ಹೋಗಿ ಬಾ ಮಗಳೇ!! – ಐಶ್ವರ್ಯಗೆ ಬಿಗ್ ಬಾಸ್ ಭಾವುಕ ವಿದಾಯ
ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 90 ದಿನಗಳು ಕಳೆದಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಇದೆ. ಆಟ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆಯುತ್ತಿದೆ. ಈ ಸೀಸನ್‌ನಲ್ಲಿ ಟಾಪ್ 5 ರಲ್ಲಿ ಯಾರಿರ್ತಾರೆ ಅನ್ನೋದನ್ನ ಊಹಿಸೋದು ಕಷ್ಟ ಆಗ್ತಿದೆ. ಈ ವಾರ ಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಮನೆಯಿಂದ ಹೊರಡುತ್ತಿದ್ದಂತೆ ಐಶ್ವರ್ಯಗೆ ಬಿಗ್‌ಬಾಸ್ ಭಾವುಕ ವಿದಾಯ ನೀಡಿದ್ದಾರೆ.. ಹೋಗಿ ಬಾ ಮಗಳೇ ಅಂತಾ ಹೇಳಿದ್ದಾರೆ ಬಿಗ್‌ಬಾಸ್. ಹಾಗಾದ್ರೆ ಐಶ್ವರ್ಯ ಎಲಿಮಿನೇಟ್ ಆಗಲು ಕಾರಣವಾದ ಅಂಶಗಳೇನು? ಸುದೀಪ್ ಬಳಿ ಐಶು ಡಿಮ್ಯಾಂಡ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ತ್ರಿವಿಕ್ರಮ್ ಹಾಗೂ ಮಂಜು ಮಧ್ಯೆ ಟಾಕ್ ವಾರ್ – ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?
ಬಿಗ್ ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಕುತೂಹಲ ಮೂಡಿಸಿದೆ. ಶೋ ಫಿನಾಲೆ ಹಂತಕ್ಕೆ ಬಂದ್ರೂ ಯಾರು ಟಾಪ್ 5 ನಲ್ಲಿ ಬರ್ತಾರೆ ಅಂತ ಊಹಿಸೋದೇ ಕಷ್ಟವಾಗ್ತಿದೆ.. ಈ ವಾರ ಪ್ರಬಲ ಸ್ಪರ್ಧಿಗಳೇ ನಾಮಿನೇಟ್ ಆಗಿದ್ರು..ಅದ್ರಲ್ಲಿಗ ಐಶ್ವರ್ಯ ಸಿಂಧೋಗಿ ಮನೆಯಿಂದ ಆಚೆ ಬಂದಿದ್ದಾರೆ..
ಹೌದು, ಬಿಗ್‌ಬಾಸ್ ಮನೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು ಐಶ್ವರ್ಯಾ ಸಿಂಧೋಗಿ. ಮೊದಲು ದಿನದಿಂದಲೂ ಬಿಗ್‌ಬಾಸ್ ಮನೆಯಲ್ಲಿ ಐಶ್ವರ್ಯ ಹೈಲೈಟ್ ಆಗಿದ್ರು.. ಶಿಶಿರ್ ಜೊತೆಗೆ ಹೆಚ್ಚು ಕ್ಲೋಸ್ ಆಗಿದ್ರು.. ಆದ್ರೆ ಕಳೆದ ಕೆಲವು ವಾರಗಳಿಂದ ಐಶ್ವರ್ಯಾ ಸಿಂಧೋಗಿ ಬಾಟಂ 2ನಲ್ಲೇ ಇರುತ್ತಿದ್ದರು. ಹೊಸ ವರ್ಷದ ಹೊಸ್ತಿಲಿನಲ್ಲೇ ಐಶ್ವರ್ಯ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ದೊಡ್ನನೆಯಿಂದ ಹೊರಡುತ್ತಿದ್ದಂತೆ ಬಿಗ್ ಬಾಸ್ ಹೋಗಿ ಬಾ ಮಗಳೇ ಎಂದು ಭಾವುಕ ವಿದಾಯ ಹೇಳಿದ್ದಾರೆ.
ಐಶ್ವರ್ಯಾ ತಂದೆ-ತಾಯಿ ಇಲ್ಲದ ಹುಡುಗಿ. ಇದೀಗ ಕಾರಣದಿಂದಾಗಿಯೇ ಬಿಗ್ ಬಾಸ್ ಮನೆಯಲ್ಲಿ ಆಗಾಗ ಕುಗ್ಗುತ್ತಿದ್ರು.. ಆಗ ಐಶ್ವರ್ಯಗೆ ಬಿಗ್ ಬಾಸ್ ಸಾಂತ್ವಾನ ಹೇಳಿದ್ದೂ ಇದೆ. ಎಲಿಮಿನೇಟ್ ಆದಾಗ ಐಶ್ವರ್ಯರನ್ನ ಅಕ್ಕರೆಯಿಂದ ಬೀಳ್ಕೊಟ್ಟಿದೆ. ಬಿಗ್‌ಬಾಸ್‌ನಿಂದ ಹೊರಬರುವುದಕ್ಕೂ ಮುನ್ನ ಒಂದು ಪತ್ರ ನೀಡಲಾಗಿತ್ತು. ಪತ್ರದಲ್ಲಿ “ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್‌ಬಾಸ್ ಮನೆಯ ಸ್ಪರ್ಧಿಯಾಗಿ, ಈ ಮನೆಯಲ್ಲಿ ಇದ್ದಿದ್ದು ಸಂತೋಷದ ವಿಷಯ. ತುಸು ಬೇಸರವಿದ್ದರೂ, ನಗು, ದುಃಖ, ಕೋಪ, ತುಂಟಾಟ ಹೀಗೆ ನಿಮ್ಮೆಲ್ಲಾ ಭಾವನೆಗಳಿಗೆ ಸಾಕ್ಷಿಯಾದ ಮನೆಯಿಂದ ಕಳಿಸಿಕೊಡಬೇಕಾಗಿದೆ. ಐಶ್ವರ್ಯಾ, ಹೋಗಿ ಬಾ ಮಗಳೇ! ಎಂದು ಪತ್ರದಲ್ಲಿ ಬರೆಯಲಾಗಿತ್ತು. ಅದನ್ನು ಓದುತ್ತಾ ಐಶ್ವರ್ಯಾ ಕಣ್ಣೀರು ಕೂಡ ಹಾಕಿದ್ರು. ಬಳಿಕ ಪತ್ರದ ಮೂಲಕ ಸೆಂಡ್‌ಆಫ್ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದ್ರು. ನಾನು ಮುದುಕಿಯಾದರೂ ಇವರೆಲ್ಲ ನನ್ನ ಕುಟುಂಬ. ಸುಮಾರು 13 ವಾರ ನಾನು ಈ ಸ್ಪರ್ಧಿಗಳ ಜೊತೆ ಕಾಲ ಕಳೆದಿದ್ದೇನೆ. ಈ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ಮನೆಯ ಗೇಟ್ ಬಳಿ ಬಂದಾಗಲೂ ಹೋಗಿ ಬಾ ಮಗಳೇ.. ಎಂದು ಐಶ್ವರ್ಯಾ ಗೆ ಬಿಗ್‌ಬಾಸ್ ಹೇಳಿದ್ದಾರೆ.
ಇನ್ನು ಸುದೀಪ್ ಮುಂದೆ ಐಶ್ವರ್ಯ ಒಂದು ಆಸೆಯನ್ನ ಬಿಚ್ಚಿಟ್ಟಿದ್ದಾರೆ. ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕು. ಯಾವ ಪಾತ್ರವಾದರೂ ಪರವಾಗಿಲ್ಲ ಎಂದು ಐಶ್ವರ್ಯಾ ಅವರು ಸುದೀಪ್ ಎದುರು ತಮ್ಮ ಆಸೆಯನ್ನು ಹೇಳಿಕೊಂಡರು. ಅದಕ್ಕೆ ಸುದೀಪ್ ಕೂಡ ಓಕೆ ಅಂತಾ ಹೇಳಿದ್ದಾರೆ. ಇದೀಗ ಸುದೀಪ್ ಐಶ್ವರ್ಯಗೆ ಯಾವ ಸಿನಿಮಾದಲ್ಲಿ ಚಾನ್ಸ್ ನೀಡ್ತಾರೆ ಎಂಬುದನ್ನು ಕಾದು ನೋಡಬೇಕು.