ಡಿವೋರ್ಸ್ ಕೊಟ್ರೆ ಅಭಿಗೆ ಕಷ್ಟ – ಐಶ್‌ ಗೆ ಜೀವನಾಂಶ ಇಷ್ಟೊಂದಾ?
ಬಚ್ಚನ್ ಫ್ಯಾಮಿಲಿಗೆ ಡಿವೋರ್ಸ್ ಹೊರೆ..!

ಡಿವೋರ್ಸ್ ಕೊಟ್ರೆ ಅಭಿಗೆ ಕಷ್ಟ – ಐಶ್‌ ಗೆ ಜೀವನಾಂಶ ಇಷ್ಟೊಂದಾ?ಬಚ್ಚನ್ ಫ್ಯಾಮಿಲಿಗೆ ಡಿವೋರ್ಸ್ ಹೊರೆ..!

ಬಾಲಿವುಡ್‌ ನಟ ಅಭಿಷೇಕ್‌ ಬಚ್ಚನ್‌ ಹಾಗೂ ಐಶ್ವರ್ಯ ರೈ ಮಧ್ಯೆ ಸಂಬಂಧ ಹಳಸಿದೆ.. ಆದಷ್ಟು ಬೇಗ ಈ ಜೋಡಿ ಡಿವೋರ್ಸ್‌ ಪಡಿತಾರೆ.. ಅನ್ನೋ ಸುದ್ದಿ ಸುಂಟರಗಾಳಿಯಂತೆ ಹರಿದಾಡ್ತಾ ಇದೆ.. ಇಷ್ಟೆಲ್ಲಾ ಆದ್ರೂ ಈ ಜೋಡಿ ಡಿವೋರ್ಸ್‌ ಬಗ್ಗೆ ಸ್ಪಷ್ಟನೆ ನೀಡ್ತಾ ಇಲ್ಲ.. ಇವರಿಬ್ಬರ ಈ ಬಗ್ಗೆ ಸ್ಪಷ್ಟನೆ ಕೊಡ್ಲಿ ಅಂತಾ ಫ್ಯಾನ್ಸ್‌ ಕಾಯ್ತಾ ಇದ್ದಾರೆ.. ಅಷ್ಟೇ ಅಲ್ಲ ಐಶ್‌ ಹಾಗೂ ಅಭಿ ಡಿವೋರ್ಸ್‌ ಪಡೆದುಕೊಂಡ್ರೆ ಅಭಿಷೇಕ್‌ ಐಶ್ವರ್ಯಗೆ ಜೀವನಾಂಶ ಎಷ್ಟು ಕೊಡ್ಬೇಕು ಅನ್ನೋ ಚರ್ಚೆ ನಡಿತಾ ಇದೆ. ಅಷ್ಟಕ್ಕೂ ಈ ಚರ್ಚೆ ಹುಟ್ಟಿಕೊಂಡಿದ್ದೇಕೆ? ಒಂದ್ವೇಳೆ ಡಿವೋರ್ಸ್‌ ಪಡ್ಕೊಂಡ್ರೆ ಅಭಿಷೇಕ್‌ ಐಶ್‌ ಗೆ ಎಷ್ಟು ಪರಿಹಾರ ನೀಡಬೇಕಾಗಬಹುದು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್‌ ಸ್ಟೋರಿ

ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಡಿವೋರ್ಸ್‌ ಸುದ್ದಿ ಈಗ ಭಾರಿ ಸದ್ದು ಮಾಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಅಭಿಷೇಕ್ ಹಾಗೂ ಐಶ್ವರ್ಯ ಮದುವೆಯ ಉಂಗುರ ಯಾವಾಗಿಂದ ಧರಿಸಿಲ್ವೋ ಅವತ್ತಿನಿಂದ ಈ ಸುದ್ದಿ ಸದ್ದು ಮಾಡ್ತಾ ಇದೆ.. ಅದಾದ ಬಳಿಕ ಈ ದಂಪತಿ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.. ಐಶ್‌ ಮಗಳೊಂದಿಗೆ ದೇಶ ವಿದೇಶ ಸುತ್ತಾಡುತ್ತಿದ್ರೆ, ಅಭಿ ಒಂಟಿಯಾಗೇ ತಿರುಗಾಡ್ತಾರೆ.. ಈ ಬಗ್ಗೆ​ ಬಚ್ಚನ್​ ಕುಟುಂಬ ಆಗ್ಲೀ ಈ ದಂಪತಿ ಆಗ್ಲೀ.. ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ. ಇದೀಗ ಅಭಿಷೇಕ್‌ ಜೊತೆ ನಟಿಯೊಬ್ಬರ ಹೆಸರು ಕೂಡ ತಳುಕುಹಾಕಿಕೊಂಡಿದೆ.. ನಿಮೃತ್‌ ಕೌರ್‌ ಜೊತೆ ಅಭಿ ಸಂಬಂಧ ಹೊಂದಿದ್ದಾರೆ.. ಈ ಕಾರಣಕ್ಕೆ ಈ ದಂಪತಿ ಬೇರೆ ಬೇರೆ ಆಗ್ತಿದ್ದಾರೆ ಎಂದು ಹೇಳಲಾಗ್ತಿದೆ.. ಇದೀಗ ಒಂದ್ವೇಳೆ ಈ ದಂಪತಿ ಡಿವೋರ್ಸ್‌ ಪಡೆದುಕೊಂಡ್ರೆ ಅಭಿ ಐಶ್‌ ಎಷ್ಟು ಜೀವನಾಂಶ ನೀಡ್ಬೇಕು ಅನ್ನೋ ಚರ್ಚೆ ಹುಟ್ಟಿಕೊಂಡಿದೆ..

ಅಭಿಷೇಕ್‌ ಹಾಗೂ ಐಶ್ವರ್ಯ ಒಂದ್ವೇಳೆ ಡಿವೋರ್ಸ್‌ ಪಡ್ಕೊಂಡ್ರೆ ರೈ ಗೆ ಅಭಿ ಎಷ್ಟು ಪರಿಹಾರ ಕೊಡಬೇಕಾಗುತ್ತದೆ. ಹಾಗೆ ನೋಡುವುದಾದರೆ ಅಭಿಷೇಕ್​ ಗಿಂತ ಐಶ್ವರ್ಯ ರೈ ಆಸ್ತಿಯೇ ಹೆಚ್ಚಿದೆ. ಐಶ್ವರ್ಯ ಅವರು ಹೆಸರಿಗೆ ತಕ್ಕಂತೆ ಐಶ್ವರ್ಯವಂತೆಯೇ. ಇದೇ ಕಾರಣಕ್ಕೆ ಒಂದು ವೇಳೆ ಡಿವೋರ್ಸ್​ ಆದರೂ ಅವರು ತಮಗೆ ಪರಿಹಾರ ಬೇಡ ಎಂದು ಹೇಳೋ  ಸಾಧ್ಯತೆ ಇದೆ. ಸ್ವಾಭಿಮಾನಿ ಮಹಿಳೆಯರು ವಿಚ್ಛೇದನ ಪಡೆದಾಗ ಪತಿಯಿಂದ ಪರಿಹಾರದ ಮೊತ್ತ ಪಡೆದುಕೊಳ್ಳಲು ಒಪ್ಪುವುದಿಲ್ಲ. ಆದರೆ ಎಲ್ಲರೂ ಹಾಗಲ್ಲವಲ್ಲ?  ಈ ಹಿಂದೆ ಸೆಲೆಬ್ರಿಟಿಗಳ ನಡುವೆ ವಿಚ್ಛೇದನವಾದಾಗಲೂ ಪರಿಹಾರದ ಮೊತ್ತ ಪಡೆದುಕೊಂಡಿರುವುದನ್ನು ನೋಡಬಹುದು. ಹಾಗೊಂದು ವೇಳೆ ಪರಿಹಾರದ ಮೊತ್ತವನ್ನು ನೀಡಲೇಬೇಕಾದ ಸಾಧ್ಯತೆ ಎದುರಾದರೆ ಅಭಿಷೇಕ್​ ಐಶ್ವರ್ಯ ರೈ ಅವರಿಗೆ ಎಷ್ಟು ಹಣ ನೀಡಬೇಕು ಎಂಬ ಬಗ್ಗೆ ಯಾರೋ ಪುಣ್ಯಾತ್ಮರು ಲೆಕ್ಕಾಚಾರ ಕೂಡ ಹಾಕಿದ್ದಾರೆ. ಐಶ್ವರ್ಯಾ ರೈ ಅವರ ಆಸ್ತಿ ಕುರಿತು ಹೇಳುವುದಾದರೆ, ಅವರ ಆಸ್ತಿ 750 ಕೋಟಿ ರೂಪಾಯಿಗೂ ಹೆಚ್ಚಿದೆ ಅಂತಾ ಹೇಳಲಾಗ್ತಿದೆ. ಐಶ್ವರ್ಯ ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಇವರು ಸಿನಿಮಾದಲ್ಲಿ ನಟಿಸಲು ಕನಿಷ್ಠ 12 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಕೇವಲ ಚಿತ್ರ ಮಾತ್ರವಲ್ಲದೇ ಜಾಹೀರಾತು, ಮಾಡೆಲಿಂಗ್​ ಮುಂತಾದ ಮೂಲಗಳಿಂದಲೂ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.  ಸಾಲದು ಎಂಬಂತೆ, ಐಶ್ವರ್ಯಾ ಅವರು  ರಿಯಲ್ ಎಸ್ಟೇಟ್​ ಮೇಲೆಯೂ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಇವರ ಹತ್ತಿರ ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಗಳು ಇವೆ. 5 ಬಿಎಚ್​ಕೆ ಅಪಾರ್ಟ್​ಮೆಂಟ್​ನ ಇದೆ. ದುಬೈನಲ್ಲಿಯೂ  ಮನೆ ಇದೆ.

ಇನ್ನು ಅಭಿಷೇಕ್​ ಅವರ ಆಸ್ತಿಯ ಕುರಿತು ಹೇಳುವುದಾದರೆ, ಇವರ ಒಟ್ಟೂ ಆಸ್ತಿ ಮೌಲ್ಯ  280 ಕೋಟಿ ರೂಪಾಯಿಗೂ ಅಧಿಕ ಅಂತಾ ಹೇಳಲಾಗ್ತಿದೆ. ಇವರು  ತಿಂಗಳಿಗೆ 1.8 ಕೋಟಿ ರೂಪಾಯಿ ಗಳಿಸುತ್ತಾರೆ. ವಿಚ್ಛೇದನದ ನಿಯಮದ ಪ್ರಕಾರ, ಡಿವೋರ್ಸ್​ ಆದರೆ ಪತಿ  ಪತ್ನಿಗೆ  ಶೇ.25 ಜೀವನಾಂಶ ನೀಡಬೇಕು. ಒಂದ್ವೇಳೆ ಡಿವೋರ್ಸ್‌ ಆದ್ರೆ ಅಭಿಷೇಕ್​ ಅವರು ಪ್ರತಿ ತಿಂಗಳು  ಐಶ್ವರ್ಯಾ ರೈಗೆ 45 ಲಕ್ಷ ರೂಪಾಯಿ ಜೀವನಾಂಶ ನೀಡಬೇಕಾಗುತ್ತದೆ.  45 ಲಕ್ಷ ರೂಪಾಯಿ ಪ್ರತಿ ತಿಂಗಳು ಎಂದರೆ ಸಾಮಾನ್ಯ ಜನರು ಬೆವರುವುದು ಖಂಡಿತ. ಆದರೆ ಐಶ್ವರ್ಯ ರೈ ಅವರಂಥ ನಟಿಯರಿಗೆ ಇದೇನು ದೊಡ್ಡ ಮೊತ್ತವೇ ಅಲ್ಲ. ಆದರೆ ಅಭಿಷೇಕ್​ ಅವರಿಗೆ ಈ ಮೊತ್ತ ತುಸು ಹೆಚ್ಚೆದೇ ಆಗ್ಬೋದು.. ಇದೀಗ ಇವರಿಬ್ಬರ ಡಿವೋರ್ಸ್​ ಸುದ್ದಿ ದಿನೇ ದಿನೇ ಬಿ-ಟೌನ್​ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಈ ಜೋಡಿ ದೂರಾವಾಗೋದು ಬೇಡ.. ಅನ್ಯೋನ್ಯತೆಯಿಂದ ಬಾಳಲಿ ಅನ್ನೋದೇ ಅದೆಷ್ಟೋ ಅಭಿಮಾನಿಗಳ ಆಶಯ..

Shwetha M