ವಿಮಾನದಲ್ಲಿನ ಶೌಚಾಲಯದ ಡೋರ್ ಲಾಕ್! – ಟಾಯ್ಲೆಟ್ ಕಮೋಡ್ ನಲ್ಲೇ ಕುಳಿತು ಪ್ರಯಾಣಿಸಿದ ವ್ಯಕ್ತಿ!
ವಿಮಾನ ಪ್ರಯಾಣದ ವೇಳೆ ಸಣ್ಣ ಪುಟ್ಟ ಎಡವಟ್ಟುಗಳು ನಡೆಯುತ್ತಿರುತ್ತವೆ. ಇದು ಪ್ರಯಾಣಿಕರನ್ನು ಪೇಚಿಗೆ ಸಿಲುಕುವಂತೆ ಮಾಡುತ್ತವೆ. ಇದೀಗ ಇಲ್ಲೊಂದು ವಿಮಾನದಲ್ಲಿ ಆತಂಕಕಾರಿ ಘಟನೆ ನಡೆದಿದೆ. ವಿಮಾನದ ಶೌಚಾಲಯದ ಡೋರ್ ಲಾಕ್ ಆಗಿದ್ದು, ಪ್ರಯಾಣಿಕ ವಿಮಾನದ ಶೌಚಾಲಯದಲ್ಲೇ ಕುಳಿತು ಪ್ರಯಾಣಿಸುವಂತೆ ಆಗಿದೆ.
ಹೌದು, ಈ ಘಟನೆ ಮುಂಬೈನಿಂದ-ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಸಂಭವಿಸಿದೆ. ಮುಂಬೈನಿಂದ ಸ್ಪೈಸ್ ಜೆಟ್-268 ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವ ವೇಳೆ ಪ್ರಯಾಣಿಕನೊರ್ವ ಟಾಯ್ಲೆಟ್‌ಗೆ ಅಂತ ಹೋಗಿದ್ದಾನೆ. ಈ ವೇಳೆ ಬಂದ್ ಆದ ಬಾಗಿಲು ಮತ್ತೆ ಓಪನ್ ಮಾಡಲು ಸಾಧ್ಯ ಆಗಿಲ್ಲ. ಹೀಗಾಗಿ ಪ್ರಯಾಣಿಕ ಗಂಟೆಗಟ್ಟಲೆ ಟಾಯ್ಲೆಟ್‌ನಲ್ಲೇ ಕುಳಿತು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾನೆ.
ಇದನ್ನೂ ಓದಿ: ಇಲ್ಲಿ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆಯೇ ಹೆಚ್ಚು! – ಮೂಷಿಕನ ಕಾಟಕ್ಕೆ ಕಂಗಾಲಾದ ಬ್ರಿಟಿಷರು!
ಟಾಯ್ಲೆಟ್‌ನ ಬಾಗಿಲು ತೆರೆಯಲು ಸಾಧ್ಯವಾಗದೇ ಇದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿದ್ದಾನೆ. ವಿಮಾನದ ಸಿಬ್ಬಂದಿ ಸಹ ಹೊರಗಿನಿಂದ ಎಷ್ಟೇ ಪ್ರಯತ್ನ ಮಾಡಿದರೂ ಬಾಗಿಲು ತೆರೆಯಲಾಗಿಲ್ಲ. ಕೊನೆಗೆ ಬೆಂಗಳೂರು ಏರ್ಪೋರ್ಟ್‍ನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಇಂಜಿನಿಯರ್‌ಗಳನ್ನ ಕರೆಸಿ ಡೋರ್ ಓಪನ್ ಮಾಡಿಸಿ ಪ್ರಯಾಣಿಕನನ್ನ ಹೊರಗೆ ಕರೆತರಲಾಯಿತು.
ಇನ್ನೂ ಪ್ರಯಾಣಿಕನಿಗೆ ಸಣ್ಣದಾದ ಚೀಟಿ ಮೂಲಕ ಸರ್ ಬಾಗಿಲು ತೆರೆಯಲು ಸಾಕಷ್ಟು ಪ್ರಯತ್ನ ಮಾಡಿದ್ದು ಸಾಧ್ಯವಾಗಲಿಲ್ಲ, ದಯಮಾಡಿ ಆತಂಕಕ್ಕೆ ಒಳಗಾಗಬೇಡಿ, ಟಾಯ್ಲೆಟ್‌ನ ಕಮೋಡ್ ಮೇಲೆ ಕುಳಿತುಕೊಳ್ಳಿ, ಇಂಜಿನಿಯರ್ ಬಂದ ನಂತರ ಡೋರ್ ತೆರೆಸಲಾಗವುದು, ಗಾಬರಿಗೊಳ್ಳಬೇಡಿ ಅಂತ ಸಂದೇಶ ರವಾನೆ ಮಾಡಿದ್ದಾರೆ. ಈ ಸಂಬಂಧ ಸ್ಪೈಸ್ ಜೆಟ್ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ.