ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ವದಂತಿಗೆ ಸಂಪೂರ್ಣ ಬ್ರೇಕ್! – ಮನೆಯಲ್ಲಿ ರಂಗಿನ ಹಬ್ಬ ಆಚರಿಸಿದ ಬಚ್ಚನ್‌ ಕುಟುಂಬ

ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ವದಂತಿಗೆ ಸಂಪೂರ್ಣ ಬ್ರೇಕ್! – ಮನೆಯಲ್ಲಿ ರಂಗಿನ ಹಬ್ಬ ಆಚರಿಸಿದ ಬಚ್ಚನ್‌ ಕುಟುಂಬ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನ ವದಂತಿ ಕಳೆದ ವರ್ಷವೇ ಹುಟ್ಟಿಕೊಂಡಿತ್ತು. ಆದರೆ, ಇದರಲ್ಲಿ ನಿಜವಿಲ್ಲ ಎನ್ನುವ ವಿಚಾರ ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಆದರೂ ಈ ಬಗ್ಗೆ ಕೆಲವರಿಗೆ ಇನ್ನೂ ಅನುಮಾನಗಳು ಇವೆ. ಅಂಥವರಿಗಾಗಿಯೇ ಇದೀಗ ಬಚ್ಚನ್‌ ಕುಟುಂಬದ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. ಐಶ್ವರ್ಯಾ ರೈ ಬಚ್ಚನ್  ಹಾಗೂ ಅಭಿಷೇಕ್ ಬಚ್ಚನ್ ಮನೆಯಲ್ಲಿ ಹೋಳಿ ಹುಣ್ಣಿಮೆ ಆಚರಿಸಲಾಗಿದೆ. ಇದರ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ಓದಿ: ಬಿಜೆಪಿ-ಕೆಆರ್‌ಪಿಪಿ ವಿಲೀನ – ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ!

ದೇಶದಾದ್ಯಂತ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಇದೀಗ ಐಶ್ವರ್ಯಾ ರೈ ಬಚ್ಚನ್ ಕುಟುಂಬದಲ್ಲಿ ಹೋಳಿ ಆಚರಣೆ ನಡೆದಿದೆ. ಐಶ್ವರ್ಯಾ ರೈ ಬಚ್ಚನ್  ಹಾಗೂ ಅಭಿಷೇಕ್ ಬಚ್ಚನ್ ಮನೆಯಲ್ಲೂ ಹೋಳಿ ಆಚರಣೆ ನಡೆದಿದೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್‌ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅನೇಕರು ‘ಅಮಿತಾಭ್-ಐಶ್ವರ್ಯಾ ಹೀಗೆಯೇ ಖುಷಿಯಿಂದ ಇರಲಿ’ ಅಂತಾ ಹಾರೈಸಿದ್ದಾರೆ.

ಹೋಳಿ ಸಂದರ್ಭದಲ್ಲಿ ಅಗ್ನಿ ಉರಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಈ ಆಚರಣೆ ಇದೆ. ಇದಕ್ಕೆ ‘ಹೋಳಿಕಾ ದಹನ್’ ಎಂದು ಉತ್ತರ ಭಾರತದವರು ಕರೆಯುತ್ತಾರೆ. ಇದನ್ನು ಐಶ್ವರ್ಯಾ ರೈ ಮನೆಯಲ್ಲಿ ಆಚರಿಸಲಾಗಿದೆ. ಬಚ್ಚನ್ ಕುಟುಂಬದ ಎಲ್ಲರೂ ಇದಕ್ಕೆ ಆಗಮಿಸಿದ್ದರು. ಐಶ್ವರ್ಯಾ ರೈ ಎಂದಿನಂತೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

‘ನಿಮ್ಮ ಕುಟುಂಬವನ್ನು ಒಟ್ಟಿಗೆ ನೋಡುವುದೇ ಖುಷಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ನೋಡಿ ಐಶ್ವರ್ಯಾ-ಅಭಿಷೇಕ್ ಚೆನ್ನಾಗಿಯೇ ಇದ್ದಾರೆ. ಸುಳ್ಳು ಸುದ್ದಿ ಹೇಳಿದವರ ಬಾಯಿ ಮುಚ್ಚಿದೆ’ ಎಂದು ಕೆಲವರು ಹೇಳಿದ್ದಾರೆ. ಈ ಫೋಟೋದಲ್ಲಿ ಆರಾಧ್ಯಾ ಕೂಡ ಕಾಣಿಸಿಕೊಂಡಿದ್ದಾಳೆ.

Shwetha M