ಐಶ್, ಅಭಿಗೆ 5 ತಿಂಗಳು ಕಷ್ಟ.. ಕಷ್ಟ..! – ಅಭಿಷೇಕ್ ದಾಂಪತ್ಯದ ಶಾಕಿಂಗ್ ಭವಿಷ್ಯ

ಐಶ್, ಅಭಿಗೆ 5 ತಿಂಗಳು ಕಷ್ಟ.. ಕಷ್ಟ..! – ಅಭಿಷೇಕ್ ದಾಂಪತ್ಯದ ಶಾಕಿಂಗ್ ಭವಿಷ್ಯ

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್.. ಸದ್ಯ ಬಿಟೌನ್ ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಕೂತ್ರೂ ನಿಂತ್ರೂ ಸುದ್ದಿಯಲ್ಲಿರ್ತಾರೆ. ಐಶ್ ಅಭಿ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ. ಆದಷ್ಟು ಬೇಗ ಈ ಸೆಲೆಬ್ರಿಟಿ ಜೋಡಿ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಗಾಸಿಪ್ ಆಗಾಗ ಕೇಳಿಬರ್ತಿದೆ. ಇತ್ತೀಚೆಗಷ್ಟೇ ಐಶ್ವರ್ಯ ದಂಪತಿ ಮಗಳೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ರು.. ಇದ್ರ ಫೋಟೋ.. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿತ್ತು. ಈ ದಂಪತಿ ಚೆನ್ನಾಗೇ ಇದ್ದಾರೆ. ಇವರಿಬ್ರ ಮಧ್ಯೆ ಎಲ್ಲವೂ ಸರಿಯಿದೆ ಅಂತಾ ಫ್ಯಾನ್ಸ್ ಮಾತಾಡ್ಕೊಂಡಿದ್ರು. ಆದ್ರೀಗ ಖ್ಯಾತ ಜ್ಯೋತಿಷಿಯೊಬ್ರು ಐಶ್, ಅಭಿ ದಾಂಪತ್ಯದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಇನ್ನು ಐದು ತಿಂಗಳು ಐಶ್ ದಾಂಪತ್ಯ ಜೀವನದಲ್ಲಿ ಸಾಕಷ್ಟು ಕಷ್ಟಗಳು ಬರೋ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.

ಇದನ್ನೂ ಓದಿ: ಜಾಹೀರಾತಿನಲ್ಲಿ ಆರ್ ಸಿಬಿ ಬಗ್ಗೆ ಅವಹೇಳನ – ಟ್ರಾವಿಸ್ ಹೆಡ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಫ್ರಾಂಚೈಸಿ!

ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಅನ್ನೋ ಗಾಸಿಪ್ ಹರಿದಾಡ್ತಿರೋ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಈ ದಂಪತಿ ಈ ಬಗ್ಗೆ ಎಲ್ಲೂ ಸ್ಪಷ್ಟನೆ ಕೊಟ್ಟಿಲ್ಲ.. ತಾವಾಯ್ತು.. ತಮ್ಮ ಕೆಲ್ಸ ಆಯ್ತು ಅಂತಾ ಇದ್ದಾರೆ. ಸೆಲೆಬ್ರಿಟಿ ಜೋಡಿ ಅಂದ್ಮೇಲೆ ಹೀಗೆ ಅಲ್ವಾ? ಒಟ್ಟಿಗೆ ಕಾಣಿಸಿಕೊಂಡ್ರು, ಒಟ್ಟಿಗೆ ಬಂದಿಲ್ಲ ಅಂದ್ರೂ ಚರ್ಚೆಯಲ್ಲಿರ್ತಾರೆ. ಐಶ್ ಅಭಿ ವಿಚಾರದಲ್ಲೂ ಹೀಗೆ ಆಗಿರೋದು.  ಅಭಿಷೇಕ್ ಹಾಗೂ ಐಶ್ವರ್ಯ ದಾಂಪತ್ಯ ಜೀವನ ಬಿರುಕು ಬಿದ್ದಿದೆ,  ಇಬ್ಬರು ಬೇರೆಯಾಗುತ್ತಿದ್ದಾರೆ ಅನ್ನೋ ವರದಿಗಳು ಕೇಳಿಬಂದಿತ್ತು. ಕಳೆದ ಕೆಲ ದಿನಗಳಿಂದ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡು ಈ ಊಹಾಪೋಹಗಳಿಗೆ ಬ್ರೇಕ್ ಹಾಕಿತ್ತು. ಆದ್ರೀಗ ಇವ್ರ  ದಾಂಪತ್ಯ ಜೀವನದ ಸಮಸ್ಯೆ ಮುಗಿದಿಲ್ಲ, ಸೆಪ್ಟೆಂಬರ್ ವರೆಗೆ ಈ ದಂಪತಿ ಸಾಕಷ್ಟು ಸಂಕಷ್ಟ ಎದುರಿಸಲಿದ್ದಾರೆ ಅಂತಾ ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿ ಹೇಳಿದ್ದಾರೆ.

ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿ ಗೀತಾಂಜಲಿ ಸಕ್ಸೇನ್ ಇತ್ತೀಚೆಗೆ ಸಿದ್ದಾರ್ಥ ಖನ್ನಾ ನಡೆಸಿಕೊಡುವ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಹಲವು ಬಾಲಿವುಡ್ ಸೆಲೆಬ್ರೆಟಿಗಳ ರಿಲೇಷನ್ ಶಿಪ್‌ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಪೈಕಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಗ್ಗೆ ಮಾತನಾಡಿದ್ದಾರೆ. ಡಾ. ಗೀತಾಂಜಲಿ ಸಕ್ಸೇನಾ ಪ್ರಕಾರ, ಸದ್ಯ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ದಾಂಪತ್ಯ ಕಲಹ ತಣ್ಣಾಗಾಗಿದ್ದರೂ ಅವರ ಕಂಟಕ ಸೆಪ್ಟೆಂಬರ್ ತನಕ ಮುಂದುವರಿಯಲಿದೆ ಹೇಳಿದ್ದಾರೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಅವರ ಕುಂಡಲಿ, ಸಂಖ್ಯೆಗಳ ಪ್ರಕಾರ ಸೆಪ್ಟೆಂಬರ್ ವರಗೆ ಗಂಡಾಂತರ ಇದೆ. ಸೆಪ್ಟೆಂಬರ್ ವರೆಗೆ ಈ ಜೋಡಿ ಎಲ್ಲವನ್ನೂ ನಿಭಾಯಿಸಿದ್ರೆ, ತಾಳ್ಮೆಯಿಂದ ಇದ್ರೆ ಮುಂದಿನ ಬದುಕು ಸುಂದರ ವಾಗಲಿ..  ಸೆಪ್ಟೆಂಬರ್ ವರೆಗೆ ಈ ಜೋಡಿ ಹಲವು ಸಮಸ್ಯೆಗಳನ್ನು ಮಾನಸಿಕವಾಗಿ ಎದುರಿಸಲಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಜೊತೆಯಾಗಿದ್ದರೆ ಮುಂದಿನ ಬಾಳು ಸುಂದರವವಾಗಲಿದೆ, ಹಾಗೇ, ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ನಡುವಿನ ದಾಂಪತ್ಯ ಕಲಹಕ್ಕೆ ಭಾವನಾತ್ಮಕ ಕಾರಣಗಳಿಲ್ಲ. ಇದು ಆರಂಭಗೊಂಡಿದ್ದು ಆರ್ಥಿಕವಾಗಿ ಕೆಲ ವಾದ ವಿವಾದಗಳ ಮೂಲಕ ಎಂದು ಡಾ.ಗೀತಾಂಜಲಿ ಸಕ್ಸೇನಾ ಭವಿಷ್ಯ ನುಡಿದಿದ್ದಾರೆ. ಇದರ ಜೊತೆಗೆ ಕೂಡು ಕುಟುಂಬದ ಮಾನಸಿಕ ಸಮಸ್ಯೆಗಳು, ಕೆಲ ಅಡೆ ತಡೆಗಳು, ರೀತು ರಿವಾಜು, ಮಾತುಗಳು ಸೇರಿಕೊಂಡಿದೆ. ಇದರಿಂದ ದಾಂಪತ್ಯ ಕಲಹ ಹೆಚ್ಚಾಗಿತ್ತು ಎಂದಿದ್ದಾರೆ.

ಇನ್ನು ಐಶ್‌ ಅಭಿ ದಾಂಪತ್ಯ ಜೀವನ ಸರಿ ಹೋಗಲು ಗೀತಾಂಜಲಿ ಕೆಲವೊಂದು ಸಲಹೆಗಳನ್ನ ನೀಡಿದ್ದಾರೆ. ಈ ಪೈಕಿ ಪ್ರಮುಖವಾಗಿ ಈ ಜೋಡಿ ಕೂಡು ಕುಟುಂಬ ಬಿಟ್ಟು ಪ್ರತ್ಯೇಕವಾಗಬೇಕು ಎಂದಿದ್ದಾರೆ. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಹಾಗೂ ಪುತ್ರಿ ಆರಾಧ್ಯ ಬೇರೆ ಇರ್ಬೇಕು. ಇದ್ರಿಂದಾಗಿ ಅವ್ರ ಸಮಸ್ಯೆಗೆ ಅರ್ಧ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ. ಇದೀಗ ಈ  ಜ್ಯೋತಿಷಿ ಭವಿಷ್ಯದ ಬಗ್ಗೆ ಐಶ್ವರ್ಯ ಹಾಗೂ ಅಭಿಷೇಕ್‌ ರಿಯಾಕ್ಟ್‌ ಮಾಡ್ತಾರಾ ಅಂತಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *