ಐಶ್ವರ್ಯ, ಅಭಿಷೇಕ್ ದೂರ ದೂರ!! ಐಶ್ ನಿರ್ಧಾರ ಅಭಿಗೆ ಓಕೆನಾ? – ಸ್ಟಾರ್ ಜೋಡಿ ಇರೋದು ಬೇರೆನೇ!
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ. ಸದ್ಯ ಬಿ ಟೌನ್‌ನಲ್ಲಿ ಇವರಿಬ್ಬರದ್ದೇ ಸುದ್ದಿ. ಐಶ್ ಹಾಗೂ ಅಭಿಷೇಕ್ ಮಧ್ಯೆ ಮನಸ್ತಾಪ ಇದೆ. ದಾಂಪತ್ಯದಲ್ಲಿ ಬಿರುಕು ಬಿದ್ದಿದೆ. ಈ ಜೋಡಿ ಆದಷ್ಟು ಬೇಗ ಡಿವೋರ್ಸ್ ಪಡೆದುಕೊಳ್ಳಲಿದೆ ಅಂತಾ ಗಾಸಿಪ್ ಹರಿದಾಡ್ತಿತ್ತು. ಈ ಬಗ್ಗೆ ಐಶ್ – ಅಭಿ ಯಾವುದೇ ಸ್ಪಷ್ಟನೆ ನೀಡಿರ್ಲಿಲ್ಲ. ಆದ್ರೆ ಇತ್ತೀಚೆಗೆ ಗಂಡ ಹೆಂಡ್ತಿ ಮಗಳು ಒಟ್ಟಿಗೆ ಕಾಣಿಸಿಕೊಂಡ್ರು. ಐಶ್ ಹಾಗೂ ಅಭಿ ಖುಷಿಯಿಂದ ಮಗಳ ಸ್ಕೂಲ್ ಪ್ರೊಗ್ರಾಂ ನಲ್ಲಿ ಕಾಣಿಸಿಕೊಂಡಿದ್ರು. ಆದ್ರೆ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಕಾಡ್ತಿದೆ. ಐಶ್ ಅಭಿ ಮಧ್ಯೆ ಯಾವುದೇ ಮನಸ್ತಾಪ ಇಲ್ದಿದ್ರೂ ಯಾಕೆ ಒಂದೇ ಮನೆಯಲ್ಲಿ ಇಲ್ಲ. ಐಶ್ ಯಾಕೆ ಬೇರೆ ಮನೆಯಲ್ಲಿ ಇದ್ದಾರೆ ಅನ್ನೋದು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಇದನ್ನೂ ಓದಿ: ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ! – ಟೀಮ್ ಇಂಡಿಯಾದಲ್ಲಿ ಯುವ ಆಟಗಾರರಿಗೆ ಇನ್ನಾದ್ರೂ ಚಾನ್ಸ್ ಸಿಗುತ್ತಾ?
ಐಶ್ ಅಭಿ ಬಾಳಲ್ಲಿ ಎಲ್ಲವೂ ಸರಿಯಿಲ್ಲ.. ದಾಂಪತ್ಯದಲ್ಲಿ ಬಿರುಗಾಳಿ ಎಬ್ಬಿದೆ.. ಐಶ್ವರ್ಯ ಗಂಡನ ಮನೆಯಿಂದ ಹೊರ ಬಂದಿದ್ದಾರೆ.. ಎಲ್ಲಾ ಮುಗಿದು ಹೋಯ್ತು ಅಂತಾ ಗಾಸಿಪ್ ಹರಿದಾಡಿದ್ದೇ ಹರಿದಾಡಿದ್ದು.. ಇದಕ್ಕೆ ಪುಷ್ಠಿ ನೀಡುವಂತೆ ಕೆಲ ಘಟನೆಗಳು ಕೂಡ ನಡೆದಿತ್ತು.. ಅಭಿಷೇಕ್ ಹಾಗೂ ಐಶ್ವರ್ಯ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರ್ಲಿಲ್ಲ.. ಅದಾದ್ಮೇಲೆ ಅಭಿಷೇಕ್ ಜೊತೆ ನಟಿಯೊಬ್ಬರ ಹೆಸ್ರು ಕೂಡ ತಳುಕುಹಾಕಿಕೊಂಡಿತ್ತು.. ಇಷೆಲ್ಲಾ ಆದ್ರೂ ಈ ದಂಪತಿ ಒಂಚೂರು ತಲೆಕೆಡಿಸಿಕೊಂಡಿರ್ಲಿಲ್ಲ.. ತಾವಾಯ್ತು.. ತಮ್ಮ ಕೆಲ್ಸ ಆಯ್ತು ಅಂತಾ ಅವರ ಪಾಡಿಗೆ ಅವರಿದ್ರು.. ಆದ್ರೆ ಅಭಿಮಾನಿಗಳಿಗೆ ಮಾತ್ರ ತಮ್ಮ ನೆಚ್ಚಿನ ಜೋಡಿ ದೂರ ಆಗ್ತಿದ್ದಾರೆ ಅನ್ನೋ ಕೊರಗು ಕಾಡ್ತಿತ್ತು.. ಆದ್ರೆ ಇತ್ತೀಚೆಗೆ ಐಶ್ ಹಾಗೂ ಅಭಿಷೇಕ್ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ರು.. ಮಗಳ ಜೊತೆ ಐಶ್ ಹಾಗೂ ಅಭಿ ಖುಷಿಯಿಂದ ಕಾಣಿಸಿಕೊಂಡಿದ್ರು.. ಈ ವೇಳೆ ಅಭಿ ಐಶ್ ನ ಎಷ್ಟು ಕೇರ್ ಮಾಡ್ತಾರೆ ಅನ್ನೋದು ಕೂಡ ಅಭಿಮಾನಿಗಳ ಮುಂದೆ ಬಯಲಾಯ್ತು… ಇದನ್ನ ನೋಡಿ ಫ್ಯಾನ್ಸ್ ನಿಟ್ಟುಸಿರು ಬಿಟ್ರು.. ಈ ದಂಪತಿ ಮಧ್ಯೆ ಏನೂ ಭಿನ್ನಾಭಿಪ್ರಾಯ ಇಲ್ಲ ಅನ್ನೋದು ರಿವೀಲ್ ಆಯ್ತು.. ಆದ್ರೆ ಅಭಿಷೇಕ್ ಹಾಗೂ ಐಶ್ವರ್ಯ ಯಾಕೆ ಒಂದೇ ಮನೆಯಲ್ಲಿ ಇಲ್ಲ.. ಬೇರೆ ಬೇರೆ ಮನೆಯಲ್ಲಿ ಇದ್ದಾರೆ ಅನ್ನೋದು ಅಭಿಮಾನಿಗಳಿಗೆ ಯಕ್ಷ ಪ್ರಶ್ನೆಯಾಗಿತ್ತು. ಇದೀಗ ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅವರನ್ನ ಬಿಟ್ಟು ಪ್ರತ್ಯೇಕವಾಗಿ ಇರುವುದು ಬೇರೆಯ ಕಾರಣಕ್ಕೆ ಎಂದು ಗೊತ್ತಾಗಿದೆ. ಐಶ್ವರ್ಯ ರೈ ತನ್ನ ತಾಯಿಗೋಸ್ಕರ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋ ವಿಚಾರ ರಿವೀಲ್ ಆಗಿದೆ.
