ಬಚ್ಚನ್ ಫ್ಯಾಮಿಲಿ ಬಿಟ್ರಾ ಐಶ್ವರ್ಯಾ ರೈ? – ಅಂಬಾನಿ ಮದ್ವೇಲಿ ಬಿಗ್​ ಸೀಕ್ರೆಟ್ ರಿವೀಲ್

ಬಚ್ಚನ್ ಫ್ಯಾಮಿಲಿ ಬಿಟ್ರಾ ಐಶ್ವರ್ಯಾ ರೈ? – ಅಂಬಾನಿ ಮದ್ವೇಲಿ ಬಿಗ್​ ಸೀಕ್ರೆಟ್ ರಿವೀಲ್

ಭಾರತದ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​ ಮದುವೆ ಅದ್ದೂರಿಯಾಗಿ ನೆರವೇರಿದೆ. ಅಂಬಾನಿ ಕುಟುಂಬದ ಮದುವೆ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಆದ್ರೆ ಇದೀಗ ಸಾವಿರಾರು ಕೋಟಿ ವೆಚ್ಚದಲ್ಲಿ ನಡೆದ ಮದುವೆ ಈಗ ಮತ್ತೊಂದು ವಿಚಾರಕ್ಕೆ ಭಾರಿ ಸೌಂಡ್‌ ಮಾಡ್ತಾ ಇದೆ. ಅಂಬಾನಿ ಕುಟುಂಬದ ಮದುವೆಯಲ್ಲಿ ಅಮಿತಾಭ್​ ಬಚ್ಚನ್​ ಫ್ಯಾಮಿಲಿಯ ರಹಸ್ಯವೊಂದು ಬಯಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್‌ ಆಗಿದ್ದು, ಬಚ್ಚನ್‌ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಗಾಸಿಪ್‌ಗಳಿಗೆ ಪುಷ್ಠಿ ನೀಡಿದಂತಾಗಿದೆ. ಅಷ್ಟಕ್ಕೂ ಅಂಬಾನಿ ಕುಟುಂಬದ ಮದುವೆಯಲ್ಲಿ ಆಗಿದ್ದೇನು? ಬಚ್ಚನ್‌ ಫ್ಯಾಮಿಲಿಯಲ್ಲಿ ನಡಿತಾ ಇರೋದಾದ್ರೂ ಏನು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಲಂಕಾ ಸರಣಿಗೆ ರೆಸ್ಟ್ ಕೇಳಿದ ಹಾರ್ದಿಕ್ ಪಾಂಡ್ಯ – ಕನ್ನಡಿಗ ಕೆ.ಎಲ್ ರಾಹುಲ್‌ಗೆ ಹೊಡೀತು ಲಕ್ 

ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ ಅದ್ದೂರಿಯಾಗಿ ನೆರವೇರಿದೆ. ಲೋಕಲ್ To ಗ್ಲೋಬಲ್ ಸ್ಟಾರ್‌ಗಳಿಂದ ಮದುವೆ ಸಭಾಂಗಣ ತುಂಬಿ ತುಳುಕುತ್ತಿದೆ. ಇನ್ನೂ ಹೇಳಿ ..ಕೇಳಿ … ಇದು ಸೆಲೆಬ್ರಿಟಿ ಮದುವೆ. ಇಲ್ಲಿ ಎಲ್ಲಾ ಸೆಲೆಬ್ರಟಿಗಳ ಮೇಲೆ ಪಾಪರಾಜಿಗಳ ಒಂದು ಕಣ್ಣು ಇದ್ದೇ ಇರುತ್ತೆ.. ಇಡೀ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲೆಲ್ಲಾ ಕ್ಯಾಮರಾಗಳು ಸುತ್ತುವರೆದಿತ್ತು. ಅದ್ದೂರಿ ಮದುವೆಯ ಸಾಕಷ್ಟು ವಿಡಿಯೋಗಳು ವೈರಲ್‌ ಆಗಿತ್ತು. ಮದುವೆ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಇದೀಗ ಅಂಬಾನಿ ಮದುವೆಯಲ್ಲಿ ಬಚ್ಚನ್‌ ಫ್ಯಾಮಿಲಿಯ ಸೀಕ್ರೆಟ್‌ ಒಂದು ರಿವೀಲ್‌ ಆಗಿದೆ..

