಿಲ್ಲ. ಇವರಿಬ್ಬರ ನಡೆಯಿಂದಾಗಿ ಈ ಜೋಡಿ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತು ಕೇಳಿಬಂತು.. ತಮ್ಮ ನೆಚ್ಚಿನ ಜೋಡಿ ದೂರವಾಗುತ್ತೆ ಅಂತಾ ಫ್ಯಾನ್ಸ್‌ ಕೂಡ ಬೇಜಾರು ಮಾಡಿಕೊಂಡಿದ್ರು..  ಆದ್ರೀಗ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಮನೆಗೆ ಬಂದಿದ್ದಾರೆ. ಅಭಿಷೇಕ್ ಮನೆಯಾದ ಜಲ್ಸಾದ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮಾತನಾಡುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ ಐಶ್ವರ್ಯ.

ವೈರಲ್‌ ಆದ ವಿಡಿಯೋದಲ್ಲಿ ಐಶ್‌  ಮಗಳನ್ನು ಶಾಲೆಯಿಂದ ಕರೆದುಕೊಂಡು ಅಭಿಷೇಕ್ ಬಚ್ಚನ್ ಮನೆಗೆ ಬಂದಿದ್ದಾರೆ. ಇದನ್ನ ನೋಡಿದ ಅನೇಕರು ಈಗ ಅಭಿಷೇಕ್ ಮನೆಗೆ ಮಹಾರಾಣಿ ಮರಳಿದಳು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಸಂಬಂಧ ಸರಿಯಾಗಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ ಎನ್ನುತ್ತಿದ್ದಾರೆ. ಇದರ ನಡುವೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಅಸಂಖ್ಯಾತ ಅಭಿಮಾನಿಗಳೂ ಈ ವಿಡಿಯೋ ನೋಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೂ ಕೆಲವರು ಐಶ್‌ ಹಾಗೂ ಅಭಿಷೇಕ್‌ ಫ್ಯಾನ್ಸ್‌ ಭಾವನೆಗಳ ಜೊತೆ ಆಟ ಆಡ್ತಿದ್ದಾರೆ.. ಆಗಾಗ ಈತರ ಡ್ರಾಮ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಾಮೆಂಟ್‌ ಮಾಡ್ತಿದ್ದಾರೆ. ಒಟ್ಟಿನಲ್ಲಿ ಐಶ್‌ ಬಚ್ಚನ್ ಮನೆಗೆ ಬಂದಿರೋದನ್ನ ನೋಡಿ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ.

Shwetha M