ಡಿವೋರ್ಸ್ ರೂಮರ್ಸ್ ನಡುವೆ ಬಿಂದಾಸ್‌ ಡ್ಯಾನ್ಸ್‌ ಮಾಡಿದ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್

ಡಿವೋರ್ಸ್ ರೂಮರ್ಸ್ ನಡುವೆ ಬಿಂದಾಸ್‌ ಡ್ಯಾನ್ಸ್‌ ಮಾಡಿದ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್

ಬಾಲಿವುಡ್‌ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌ ಪಡೆಯಲಿದ್ದಾರೆ ಎಂಬ ಸುದ್ದಿ ಜೋರಾಗೇ ಹರಿದಾಡ್ತಿದೆ. ಆದ್ರೆ ಈವರೆಗೂ ಈ ದಂಪತಿ ಈ ಬಗ್ಗೆ ಸ್ಪಷ್ಣನೆ ನೀಡಿರ್ಲಿಲ್ಲ.. ಇದೀಗ ಈ ಜೋಡಿ ಹ್ಯಾಪಿಯಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಗಾಳಿ ಸುದ್ದಿ ಹಬ್ಬಿಸುತ್ತಿರುವವರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ: ಅಯ್ಯರ್‌, ಪ್ರಭಸಿಮ್ರನ್ ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ – ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿದ ಲಕ್ನೋ

ಇತ್ತೀಚೆಗೆ ಪತ್ನಿ ಐಶ್ವರ್ಯಾ ಮತ್ತು ಪುತ್ರಿ ಆರಾಧ್ಯ ಜೊತೆ ಅಭಿಷೇಕ್ ಬಚ್ಚನ್ ಅವರು ಸಂಬಂಧಿಕರ ಮದುವೆಗೆ ಹಾಜರಿ ಹಾಕಿದ್ದರು. ಈ ವೇಳೆ, ಐಶ್ವರ್ಯಾ ಜೋಡಿ ಕಜರಾರೇ ಹಿಂದಿ ಹಾಡಿಗೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಕಜರಾರೆ ಹಾಡಿನ ಹುಕ್ ಸ್ಟೆಪ್ಸ್ ಹಾಕ್ತಾ ಎಂಜಾಯ್ ಮಾಡಿದ್ದಾರೆ. ಇವರೊಂದಿಗೆ ಪುತ್ರಿ ಆರಾಧ್ಯ ಕೂಡ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ಸುದ್ದಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಫುಲ್ ಖುಷಿಪಟ್ಟಿದ್ದಾರೆ.

ಅಂದಹಾಗೆ, ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರು 2007ರಲ್ಲಿ ಮದುವೆಯಾದರು. ಹೊಸ ಪಾತ್ರಗಳ ಮೂಲಕ ಅಭಿಷೇಕ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಐಶ್ವರ್ಯಾ ರೈ ಅವರು ಮದುವೆ ಬಳಿಕ ಕಮ್ಮಿ ಸಿನಿಮಾ ಮಾಡಿದ್ರೂ ಕೂಡ ವಿಭಿನ್ನ ಎಂದೆನಿಸುವ ಪಾತ್ರಗಳ ಮೂಲಕ ಬರುತ್ತಿದ್ದಾರೆ. ಅದಕ್ಕೆ ‘ಪೊನ್ನಿಯನ್ ಸೆಲ್ವನ್ 1’ ಮತ್ತು ‘ಪೊನ್ನಿಯನ್‌ ಸೆಲ್ವನ್ 2’ ಸಿನಿಮಾಗಳೇ ಸಾಕ್ಷಿ.‌

Shwetha M

Leave a Reply

Your email address will not be published. Required fields are marked *