ಬಾಲಿವುಡ್‌ನ ಬೆಸ್ಟ್ ಜೋಡಿಗಳಲ್ಲಿ ಒಂದಾಗಿರುವ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ಕೆಲ ತಿಂಗಳುಗಳಿಂದ ವದಂತಿ ಹರಿದಾಡುತ್ತಿದೆ.  ಇಬ್ಬರೂ ಯಾವ ಕ್ಷಣದಲ್ಲಾದರೂ ಅಧಿಕೃತವಾಗಿ ಬೇರೆಯಾಗಬಹುದು ಎನ್ನುವ ಮಾತು ಕೂಡ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇನ್ನೂ ಈ ವರ್ಷದ ಆರಂಭದಲ್ಲಿಯೇ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರ ಮನೆಯಿಂದ ಬ್ಯಾಗ್ ಸಮೇತ ಹೊರ ಬಂದಿದ್ದಾರೆ ಅನ್ನುವ ಸುದ್ದಿ ಕೂಡ ಸುದ್ದಿಯಾಗಿತ್ತು. ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ, ಕೇಳಿ ಬರುತ್ತಿರುವ ಈ ಮಾತುಗಳಿಗೆ ಪುಷ್ಟಿ ನೀಡುವಂತೆ ಐಶ್ವರ್ಯ ರೈ ತಮ್ಮ ಗಂಡ ಅಭಿಷೇಕ್ ಬಚ್ಚನ್ ಕುಟುಂಬದಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ತಮ್ಮ ಅತ್ತೆ-ಮಾವ-ಗಂಡನ ಜೊತೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಸಮಾರಂಭಕ್ಕೆ ಬಾರದೇ, ತಮ್ಮ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಬಂದು ಹೋಗಿದ್ದಾರೆ.

ಹೌದು, ಅನಂತ್‌ ಅಂಬಾನಿ ಹಾಗೂ ರಾಧಿಕಾ ಮದುವೆಗೆ ಬಂದ ಸೆಲೆಬ್ರಿಟಿಗಳಿಗೆಲ್ಲಾ ಫೋಟೋಗೆ ಫೋಸ್ ನೀಡಲು ಎಂದೇ ಜಾಗವನ್ನೂ ನಿಗಧಿ ಮಾಡಲಾಗಿತ್ತು.  ಹೀಗೆ ಗುರುತಿಸಲಾದ ಪ್ರದೇಶಕ್ಕೆ ಅಮಿತಾಭ್ ಬಚ್ಚನ್ ತಮ್ಮ ಕುಟುಂಬದ ಜೊತೆ ಆಗಮಿಸಿದ್ದಾರೆ. ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಶ್ವೇತಾ ಬಚ್ಚನ್, ನಿಖಿಲ್ ನಂದಾ, ನವ್ಯಾ ನವೇಲಿ, ಮತ್ತು ಅಗಸ್ತ್ಯ ಜೊತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ. ಆದ್ರೆ..ಈ ಫ್ಯಾಮಿಲಿ ಫೋಟೋಗೆ ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಜೊತೆ ಬಂದು ಫೋಸ್‌ ಕೊಡಲಿಲ್ಲ. ಬದಲಿಗೆ ಬಚ್ಚನ್ ಕುಟುಂಬ ಅಲ್ಲಿಂದ ತೆರಳಿದ ನಂತರ ತಮ್ಮ ಮುದ್ದಿನ ಮಗಳು ಆರಾಧ್ಯ ಜೊತೆ ಬಂದು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ.

