ಬಚ್ಚನ್‌ ಫ್ಯಾಮಿಲಿ ಡಿವೋರ್ಸ್‌ ಆಟ? – ಸ್ಟಾರ್‌ ಕುಟುಂಬದಿಂದ ಚೀಪ್‌  ಗಿಮಿಕ್?‌
ಪ್ರಚಾರಕ್ಕಾಗಿಯೇ ಐಶ್ -ಅಭಿ ಡ್ರಾಮಾ?

ಬಚ್ಚನ್‌ ಫ್ಯಾಮಿಲಿ ಡಿವೋರ್ಸ್‌ ಆಟ? – ಸ್ಟಾರ್‌ ಕುಟುಂಬದಿಂದ ಚೀಪ್‌  ಗಿಮಿಕ್?‌ಪ್ರಚಾರಕ್ಕಾಗಿಯೇ ಐಶ್ -ಅಭಿ ಡ್ರಾಮಾ?

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಅಭೀಷೇಕ್ ಡಿವೋರ್ಸ್ ವಿಚಾರ ಬಿಟೌನ್‌ನಲ್ಲಿ ಭಾರಿ ಸೌಂಡ್ ಮಾಡ್ತಾ ಇರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಇವರಿಬ್ರು ಶೀಘ್ರದಲ್ಲೇ ಡಿವೋರ್ಸ್ ಪಡ್ಕೊಳ್ತಾರೆ ಅನ್ನೋ ಚರ್ಚೆ ಜೋರಾಗಿ ನಡೀತಾ ಇದೆ.. ಇತ್ತೀಚೆಗಂತೂ ಡಿವೋರ್ಸ್ ವದಂತಿಗೆ ಪುಷ್ಟಿ ನೀಡುವಂತಹ ಘಟನೆಗಳು ಸಾಕಷ್ಟು ನಡಿತಿದೆ. ಐಶ್ ಅಭಿಷೇಕ್ ಬೇರೆ ಆಗ್ಬೇಡಿ ಅಂತಾ ಫ್ಯಾನ್ಸ್ ಹೇಳ್ತಾನೆ ಬಂದಿದ್ರು.. ಆದ್ರೀಗ ಫ್ಯಾನ್ಸ್ ಬಚ್ಚನ್ ಫ್ಯಾಮಿಲಿ ವಿರದ್ಧವೇ ತಿರುಗಿಬಿದ್ದಾರೆ.. ಡಿವೋರ್ಸ್‌ ವಿಚಾರವನ್ನ ಇಟ್ಟುಕೊಂಡೇ ಬಚ್ಚನ್‌ ಫ್ಯಾಮಿಲಿ ಆಟ ಆಡ್ತಾ ಇದೆ. ಇಷ್ಟು ದೊಡ್ಡ ಸ್ಟಾರ್​ ಆಗಿ ಇಂಥ ಚೀಪ್​ ಗಿಮಿಕ್ಕಾ ಬೇಕಾ ಅನ್ನೋ ಪ್ರಶ್ನೆ ಎದ್ದಿದೆ. ಅಷ್ಟಕ್ಕೂ ಅಮಿತಾಭ್‌ ಕುಟುಂಬದವರು ಮಾಡ್ತಿರೋದು ಏನು? ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: CSKಯಲ್ಲೂ ಗಾಯಕ್ವಾಡ್ ಗೆ ಶಾಕ್  – ಶಿಷ್ಯನಿಗಿಂತಾ ರಿಷಭ್ ಬೆಸ್ಟ್ ಚಾಯ್ಸ್ ಯಾಕೆ?

ಬಾಲಿವುಡ್ ನ ದೊಡ್ಮನೆಯಲ್ಲಿನ ಜಗಳ ಈಗ ಜಗಜ್ಜಾಹೀರು ಆಗಿದೆ. ಬಚ್ಚನ್‌ ಮನೆಯ ಒಂದೊಂದೇ ವಿಚಾರಗಳು ಈಗ ರಿವೀಲ್‌ ಆಗುತ್ತಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಮಗ ಅಭಿಷೇಕ್ ಹಾಗೂ ನಟಿ ಐಶ್ವರ್ಯ ರೈ ದಾಂಪತ್ಯ ಬಿರುಕು ಬಿಟ್ಟಿದೆ ಎಂದು ಹೇಳಲಾಗ್ತಿದೆ. ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬೇರೆ ಬೇರೆಯಾಗಲಿದ್ದಾರೆ ಎನ್ನಲಾಗಿದೆ.  ಅಷ್ಟಕ್ಕೂ ಈ ಡಿವೋರ್ಸ್‌ ಗಾಸಿಪ್‌ ಆರಂಭವಾಗಿದ್ದೇ ಉಂಗುರದಿಂದ. ಹೌದು. ಐಶ್ವರ್ಯ ರೈ ಮದುವೆ ಆದಾಗಿನಿಂದ ಒಂದು ಉಂಗುರ ಹಾಕ್ತಾ ಇದ್ರು.. ಮಂಗಳೂರು, ಉಡುಪಿ ಭಾಗದಲ್ಲಿ ಬಂಟ ಸಮುದಾಯದ ವಿವಾಹಿತೆಯರು ಒಡ್ಡಿಂಗಿಲ ಧರಿಸುತ್ತಾರೆ. ಆ ಒಡ್ಡಿಂಗಿಲವನ್ನ ತುಳುನಾಡ ಮಗಳು ಐಶ್‌ ಕೂಡ ಹಲವು ವರ್ಷಗಳಿಂದ ಹಾಕ್ತಾ ಇದ್ರು.. ಆದ್ರೆ ಕಳೆದ ಕೆಲ ತಿಂಗಳಿನಿಂದ ಈ ಉಂಗುರವನ್ನ ಐಶ್‌ ಧರಿಸ್ತಾ ಇಲ್ಲ.. ಇಲ್ಲಿಂದಲೇ ಐಶ್‌ ಹಾಗೂ ಅಭಿಷೇಕ್‌ ಡಿವೋರ್ಸ್‌ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದಿಷ್ಟೇ ಆದ್ರೆ ಫ್ಯಾನ್ಸ್‌ ಸುಮ್ಮನೆ ಇರ್ತಿದ್ರೋ ಏನೋ.. ಆದ್ರೆ.. ಐಶ್ವರ್ಯ ಮಾವ ಅಮಿತಾಭ್ ಬಚ್ಚನ್ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು.

ಅಲ್ಲಿಂದ ಶುರುವಾಗಿರುವ ಐಶ್-ಅಭಿಷೇಕ್ ಬಚ್ಚನ್ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಏಕೆಂದರೆ ಬಚ್ಚನ್ ಕುಟುಂಬ ಈ ಸುದ್ದಿಯನ್ನು ತಣ್ಣಗೆ ಮಾಡಲು ಬಿಡುತ್ತಲೇ ಇಲ್ಲ. ಇವರಿಬ್ಬರ ಡಿವೋರ್ಸ್ ವಿಷಯ ತಣ್ಣಗಾಗುತ್ತಿದೆ ಎಂದು ಅನಿಸಿದಾಗ, ಒಂದೋ ಅಭಿಷೇಕ್… ಇಲ್ಲವೇ ಐಶ್ವರ್ಯ…  ಅದೂ ಇಲ್ಲದಿದ್ರೆ ಅಮಿತಾಭ್ ಬಚ್ಚನ್‌ ಸೋಷಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಪೋಸ್ಟ್  ಹಾಕುತ್ತಾರೆ. ಆಗ ಮತ್ತೆ ಡಿವೋರ್ಸ್‌ ವಿಚಾರ ಮತ್ತೆ ಮುನ್ನಲೆಗೆ ಬರುತ್ತೆ. ಇದು ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಲು ಶುರುವಾದಾಗ ಈ ದಂಪತಿ ಒಂದಾಗಿರುವ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ.

ಹೌದು, ಕೆಲ ತಿಂಗಳಿನಿಂದ ಬಚ್ಚನ್ ಕುಟುಂಬದ ಆಟ ಮುಂದುವರೆದಿದೆ. ಇದರಲ್ಲಿ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಕೂಡ ಸಾಕಷ್ಟು ಪಾತ್ರ ವಹಿಸುತ್ತಿದ್ದಾರೆ. ಹಿಂದೊಮ್ಮೆ ಕೂಡ ಈ ಫ್ಯಾಮಿಲಿಗೆ ಪ್ರಚಾರದ ಹುಚ್ಚು ಜಾಸ್ತಿಯಾಗಿದೆ ಎಂದೇ ನೆಟ್ಟಿಗರು ಹೇಳುತ್ತಿದ್ದರು. ಮದುವೆಯೆಂಬ ಸಂಬಂಧವನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಟ್ರೋಲ್ ಕೂಡ ಆಗಿತ್ತು.

ಇದರ ನಡುವೆಯೇ ಕೆಲ ದಿನಗಳ ಹಿಂದೆ, ಗ್ರೇ ಡಿವೋರ್ಸ್ ಬಗ್ಗೆ ಹೀನಾ ಖಂಡೇವಾಲ ಎನ್ನುವವರು ಶೇರ್ ಮಾಡಿದ್ದ ಪೋಸ್ಟ್‌ ಗೆ ಲೈಕ್ ಮಾಡುವ ಮೂಲಕ ಅಭಿಷೇಕ್ ಬಚ್ಚನ್ ತಾವೂ ಡಿವೋರ್ಸ್ ಪಡೆದುಕೊಳ್ಳುತ್ತೇವೆ ಎನ್ನುವಂತೆ ಸೂಚಿಸಿದ್ದರು. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರನನ್ನಷ್ಟೇ ಹೊಗಳುವುದು, ಸೊಸೆಯನ್ನು ಕಡೆಗಣಿಸುವ ನಾಟಕವನ್ನೂ ಧಾರಾಳವಾಗಿ ಮಾಡುತ್ತಲೇ ಬಂದಿದ್ದಾರೆ. ಇದೀಗ ಡಿವೋರ್ಸ್ ಪೋಸ್ಟ್‌ ಗೆ ಲೈಕ್  ಮಾಡಿರುವ ವಿಷಯಕ್ಕೆ ಅಭಿಷೇಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಅದೇನೆಂದರೆ ಐಶ್ವರ್ಯಾ ಅವರ ಫ್ರೆಂಡ್ ಝೈರತ್ ಮಾರ್ಕರ್ ಅವರು ಈ ಪೋಸ್ಟ್ಗೆ  ಕೊಡುಗೆ ನೀಡಿದ್ದಾರೆ. ಆದ್ದರಿಂದ ಪತ್ನಿಯ ಗೆಳೆಯನಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಅವರು ಲೈಕ್ ಒತ್ತಿದ್ದೇನೆ. ಇದನ್ನು ಹೇಳಿರುವುದು ಐಶ್ವರ್ಯ..  ಆದ್ದರಿಂದ ಲೈಕ್ ಒತ್ತಿದ್ದೇನೆ ಎಂದು ಹೇಳುವ ಮೂಲಕ ತಮ್ಮ ನಡುವೆ ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದರಿಂದ ಅಭಿಮಾನಿಗಳು ತೀವ್ರ ಕೆಂಡಾಮಂಡಲವಾಗಿದ್ದಾರೆ.