ಹೌದು.. ಐಶ್ವರ್ಯ ರೈ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸ್ರು ಮಾಡ್ಲಿಕ್ಕೆ ಕಾರಣ ಅವರ ತಂದೆ ತಾಯಿ.. ಅವರ ಸಪೋರ್ಟ್ ನಿಂದಾಗೇ ಐಶ್ ಈ ಮಟ್ಟಿಗೆ ಬೆಳೆದಿದ್ದಾರೆ.. ನಿವೃತ್ತ ಸೇನಾ ಜೀವಶಾಸ್ತ್ರಜ್ಞ ಕೃಷ್ಣರಾಜ್ ರೈ ಮತ್ತು ವೃಂದಾ ರೈ ಮಗಳು ಐಶ್ವರ್ಯ ರೈ.. ಐಶ್ ಮಾಡೆಲಿಂಗ್ ಕ್ಷೇತ್ರಕ್ಕೆ ಬರಬೇಕು ಎಂದುಕೊಂಡಾಗ, ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾ ಜಗತ್ತಿಗೆ ಜಿಗಿಯಬೇಕು ಎಂದುಕೊಂಡಾಗ ಆಕೆಗೆ ಸಪೋರ್ಟಿವ್ ಆಗಿದ್ದಿದ್ದು ಅಪ್ಪ-ಅಮ್ಮ.. ಹೀಗಾಗಿ ಐಶ್ವರ್ಯ ರೈಗೆ ಅಪ್ಪ-ಅಮ್ಮ ಎಂದರೆ ಅಚ್ಚುಮೆಚ್ಚು. ಆದ್ರೆ 2017ರಲ್ಲಿ ಕೃಷ್ಣರಾಜ್ ರೈ ತೀರಿಕೊಂಡ್ರು.. ತಂದೆಯನ್ನ ಕಳೆದುಕೊಂಡ ನಂತರ ಐಶ್ ತುಂಬಾ ನೊಂದುಕೊಂಡಿದ್ದರು. ಈ ಮಧ್ಯೆ ಐಶ್ವರ್ಯ ರೈ ಅವರ ತಾಯಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ.. ಇದೀಗ ಐಶ್ ತಮ್ಮ ತಾಯಿಯ ಆರೈಕೆಯಲ್ಲಿ ತೊಗಿಸಿಕೊಂಡಿದ್ದಾರೆ.
ಹೌದು, ಐಶ್ವರ್ಯ ರೈ ತಾಯಿಗೆ ಆರೋಗ್ಯ ಸಮಸ್ಯೆ ಇದೆ ಅನ್ನೋದು ಇತ್ತೀಚೆಗೆ ಬಹಿರಂಗವಾಗಿದೆ. ವೃಂದಾ ರೈಗೆ ಕ್ಯಾನ್ಸರ್ ಇದೆ ಅನ್ನೋದನ್ನ ಐಶ್ವರ್ಯ ರೈ ಅತ್ತಿಗೆ ಶ್ರೀಮಾ ರೈ ಬಹಿರಂಗಪಡಿಸಿದ್ರು.. ಐಶ್ವರ್ಯ ರೈ ಸಹೋದರ ಕೂಡ ಬ್ಯುಸಿ ಇರ್ತಾರೆ.. ಕೊನೆಗಾಲದಲ್ಲಿ ಅಮ್ಮ ಒಂಟಿಯಾಗಿರಬಾರದು ಎನ್ನುವ ಕಾರಣಕ್ಕೆ ಐಶ್ವರ್ಯ ರೈ ಅಮ್ಮನ ಮನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಹಾಗಾಗಿಯೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ಹೇಳಲಾಗ್ತಿದೆ. ಇದ್ರಿಂದಾಗೇ ಡಿವೋರ್ಸ್ ವದಂತಿ ಹರಿದಾಡಲು ಶುರುವಾಯ್ತು ಅಂತಾ ಹೇಳಲಾಗ್ತಿದೆ.
ಸೆಲೆಬ್ರಿಟಿಗಳು ಅಂದ ಮಾತ್ರಕ್ಕೆ ಅವರಿಗೆ ಸಮಸ್ಯೆಗಳು ಇರೋದಿಲ್ಲ ಅಂತ ಅಲ್ಲ.. ಅವರಿಗೂ ಸಾಕಷ್ಟು ಸಮಸ್ಯೆಗಳು ಇರುತ್ತೆ.. ಕೆಲಸದ ಜೊತೆ ಸಂಬಂಧಗಳನ್ನ ಉಳಿಸಿಕೊಳ್ಳೋದು ಕೂಡ ಬಹಳ ಮುಖ್ಯ ಆಗಿರುತ್ತೆ.. ಅವೆಲ್ಲವನ್ನ ಸಾರ್ವಜನಿಕವಾಗಿ ಹೇಳಿಕೊಳ್ಳೋಕೆ ಆಗಲ್ಲ. ತನ್ನನ್ನ ಈ ಮಟ್ಟಕ್ಕೆ ಬೆಳಿಸಿದವರ ನೋವು, ನಲಿವಿನಲ್ಲೂ ಭಾಗಿಯಾಗೋದು ಮುಖ್ಯ ಆಗಿರುತ್ತೆ.. ಐಶ್ ಕೂಡ ಸಂಬಂಧಗಳಿಗೆ ಬಹಳ ಪ್ರಾಮುಖ್ಯತೆ ಕೊಡ್ತಾರೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್.