ಸದ್ಯಕ್ಕೆ ಅಭಿಷೇಕ್ ತಮ್ಮ ಕುಟುಂಬದ ಜೊತೆ ಹಾಗೂ ಐಶ್ವರ್ಯ ತಮ್ಮ ಪುತ್ರಿಯ ಜೊತೆ ಕಾಣಿಸಿಕೊಂಡ ಫೋಟೋ ಮತ್ತು ವಿಡಿಯೋ ಈಗ ವೈರಲ್ ಆಗಿವೆ. ಅನೇಕರ ಮನದಲ್ಲಿ ಹತ್ತಾರು ಪ್ರಶ್ನೆಗಳನ್ನೂ ಕೂಡ ಹುಟ್ಟು ಹಾಕಿವೆ. ಕೆಲವರು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ ಎಂದು ಹೇಳುತ್ತಿದ್ದಾರೆ. ಸಂಸಾರ ಅಂದ ಮೇಲೆ ಸರಸ-ವಿರಸ ಇದ್ದಿದ್ದೇ ಆದರೆ ತಮ್ಮ ನಡುವೆ ಅನ್ಯೋನ್ಯತೆಯ ಕೊರತೆ ಇದೆ ಎಂಬ ಸಂದೇಶವನ್ನು ಇಬ್ಬರು ಈ ತರ ರವಾನೆ ಮಾಡಬಾರದಿತ್ತು ಅನ್ನುತ್ತಿದ್ದಾರೆ. ವಿಚ್ಛೇದನ ನೀಡದೇ ಜಗತ್ತಿನ ಪಾಲಿಗೆ ಸತಿ-ಪತಿಗಳಂತೆ ಇಬ್ಬರೂ ಬದುಕುತ್ತಿರುವುದಕ್ಕೆ ಅಮಿತಾಬ್ ಬಚ್ಚನ್ ಮಾತ್ರ ಕಾರಣ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮುನಿಸು ಮರೆತು ಜೊತೆಯಾಗಿ ಬಾಳಿ ಎಂಬ ಸಲಹೆಯನ್ನೂ ಕೊಡ್ತಿದ್ದಾರೆ. ಆದ್ರೆ, ಯಾರ್ ಏನೇ ಹೇಳಿದ್ರೂ ಐಶ್ ಮಾತ್ರ ಬಚ್ಚನ್ ಫ್ಯಾಮಿಲಿಯಿಂದ ದೂರ ಬಂದಿದ್ದಾರೆ ಅನ್ನೋ ಬಿಗ್ ಸೀಕ್ರೆಟ್ ಕಣ್ಣ ಮುಂದಿದೆ. ಬಚ್ಚನ್ ಫ್ಯಾಮಿಲಿ ಜೊತೆ ತೋರಿಕೆಗೂ ಕೂಡಾ ಐಶ್ ಮತ್ತು ಮಗಳು ಆರಾಧ್ಯ ಸೇರಲೇ ಇಲ್ಲ. ಅಮ್ಮ ಮಗಳು ತಾವಾಯ್ತು ತಮ್ಮ ಪಾಡಾಯ್ತು ಅಂತಾ ಮದುವೆಗೆ ಬಂದು ಹೋಗಿದ್ದಾರೆ. ಮತ್ತೊಂದೆಡೆ ಬಚ್ಚನ್ ಫ್ಯಾಮಿಲಿ ಕೂಡಾ ಮುರಿದ ಮನಸನ್ನು ಎಷ್ಟು ದಿನ ಅಂತಾ ಪ್ಯಾಚಪ್ ಮಾಡೋದು ಅಂತಾ ಅಪ್ಪ, ಅಮ್ಮ, ಮಗ ಮತ್ತು ಮಕ್ಕಳ ಜೊತೆ ಮದ್ವೆಗೆ ಬಂದಿದ್ದಾರೆ. ಅದೇನೇ ಇರಲಿ, ಇವರಿಬ್ಬರ ದಾಂಪತ್ಯ ಕಲಹ ಅದೆಲ್ಲಿ ಬಂದು ನಿಲ್ಲುತ್ತೋ ಕಾದು ನೋಡಬೇಕಷ್ಟೇ.

Shwetha M

Leave a Reply

Your email address will not be published. Required fields are marked *