ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ಐಶ್ವರ್ಯಾ ರೈ  – ಕೈಗೆ ಬ್ಯಾಂಡೇಜ್​ ಸುತ್ತಿಕೊಂಡೇ Cannes 2024 ನಲ್ಲಿ ಭಾಗಿ

ರೆಡ್​ ಕಾರ್ಪೆಟ್​ ಮೇಲೆ ಮಿಂಚಿದ ಐಶ್ವರ್ಯಾ ರೈ  – ಕೈಗೆ ಬ್ಯಾಂಡೇಜ್​ ಸುತ್ತಿಕೊಂಡೇ Cannes 2024 ನಲ್ಲಿ ಭಾಗಿ

ಐಶ್ವರ್ಯ ರೈ ಬಾಲಿವುಡ್ ಅಂಗಳದ ಚಾರ್ಮ್ ಅಂದ್ರೆ ತಪ್ಪಾಗಲ್ಲ. ಆಕೆಯ ಸೌಂದರ್ಯ, ನಟನೆ ಎಲ್ಲವೂ ಸೂಪರ್. ಕೆಲಸ ಅಂತಾ ಬಂದ್ರೆ ನಟಿ ಐಶ್ವರ್ಯ ರೈ ಯಾವುದೇ ಕಾರಣ ಕೊಟ್ಟು ತಪ್ಪಸಿಕೊಳ್ಳಲ್ಲ. ಎಂತಹ ಸಂದರ್ಭ ಬಂದರೂ ಕೂಡ  ಒಪ್ಪಿಕೊಂಡ ಕೆಲಸವನ್ನು ಮುಗಿಸಿಕೊಡುತ್ತಾರೆ. ಇದೀಗ ಬಾಲಿವುಡ್​ ಬೆಡಗಿ ಐಶ್ವರ್ಯಾ ರೈ ಬಚ್ಚನ್​ ಅವರ ಕೈಗೆ ಪೆಟ್ಟಾಗಿದೆ. ಆದರೂ ಕೂಡ ಅವರು ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗಿ ಆಗುವುದನ್ನು ತಪ್ಪಿಸಿಕೊಂಡಿಲ್ಲ. ಕೈಯಲ್ಲಿ ಬ್ಯಾಂಡೇಜ್​ ಇದ್ದರೂ ಸಹ ಅವರು ನಗು ನಗುತ್ತಲೇ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಮಾಧ್ಯಮಗಳ ಕ್ಯಾಮೆರಾಗಳತ್ತ ನಗು ಚೆಲ್ಲಿದ್ದಾರೆ. ಅವರ ಫೋಟೋಗಳು ವೈರಲ್​ ಆಗಿವೆ.

ಇದನ್ನೂ ಓದಿ: 1 ರನ್.. 1 ಸೋಲು.. RCBಗೆ ಕಪ್ – WPLನಂತೆಯೇ ನಡೀತಿದ್ಯಾ IPL?

ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಕೂಡ ಒಂದು. ಕಾನ್ಸ್ ಚಿತ್ರೋತ್ಸವ 14ರಿಂದ ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವು ಕೂಡ ಕಾನ್ಸ್ ಚಿತ್ರೋತ್ಸವದಲ್ಲಿ ಕರಾವಳಿ ನಟಿ ಐಶ್ವರ್ಯಾ ರೈ ಭಾಗಿಯಾಗಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ನಟಿ ಹೆಜ್ಜೆ ಹಾಕಿದ್ದಾರೆ. ನಟಿಯ ಕೈಗೆ ಪೆಟ್ಟಾಗಿದ್ರೂ ನಗು ಮುಖದಿಂದ ನಟಿ ಕಾರ್ಯಕ್ರಮದಲ್ಲಿ ಮಿಂಚಿರೋದು ನೋಡಿ ನೆಟ್ಟಿಗರು ಅಚ್ಚರಿ ಮೂಡಿಸಿದ್ದಾರೆ.

ಅಂದಹಾಗೆ, ಕಾನ್ಸ್ ಚಿತ್ರೋತ್ಸವಕ್ಕೆ ಬರಲು ಮುಂಬೈ ವಿಮಾನ ನಿಲ್ದಾಣದಿಂದ ಐಶ್ವರ್ಯಾ ರೈ ಹೊರಟಾಗಲೇ ಫ್ಯಾನ್ಸ್‌ಗೆ ಆತಂಕವಾಗಿತ್ತು. ಆದರೆ ಕೈಗೆ ಪೆಟ್ಟಾಗಿದ್ರೂ ನಗುಮುಖದಿಂದಲೇ ಹೊರಟ ಐಶ್ವರ್ಯಾರನ್ನು ನೋಡಿ ಅಭಿಮಾನಿಗಳು ಆರೋಗ್ಯ ವಿಚಾರಿಸಿದ್ದರು. ಇದೀಗ ಐಶ್ವರ್ಯಾ ರೈ ವಿವಿಧ ಭಂಗಿಯಲ್ಲಿ ನಿಂತು ಪೋಸ್ ಕೊಡ್ತಿರೋದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 50ನೇ ವರ್ಷದ ವಯಸ್ಸಿನಲ್ಲಿಯೂ ನಟಿ ಗ್ಲ್ಯಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

Shwetha M