ಇನ್ನು ಕಳೆದ ಹಲವು ತಿಂಗಳಿಂದ ಐಶ್ವರ್ಯಾ ಬಗ್ಗೆ ಅಮಿತಾಬ್ ಬಚ್ಚನ್ ಒಂದೇ ಒಂದು ಮಾತು ಆಡಿಲ್ಲ. ಆದ್ರೆ ಅಮಿತಾಭ್‌ ಬಚ್ಚನ್‌ ಮಗನನ್ನ ಮಾತ್ರ ಹೊಗಳಿ ಅಟ್ಟಕ್ಕೇರಿಸಿ ಬಿಡ್ತಾರೆ.. ಇತ್ತೀಚೆಗೆ ಕೂಡ ಬಚ್ಚನ್‌ ಅಭಿಷೇಕ್‌ನನ್ನು ಮಾತ್ರ ಹೊಗಳಿದ್ದಾರೆ. ಮೊಮ್ಮಗಳ ಬಗ್ಗೆ ಆಗ್ಲಿ ಸೊಸೆಯ ಬಗ್ಗೆ ಏನು ಮಾತನಾಡಿಲ್ಲ. ಹೀಗಾಗಿ ಸೊಸೆಯನ್ನು ಅಮಿತಾಬ್ ಕಡೆಗಣಿಸಿದ್ದಾರೆ ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಐಶ್‌ ಬಗ್ಗೆ ನೀವು ಯಾಕೆ ಮಾತನಾಡುತ್ತಿಲ್ಲ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಮತ್ತೊಂದು ಪೋಸ್ಟ್ ಹಾಕಿ ಡಿವೋರ್ಸ್  ಆಗುತ್ತಿದೆ ಅನ್ನೋ ಅರ್ಥದಲ್ಲಿ ಬರೆಯುತ್ತೀರಲ್ಲವೆ? ಐಶ್​- ಅಭಿಷೇಕ್‌  ಡಿವೋರ್ಸ್ ವಿಚಾರವನ್ನ ಇಟ್ಟುಕೊಂಡು ಆಟ ಆಡ್ತಿದ್ದೀರಾ?  ಇಷ್ಟು ದೊಡ್ಡ ಸ್ಟಾರ್​ ಆಗಿ ಇಂಥ ಚೀಪ್​ ಗಿಮಿಕ್‌ ಬೇಕಾ? ಪ್ರಚಾರಕ್ಕಾಗಿ ಇದೆಲ್ಲಾ ಮಾಡ್ತಿದ್ದೀರಾ ಎಂದು ಫ್ಯಾನ್ಸ್‌ ಅಮಿತಾಭ್​ ಫ್ಯಾಮಿಲಿ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ.

ಸದ್ಯ ಬಚ್ಚನ್‌ ಫ್ಯಾಮಿಲಿಯ ನಡೆಯಿಂದಾಗಿ ಫ್ಯಾನ್ಸ್‌ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಆದ್ರೆ ಇದು ಅವರ ಖಾಸಗಿ ವಿಚಾರ.. ಅವರಿಗೆ ಇಷ್ಟ ಆಗಿರೋ ವಿಚಾರವನ್ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವುದು. ಬಿಡುವುದು ಅವರಿಗೆ ಬಿಟ್ಟಿದ್ದು.. ಆದ್ರೆ ಫ್ಯಾನ್ಸ್‌ ಮಾತ್ರ ಎಲ್ಲವನ್ನ ಗಮನಿಸ್ತಾರೆ ಅನ್ನೋದು ಅಷ್ಟೇ ಸತ್ಯ. ಡಿವೋರ್ಸ್‌ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಾ ಇರೋದ್ರಿಂದ ಇನ್ನಾದ್ರೂ ಬಿಗ್‌ ಬಿ ಫ್ಯಾಮಿಲಿ ಈ ಬಗ್ಗೆ ಕ್ಲಾರಿಟಿ ಕೊಡುತ್ತಾ ಅಂತಾ ಕಾದು ನೋಡ್ಬೇಕಿದೆ.

Shwetha M