ಬಿಗ್‌ ಬಾಸ್‌ ಮನೆಯಿಂದ ಐಶ್ವರ್ಯ ಔಟ್‌ – ಸೋಲಿಗೆ ಇದೇ ಕಾರಣವಾಯ್ತಾ?

ಬಿಗ್‌ ಬಾಸ್‌ ಮನೆಯಿಂದ ಐಶ್ವರ್ಯ ಔಟ್‌ – ಸೋಲಿಗೆ ಇದೇ ಕಾರಣವಾಯ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಫಿನಾಲೆ ಹಂತಕ್ಕೆ ಬಂದಿದೆ. ಈ ವಾರ ದೊಡ್ಮನೆಯಿಂದ ಐಶ್ವರ್ಯ ಸಿಂಧೋಗಿ ಔಟ್‌ ಆಗಿದ್ದಾರೆ. ಐಶ್ವರ್ಯ ಆರಂಭದಿಂದಲೂ ಪ್ರಬಲ ಸ್ಪರ್ಧಿ ಅನ್ನೋ ಅಭಿಪ್ರಾಯ ವೀಕ್ಷಕರಲ್ಲಿತ್ತು. ಹೀಗಾಗಿ ಐಶ್ವರ್ಯ ಹೆಚ್ಚು ಕಾಲ ದೊಡ್ಮನೆಯಲ್ಲಿ ಇರ್ತಾರೆ ಅಂತಾ ಹೇಳಲಾಗ್ತಿತ್ತು. ಇದೀಗ ಐಶ್ವರ್ಯ ಬಿಗ್‌ ಬಾಸ್‌ ಮನೆಯಿಂದ ಆಚೆ ಬರಲು ಈ ಐದು ಕಾರಣಗಳು ಅಂತಾ ಹೇಳಲಾಗ್ತಿದೆ.

ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಕಾಂಗರೂಗಳ ತಂತ್ರಕ್ಕೆ ಸೋತು ಶರಣಾದ ಟೀಮ್‌ ಇಂಡಿಯಾ   

ಐಶ್ವರ್ಯ ಮನೆಯಿಂದ ಆಚೆ ಬರಲು ಮೊದಲ ಕಾರಣ ಏನಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಇದೀಗ ಆ ವಿಚಾರ ರಿವೀಲ್‌ ಆಗಿದೆ.  ​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಐಶ್ವರ್ಯ ಎಲ್ಲರ ಜೊತೆಗೆ ಮಾತಾಡುತ್ತಿದ್ದರು.. ಅದಾದ್ಮೇಲೆ ಎಲ್ಲರ ಜೊತೆ ಅಷ್ಟೊಂದಾಗಿ ಕಾಲ ಕಳಿತಾ ಇರ್ಲಿಲ್ಲ.. ಆದ್ರೆ ದಿನ ಕಳೆದಂತೆ ಕೆಲವೊಂದು ಸ್ಪರ್ಧಿಗಳ ವಿರುದ್ಧ ಬೇಸರ ಹೊರ ಹಾಕಿದ್ದರು. ಇದೇ ಕಾರಣದಿಂದ ಸ್ಪರ್ಧಿಗಳು ಐಶ್ವರ್ಯಾ ಅವರನ್ನು ನಾಮಿನೇಟ್ ಮಾಡುತ್ತಿದ್ದರು.

ಐಶ್ವರ್ಯಾ ಸಿಂಧೋಗಿ ಬಿಗ್​ಬಾಸ್​ ಮನೆಯಲ್ಲಿ ಅಷ್ಟಾಗಿ ಮನರಂಜನೆ  ನೀಡಲಿಲ್ಲ. ಎಲ್ಲೂ ಸಹ ಅಷ್ಟಾಗಿ ಕಾಣಿಸಿಕೊಂಡಿದಿಲ್ಲ. ಜಗಳ ಅಂತ ಬಂದರೆ ಸೈಲೆಂಟ್​ ಆಗುತ್ತಿದ್ದರು ಐಶ್ವರ್ಯಾ. ಇದನ್ನೂ ಈ ವಿಚಾರಕ್ಕೂ ಮನೆಮಂದಿ ನಾಮಿನೇಟ್ ಮಾಡಿದ್ದರು. ಇದು ಕೂಡ ಎಲಿಮಿನೇಟ್‌ ಆಗಲು ಪ್ರಮುಖ ಕಾರಣವಾಗಿದೆ.

ಇನ್ನು ಬಿಗ್​ಬಾಸ್​ ಮನೆಯಲ್ಲಿ ಭವ್ಯಾ ಗೌಡ ಹಾಗೂ ತ್ರಿವಿಕ್ರಮ್​ ಜೊತೆ ಆಗಾಗ ಗಲಾಟೆ ಮಾಡಿಕೊಂಡಿಳ್ತಿದ್ರು ಐಶ್ವರ್ಯಾ. ಅಲ್ಲದೇ ಮಂಜಣ್ಣ ಅವರ ಜೊತೆಗೆ ಗಲಾಟೆ ಮಾಡಿಕೊಂಡಿದ್ದರು. ಇದು ವೀಕ್ಷಕರಲ್ಲಿ ಕಿರಿಕಿರಿ ಉಂಟು ಮಾಡಿತ್ತು. ಈ ಬಗ್ಗೆ ವೀಕ್ಷಕರು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಕೂಡ ಮಾಡಿದ್ರು. ಆದಷ್ಟು ಬೇಗ ಮನೆಯಿಂದ ಆಚೆ ಕಳುಹಿಸಿ ಅನ್ನೋ ಅಭಿಪ್ರಾಯ ಕೂಡ ಕೇಳಿಬಂದಿತ್ತು. ಇದು ಕೂಡ ಐಶ್ವರ್ಯಗೆ ಮೈನಸ್‌ ಆಯ್ತು ಅಂತಾ ಹೇಳಲಾಗ್ತಿದೆ.

ಮತ್ತೊಂದು ಕಡೆ ಮನೆಯ ಎಲ್ಲ ಸ್ಪರ್ಧಿಗಳು ಐಶ್ವರ್ಯಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಅಂತ ಹೇಳುತ್ತಲೇ ಬಂದಿದ್ದಾರೆ. ಕೇವಲ ಅಡುಗೆ ಮನೆಯಲ್ಲಿ ಜಾಸ್ತಿ ಇರುತ್ತಾರೆ. ಕ್ಯಾಮೆರಾ ಕಣ್ಣಿಗೆ ಬೀಳಲು ಗಿಮಿಕ್‌ ಮಾಡ್ತಾರೆ ಅಂತಾ ಸಹಸ್ಪರ್ಧಿಗಳು ಆರೋಪಗಳನ್ನ  ಮಾಡಿದ್ದರು. ಇದು ಕೂಡ ಎಲಿಮಿನೇಟ್‌ ಆಗಲು ಕಾರಣ ಅಂತಾ ಹೇಳಲಾಗ್ತಿದೆ.

ಇನ್ನೊಂದ್ಕಡೆ  ಬರೀ ಶಿಶರ್​ ಹಾಗೂ ಮೋಕ್ಷಿತಾ ಬಳಿಯೇ ಇರುತ್ತಾರೆ. ಅಷ್ಟಾಗಿ ಯಾವ ಸ್ಪರ್ಧಿಗಳ ಜೊತೆಗೂ ಐಶ್ವರ್ಯಾ ಮಾತಾಡೋದಿಲ್ಲ ಅನ್ನೋ ಅಭಿಪ್ರಾಯ ಕೇಳಿ ಬಂದಿತ್ತು. ಈ ಬಗ್ಗೆ ಸುದೀಪ್‌ ಕೂಡ ಎಚ್ಚರಿಕೆ ನೀಡಿದ್ರು.. ಆದ್ರೆ ಐಶ್ವರ್ಯ ಅಷ್ಟೊಂದಾಗಿ ಈ ಬಗ್ಗೆ ತಲೆಕೆಡಿಸಿಕೊಂಡಿರ್ಲಿಲ್ಲ.. ಅದಷ್ಟೇ ಅಲ್ಲದೇ ಸಣ್ಣ ಸಣ್ಣ ವಿಚಾರಕ್ಕೂ ಕಣ್ಣೀರು ಹಾಕುತ್ತಿದ್ದರು. ಈ ಕಾರಣಗಳಿಂದ ಐಶ್ವರ್ಯಾ ಬಿಗ್​ಬಾಸ್​ ಮನೆಯಿಂದ ಆಚೆ ಬಂದಿದ್ದಾರೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.

 

Shwetha M

Leave a Reply

Your email address will not be published. Required fields are marked *